ಬೈಂದೂರು: : ಮಹಿಳೆಗೆ ಕೆಲಸ ಕೊಡಿಸುವುದಾಗಿ ನಂಬಿಸಿ ವೇಶ್ಯಾವಾಟಿಕೆಗೆ ದಂಧೆಗೆ ಬಳಸಿಕೊಂಡ : ಮೊಹಮ್ಮದ್ ಫಯಾಜ್ ಬಂಧನ!!
Monday, August 25, 2025
ಬೈಂದೂರು:
ವೇಶ್ಯಾವಾಟಿಕೆ ನಡೆಯುತ್ತಿರುವ ದೂರಿನ ಆಧಾರದ ಮೇಲೆ ಉಡುಪಿ ನಗರದ ಲಾಡ್ಜ್ ಒಂದಕ್ಕೆ ಪೊಲೀಸರು ದಾಳಿ ನಡೆಸಿ ಮಹಿಳೆಯನ್ನು ರಕ್ಷಣೆ ಮಾಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ ಎನ್ನಲಾಗಿದೆ.
ಶರತ್ ಯಾನೆ ಮೊಹಮ್ಮದ್ ಫಯಾಜ್ ಎಂಬ ವ್ಯಕ್ತಿ ಅಕ್ರಮ ವೇಶ್ಯಾವಾಟಿಕೆಯ ಕಿಂಗ್ ಪಿನ್ ಈತ ಬೆಂಗಳೂರಿನಿಂದ ಸಂತ್ರಸ್ತ ಮಹಿಳೆಯರನ್ನು ಕೆಲಸ ಕೊಡಿಸುವುದಾಗಿ ನಂಬಿಸಿ ಉಡುಪಿಗೆ ಕರೆತಂದು ಅಕ್ರಮ ವೇಶ್ಯಾವಾಟಿಕೆಗೆ ಮಹಿಳೆಯನ್ನು ಬಳಸಿಕೊಳ್ಳುತ್ತಿದ್ದ ಎಂಬ ಸತ್ಯ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ, ಉಡುಪಿಯಲ್ಲಿ ಪೊಲೀಸರು ಆತನನ್ನು ಬಂಧಿಸಿದ ಮೇಲೆ ಸಂತ್ರಸ್ತ ಮಹಿಳೆಯರನ್ನು ಕಳಿಸಿದ ವಿಳಾಸವನ್ನು ನೀಡಿದ್ದಾನೆ
ಅದರಂತೆ ವೇಶ್ಯಾವಾಟಿಕೆಯ ಕಿಂಗ್ ಪಿನ್ ಅರೆಸ್ಟ್ ಮಾಡಿದ್ದು ಉಳಿದವರ ಬಗ್ಗೆ ಕೇಳಿದಾಗ ತ್ರಾಸಿಗೆ ಉಳ್ತೂರು ನಿವಾಸಿ ( ಹೆಸರು) ಜೊತೆ ಕಳಿಸಿ ಕೊಟ್ಟಿದ್ದಾಗಿ ತಿಳಿಸಿದ ಮೇರೆಗೆ
ಗಂಗೊಳ್ಳಿ ಪೊಲೀಸರು ತ್ರಾಸಿ ಬೀಚ್ ಸಮೀಪ ಇರುವ ಲಾಡ್ಜ್ ಗೆ ದಾಳಿ ನಡೆಸಿ ದೀಕ್ಷಿತ್ ಮತ್ತು ಓರ್ವ ಮಹಿಳೆಯನ್ನು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ
ತ್ರಾಸಿ ಲಾಡ್ಜ್ ಗೆ ದೀಕ್ಷಿತ್ ಎಂಬುವನ ಜೊತೆ ಓರ್ವ ಮಹಿಳೆಯನ್ನು ಕಳಿಸಿದ್ದೇನೆ ಎಂಬ ಮಾಹಿತಿ ಮೇಲೆ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತ್ರಾಸಿ ಬೀಚ್ ಸಮೀಪದ ಲಾಡ್ಜ್ ಒಂದರಲ್ಲಿ ದೀಕ್ಷಿತ್ ಎಂಬ ಆತನನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ
ಮಹಿಳೆ ಸೇರಿದಂತೆ ಇಬ್ಬರನ್ನು ಗಂಗೊಳ್ಳಿ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಅನೈತಿಕ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಲೇಶ್ ಗಣಪತರಾವ್ ಚೌವ್ಹಾಣ, ಪೊಲೀಸ್ ವೃತ್ತ ನಿರೀಕ್ಷಕರು(ಪ್ರಭಾರ), ಬೈಂದೂರು ವೃತ್ತ ಇವರು ಸಿಬ್ಬಂದಿಗಳೊಂದಿಗೆ
ದಾಳಿ ನಡೆಸಿ ಸಂತ್ರಸ್ತ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ,
ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 89/2025 ಕಲಂ:143 BNS, ಕಲಂ:3,4,5,6 Immoral Traffic ( Prevention) Act 1956 ರಂತೆ ಪ್ರಕರಣ ದಾಖಲಾಗಿರುತ್ತದೆ.