ಕುಂದಾಪುರ: ಮೋಜು - ಮಸ್ತಿ ಮಾಡಲು ಸಮುದ್ರಕ್ಕೆ ಈಜಲು ಹೋದ ಬೆಂಗಳೂರಿನ ನಾಲ್ವರು ಯುವಕರು ನೀರು ಪಾಲು, ಓರ್ವನ ರಕ್ಷಣೆ,ಇಬ್ಬರು ಮೃತ್ಯು, ಇನ್ನೊರ್ವ ನಾಪತ್ತೆ.
Sunday, September 7, 2025
ಕುಂದಾಪುರ: ಇತ್ತೀಚಿನ ದಿನಗಳಲ್ಲಿ ಕರಾವಳಿ ಭಾಗಕ್ಕೆ ಪ್ರವಾಸಿಗರು ಹಾಗೂ ದೂರ ಊರಿನಿಂದ ಬಂದಂತಹ ಜನರು ಮೋಜು ಮಸ್ತಿ ಮಾಡುವ ನಿಟ್ಟಿನಲ್ಲಿ ಒಂದರ ಮೇಲೊಂದು ಒಂದು ಅನಾಹುತದ ಘಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದ ವೇಳೆ ಗೋಪಾಡಿ ಸಮುದ್ರಕ್ಕೆ ಈಜಲು ಹೋದ ಬೆಂಗಳೂರಿನ ನಾಲ್ವರು ಯುವಕರು ನೀರುಪಾಲಾಗಿ ಇಬ್ಬರು ಮೃತಪಟ್ಟು ಓರ್ವ ನಾಪತ್ತೆಯಾಗಿ ಇನ್ನೊರ್ವ ನನ್ನು ರಕ್ಷಿಸಿದ ಘಟನೆ ಕುಂದಾಪುರ ತಾಲೂಕಿನ ಗೋಪಾಡಿ ಚೆರ್ಕಿ ಕಡು ಎಂಬಲ್ಲಿ ಸೆ. 7 ರಂದು ಭಾನುವಾರ ಮಧ್ಯಾಹ್ನ ಸಂಭವಿಸಿದೆ.
ಬೆಂಗಳೂರಿಂದ ಬಂದಿದ್ದ 10 ಮಂದಿ ಯುವಕರ ತಂಡವು ಕುಂಬಾಶಿಯ ಗಾಯಿತ್ರಿ ಕಾಂಪೌಂರ್ಟ್ ನಲ್ಲಿ ತಂಗಿದ್ದು ಇಂದು ಮಧ್ಯಾಹ್ನ 9 ಮಂದಿ ಯುವಕರು ಸಮುದ್ರ ಸ್ನಾನ ಮಾಡಲೆಂದು ಗೋಪಾಡಿ ಚೆರ್ಕಿ ಕಡು ಎಂಬಲ್ಲಿ ಸಮುದ್ರಕ್ಕೆ ಇಳಿದ್ದಿದ್ದಾರೆ.
ಸಮುದ್ರದ ಅಬ್ಬರದ ಅಲೆಗೆ ಸಿಲುಕಿ ನಾಲ್ವರು ಕೊಚ್ಚಿ ಹೋಗಿದ್ದು ಓರ್ವನನ್ನು ತಕ್ಷಣ ಸ್ಥಳೀಯರು ಹಾಗೂ ಜೊತೆಗೆ ಇದ್ದ ಯುವಕರು ಸೇರಿ ಎತ್ತಿ ಮೇಲಕ್ಕೆ ತಂದಿದ್ದಾರೆ. ಆದರೆ ಆತ ಗಂಭೀರ ಗೊಂಡಿದ್ದು ತಕ್ಷಣ ಮಣಿಪಾಲ ಆಸ್ಪತ್ರೆಗೆ ಕಳಿಸಲಾಯಿತು.
ಮುಳುಗು ತಜ್ಞ ಈಶ್ವರ್ ಮಲ್ಪೆ , ಹಾಗೂ ಜೀವನ್ ಮಿತ್ರ ನಾಗರಾಜ್ ಪುತ್ರನ್ ಮತ್ತು ಮುಳುಗುತಜ್ಞ ದಿನೇಶ್ ಖಾರ್ವಿ ರವರು ಸ್ಥಳೀಯರ ಸಹಕಾರದಿಂದ
ಇಬ್ಬರ ಮೃತದೇಹವನ್ನು ಪತ್ತೆ ಹಚ್ಚಲಾಯಿತು.
ಇನ್ನೊರ್ವ ನಾಪತ್ತೆ ಆಗಿದ್ದಾನೆ.
ಅವನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಹೆಚ್ಚಿನ ಮಾಹಿತಿಯನ್ನು ತಿಳಿಯಬೇಕಾಗಿದೆ,
ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ದಳದವರು, ಮುಳುಗು ತಜ್ಞರು, ಆಂಬುಲೆನ್ಸ್ ಚಾಲಕರು, ಸಮಾಜ ಸೇವಕರು
ಮುಖಂ ಹೂಡಿದ್ದಾರೆ