ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

kundapura ಗಂಗೊಳ್ಳಿಯಲ್ಲಿ 23ನೇ ವರ್ಷದ ನೋಟ್ಸ್ ಬುಕ್ ವಿತರಣೆ ಹಾಗೂ ವಿದ್ಯಾರ್ಥಿ ಪುರಸ್ಕಾರ ಕಾರ್ಯಕ್ರಮ ಯಶಸ್ವಿ

kundapura ಗಂಗೊಳ್ಳಿಯಲ್ಲಿ 23ನೇ ವರ್ಷದ ನೋಟ್ಸ್ ಬುಕ್ ವಿತರಣೆ ಹಾಗೂ ವಿದ್ಯಾರ್ಥಿ ಪುರಸ್ಕಾರ ಕಾರ್ಯಕ್ರಮ ಯಶಸ್ವಿ

ಕುಂದಾಪುರ: ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಕುಂದಾಪುರ ತಾಲೂಕಿನ ಗಂಗೊಳ್ಳಿ ಶ್ರೀ ಜಟ್ಟಿಗೇಶ್ವರ ಯೂತ್ ಕ್ಲಬ್ (ರಿ), ಲೈಟ್‌ಹೌಸ್ ಗಂಗೊಳ್ಳಿ ಇವರ ಸಹಯೋಗದಲ್ಲಿ 23ನೇ ವರ್ಷದ ನೋಟ್ಸ್ ಬುಕ್ ವಿತರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ದಿವಂಗತ ಎ ಬಿ ಗೋರ್ತಿ ಯವರ ಸ್ಮರಣಾರ್ಥ ಅವರ ಮಗ ಶ್ರೀಧರ್ ಗೋರ್ತಿ ಉದ್ಯಮಿ ಮುಂಬೈಯವರು ಮಕ್ಕಳಿಗೆ ನೋಟ್ಸ್ ಬುಕ್ ನೀಡುವ ಮೂಲಕ ಮಾನವತೆಯ ಕಾರ್ಯಕ್ಕೆ ಸಹಕರಿಸಿದರು 
ಕಾರ್ಯಕ್ರಮದಲ್ಲಿ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್ ಬುಕ್‌ಗಳನ್ನು ವಿತರಿಸಲಾಯಿತು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಪವನ್ ನಾಯಕ್ ಉಪಸ್ಥಿತಿಯಲ್ಲಿ ನೆರವೇರಿ ಮಾತನಾಡಿದ ಅವರು ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು ಮತ್ತು ಮೊಬೈಲ್ ಬಳಕೆ ಮಕ್ಕಳಿಗೆ ನೀಡ ದಂತೆ ಪೋಷಕರಲ್ಲಿ ಮನವಿ ಮಾಡಿಕೊಂಡರು 

ಶ್ರೀ ಜಟ್ಟಿಗೇಶ್ವರ ಯೂತ್ ಕ್ಲಬ್ (ರಿ), ಲೈಟ್‌ಹೌಸ್ ಗಂಗೊಳ್ಳಿ ಇವರ ಅಧ್ಯಕ್ಷ ಚಂದ್ರ ಖಾರ್ವಿ ಅವರು ವಿದ್ಯಾರ್ಥಿಗಳಿಗೆ ನೋಟ್ಸ್ ಬುಕ್ , ವಿತರಣೆ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಗೌರವದ ಸನ್ಮಾನ್ಯ ನೆರವೇರಿಸಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಹಾಗೂ ಕಾರ್ಯಕ್ರಮಕ್ಕೆ ಬಂದವರಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ರಾಜೇಂದ್ರ ಶೇರಿಗಾರ್, ಗೋಪಾಲ್ ಪೂಜಾರಿ ಗಂಗೊಳ್ಳಿ, ಚಂದ್ರ ಕೆ ಖಾರ್ವಿ, ಸುರೇಶ್ ಶಾನುಭಾಗ್ ರೋಹಿತ್ ಖಾರ್ವಿ ಚಂದ್ರಕಲಾ ಎಸ್ ತಾಂಡೇಲ ಮಡಿ ಮಾಧವ್ ಖಾರ್ವಿ ಜಯಂತಿ ಜಿ ಖಾರ್ವಿ ಸೇರಿದಂತೆ
ಮುಖ್ಯ ಅತಿಥಿಗಳು ಹಾಗೂ ಗಣ್ಯರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿದರು. ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಪ್ರಮುಖ ಸಾಧನವಾಗಿದ್ದು, ವಿದ್ಯಾರ್ಥಿಗಳು ಉತ್ತಮ ಗುರಿಯನ್ನು ಹೊಂದಿ ಶ್ರಮವಹಿಸಬೇಕು ಎಂದು ಕರೆ ನೀಡಿದರು.
2025 26 ನೇ ಸಾಲಿನ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 8ನೇ ಸ್ಥಾನ ಪಡೆದು ಪೋಷಕರಿಗೆ ಹಾಗೂ ಊರಿಗೆ ಮತ್ತು ಶಿಕ್ಷಕರಿಗೆ ಗೌರವ ತಂದಂತ ಕುಮಾರಿ ಸಿಂಧು ಖಾರ್ವಿ ಅವರಿಗೆ ಸೇರಿದಂತೆ ಇನ್ನು ಮೂರು ವಿದ್ಯಾರ್ಥಿಗಳಿಗೆ ಸನ್ಮಾನದ ಜೊತೆಗೆ ಪುರಸ್ಕಾರ ನೀಡಿ ಗೌರವಿಸಲಾಯಿತು 
ಕಳೆದ 35 ವರ್ಷಗಳಿಂದ ಶ್ರೀ ಜಟ್ಟಿಗೇಶ್ವರ ಯೂತ್ ಕ್ಲಬ್ ಹಲವು ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಈ ಬಾರಿಯೂ ನೂರಾರು ವಿದ್ಯಾರ್ಥಿಗಳಿಗೆ ನೋಟ್ಸ್ ಬುಕ್ ವಿತರಿಸುವ ಮೂಲಕ ಶಿಕ್ಷಣ ಸೇವೆಯನ್ನು ಮುಂದುವರಿಸಿದೆ.
ಕಾರ್ಯಕ್ರಮದಲ್ಲಿ ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಪ್ರಾರ್ಥನೆ ಅನುಷಾ ಖಾರ್ವಿ 
ಸ್ವಾಗತ ಭಾಷಣ ನಿಶಾ ಖಾರ್ವಿ ನಿರೂಪಣೆ ಹಾಗೂ ಧನ್ಯವಾದ ಸುಂದರ್ ಗಂಗೊಳ್ಳಿ ವಂದಿಸಿದರು

Ads on article

Advertise in articles 1

advertising articles 2

Advertise under the article