ಸಿದ್ದಾಪುರ: ಏಕಾಏಕಿ ರಸ್ತೆಗೆ ಬಂದ ಕಡವೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು, ಇನ್ನೋರ್ವ ಗಂಭೀರ.
Sunday, September 14, 2025
ಸಿದ್ದಾಪುರ: : ಏಕಾಏಕಿ ರಸ್ತೆಗೆ ಬಂದ ಕಡವೆ , ಚಲಿಸುತ್ತಿದ್ದ ಬೈಕ್ ಗೆ ಕಡವೆ ಅಡ್ಡ ಬಂದು ಢಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿ ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಕುಂದಾಪುರ ತಾಲೂಕಿನ ಸಿದ್ದಾಪುರ ಮುಖ್ಯರಸ್ತೆಯ ಕಮಲಶಿಲೆ ಸಂಪರ್ಕಿಸುವ ಹಣಿ ಮಕ್ಕಿ ಎಂಬಲ್ಲಿ ನಡೆದಿದೆ.
ಕಂಡ್ಲೂರು ಕಾವ್ರಾಡಿ ಗ್ರಾಮದ ಶ್ರೇಯಸ್ ಮೊಗವೀರ (23) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. 
ಗಂಭೀರ ಗಾಯಗೊಂಡ ಸಹಸವಾರ ವಿಶ್ಲೇಶ್ ಎಂದು ಗೊತ್ತಾಗಿದ್ದು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಬ್ಬರು ಸ್ನೇಹಿತರು ಶನಿವಾರ ಮಧ್ಯಾಹ್ನ ಕಮಲಶಿಲೆ ದೇವಸ್ಥಾನಕ್ಕೆ ಹೋಗಿದ್ದು ಅಲ್ಲಿಂದ ವಾಪಸು ನೆಲ್ಲಿಕಟ್ಟೆಗೆ ಬರುತ್ತಿದ್ದ ಸಂದರ್ಭ ತಾರೆಕುಡ್ಲು ಸಮೀಪ ದೊಡ್ಡ ಕಡವೆ ಯೊಂದು ಬೈಕ್ ಗೆ ಒಮ್ಮೆಲೇ ಅಡ್ಡ ಬಂದಿತ್ತು. ಪರಿಣಾಮ ಕಡವೆಗೆ ಡಿಕ್ಕಿ ಸಂಭವಿಸಿ ಈ ದುರಂತ ಸಂಭವಿಸಿದೆ. ಶಂಕರನಾರಾಯಣ ಠಾಣೆಯ ಪೊಲೀಸರು , ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ: ಗೋಪಾಲ್ ಕವ್ರಾಡಿ ಕೋಸ್ಟಲ್ ನ್ಯೂಸ್ ಕುಂದಾಪುರ