ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

BREAKING NEWS ಬೈಂದೂರು: ಈಜಲು ಹೋದ ಮೂವರು ಬಾಲಕರು ಸಮುದ್ರ ಪಾಲು!!

BREAKING NEWS ಬೈಂದೂರು: ಈಜಲು ಹೋದ ಮೂವರು ಬಾಲಕರು ಸಮುದ್ರ ಪಾಲು!!

ಬೈಂದೂರು: ಮಂಗಳವಾರ ಸಂಜೆ 5:00ಗೆ ವೇಳೆಯಲ್ಲಿ ಈಜಲು ತೆರಳಿದ್ದ ನಾಲ್ವರು ಮಕ್ಕಳಲ್ಲಿ ಮೂವರು ಸಮುದ್ರಪಾಲದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ತು ಬೀಚ್ ನಲ್ಲಿ ದುರ್ಘಟನೆ ನಡೆದಿದೆ.
ಸಂಕೇತ್ (16), ಸೂರಜ್ (15), ಆಶೀಶ್ (14) ನೀರು ಪಾಲಾದವರು.ಮೂವರು ಕೂಡ ಸ್ಥಳೀಯರು ಎಂದು ವರದಿಯಾಗಿದೆ.
ಮಕ್ಕಳ ದೇಹ ಹುಡುಕಲು ಮುಳುಗು ತಜ್ಞ ದಿನೇಶ್ ಖಾರ್ವಿ ತಂಡ ಶೋಧ ಕಾರ್ಯಾಚರಣೆ ಮುಂದುವರಿದಿದೆ, ಹಾಗೂ ಮುಳುಗುತಜ್ಞ ಈಶ್ವರ್ ಮಲ್ಪೆ ಹಾಗೂ ತಂಡದವರು ಘಟನಾ ಸ್ಥಳಕ್ಕೆ ಬರುವುದಾಗಿ ಮಾಹಿತಿ ಲಭ್ಯವಾಗಿದೆ, 

ಘಟನಾ ಸ್ಥಳದಲ್ಲಿ ಬೈಂದೂರು ಪೊಲೀಸರು, ಕರಾವಳಿ ಕಾವಲು ಪಡೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಅಧಿಕಾರಿಗಳು ಜನಪ್ರತಿನಿಧಿಗಳು ತಾಲೂಕು ಅಧಿಕಾರಿಗಳು ಮುಕುಂ ಹೂಡಿದ್ದಾರೆ ಎನ್ನಲಾಗಿದೆ, 

ಹೆಚ್ಚಿನ ವರದಿ ಇನ್ನಷ್ಟೇ ತಿಳಿಯಬೇಕಾಗಿದೆ

Ads on article

Advertise in articles 1

advertising articles 2

Advertise under the article