ಕುಂದಾಪುರ: ರೋಗಿಗಳಿಗೆ , ಹಾಗೂ ಜನಸಾಮಾನ್ಯರಿಗೆ ಹತ್ತಿರವಾದ ಕುಂದಾಪುರ ಸರಕಾರಿ ಆಸ್ಪತ್ರೆ
Tuesday, August 19, 2025
ಕುಂದಾಪುರ;  ಸರಕಾರಿ ಸೇವೆಗಳಿಗೆ ಟೀಕೆ, ಟಿಪ್ಪಣಿ ಹರಿದಾಡುವ ಪ್ರಸ್ತುತ ಸಮಯದಲ್ಲಿ,  ಮನುಷ್ಯರಿಗೆ ಅತಿ ಮುಖ್ಯವಾದ  ವಿಚಾರವೆಂದರೆ ಆರೋಗ್ಯ ವಿಚಾರ ,  ರೋಗಿಗಳಿಗೆ ಖಾಸಗಿ ಯಂತೆ  ಸ್ಪರ್ದಾತ್ಮಕ ಸೇವೆ ನೀಡುತ್ತಿರುವ ಕುಂದಾಪುರ ಸರಕಾರಿ  ತಾಲೂಕು ಆಸ್ಪತ್ರೆ,  ಜಸಾಮಾನ್ಯರ ಹೊಗಳಿಕೆಗೆ ಪಾತ್ರವಾಗಿದೆ..
 ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಹಿರಿಯ ತಜ್ಞ ವೈದ್ಯರಾದ ಡಾ. ನಾಗೇಶ್, ಪುತ್ರನ್,  ಡಾ. ಚಂದ್ರ ಮರಕಾಲ  ಡಾ ಮಹೇಂದ್ರ ಶೆಟ್ಟಿ, ಯವರು ದಿನೇ ದಿನೇ ರೋಗಿಗಳಿಗೆ ಆತ್ಮೀಯರಾಗುತ್ತಿದ್ದು, ಇವರು  ಜನ ಪರ ಕಾಳಜಿಯಿಂದ ಅವರು ನೀಡುತ್ತಿರುವ ಚಿಕಿತ್ಸೆಗೆ ರೋಗಿಗಳು  ಫಿದಾ ಆಗಿದ್ದಾರೆ.
ಈ ಆಸ್ಪತ್ರೆಗೆ ಶಿರಸಿ, ಕಾರವಾರ, ಸಾಗರ, ಶಿವಮೊಗ್ಗ, ಹಾಗೂ ವಿವಿಧ ಜಿಲ್ಲೆಯ ರೋಗಿಗಳು  ಆಸ್ಪತ್ರೆ ಹಾಗೂ ವೈದ್ಯರನ್ನು ನೋಡಿ ಬರುತ್ತಿದ್ದಾರೆ, ಹಾಗೆ ಆಸ್ಪತ್ರೆಯ 
ಇವರ ಸಂಪೂರ್ಣ ತಂಡವೇ ಸ್ಪರ್ದಾತ್ಮಕ ವಾಗಿ, ಚಿಕಿತ್ಸೆ ನೀಡುತ್ತಿದ್ದು, ಅಲ್ಲಿ ದುಬಾರಿ ಚಿಕಿತ್ಸೆಯ ಭಯವನ್ನು ಸಾರ್ವಜನಿಕರಿಂದ ದೂರ ಮಾಡಿದ್ದಾರೆ. 
ಮೆಡಿಸಿನ್ ವಿಭಾಗ, ಶಸ್ತ್ರ ಚಿಕಿತ್ಸೆ, ಹೆರಿಗೆ, ಸ್ತ್ರೀ ರೋಗ, ಮಕ್ಕಳ ವಿಭಾಗ, ಕಿವಿ ಮೂಗು ಗಂಟಲು, ಮೂಳೆ ವಿಭಾಗ,  ಕಣ್ಣಿನ ವಿಭಾಗ, ಎಲ್ಲವೂ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದು,  ರೋಗಿಗಳ ಸಂಖ್ಯೆ ದಿನೇ ದಿನೇ ಕುಂದಾಪುರ ತಾಲೂಕು ಸಾರ್ವಜನಿಕ  ಸರಕಾರಿ ಆಸ್ಪತ್ರೆ ಯಲ್ಲಿ ಏರಿಕೆಯಾಗಿರುವುದು ಜನಪ್ರತಿನಿಧಿಗಳಿಗೂ ನೆಮ್ಮದಿ ತಂದಿದೆ..
ಸಣ್ಣ ಪುಟ್ಟ ಲೋಪ ದೋಷಗಳು ಏನೇ ಇದ್ದರೂ ಇದ್ಯಾವುದು ಗಣ್ಯವಲ್ಲ ಎನ್ನುವ ಮಟ್ಟಿಗೆ ಸರಕಾರಿ ಆಸ್ಪತ್ರೆ ಸೇವೆ ತಲುಪಿರುವುದು ಶ್ಲಾಘನೀಯ
ವರದಿ: ದಾಮೋದರ ಮೊಗವೀರ ನಾಯಕವಾಡಿ COSTALNEWS ಕುಂದಾಪುರ