Kundapura:ಗಣಿ ಮತ್ತು ಖನಿಜ ಸಾಗಣೆ ವಾಹನಗಳಿಗೆ ಇನ್ನು ಮುಂದೆ ವೇಗ ನಿಯಂತ್ರಣ ಕಡ್ಡಾಯ. SP ಹರಿರಾಂ ಶಂಕರ್ ಖಡಕ್ ಸೂಚನೆ
Wednesday, January 7, 2026
ಕುಂದಾಪುರ
, ಜ. 07: ಉಡುಪಿ ರಸ್ತೆ ಸುರಕ್ಷತಾ ಪ್ರಾಧಿಕಾರದ ಮಹತ್ವದ ತೀರ್ಮಾನದಂತೆ, ಉಡುಪಿ ಜಿಲ್ಲೆಯೊಳಗೆ ಗಣಿ ಹಾಗೂ ಖನಿಜ ಸಾಗಣೆ ಮಾಡುವ ಆರು ಚಕ್ರ ಹಾಗೂ ಅದಕ್ಕಿಂತ ಮೇಲಿನ ಎಲ್ಲಾ ವಾಹನಗಳಿಗೆ 60 ಕಿಲೋಮೀಟರ್ ವೇಗ ಮಿತಿಯ ಸ್ಪೀಡ್ ಗವರ್ನರ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.
ಕಳೆದ ರಸ್ತೆ ಸುರಕ್ಷತಾ ಪ್ರಾಧಿಕಾರ ಸಭೆಯಲ್ಲಿ ಟಿಪ್ಪರ್ ವಾಹನಗಳ ಅತೀವೇಗ ಪ್ರಮುಖ ಅಜೆಂಡಾವಾಗಿದ್ದು, ಈ ತೀರ್ಮಾನವನ್ನು ಅಂತಿಮಗೊಳಿಸಲಾಗಿದೆ. ಇದಕ್ಕಾಗಿ ಲಾರಿ ಚಾಲಕರಿಗೆ 10 ದಿನಗಳ ಕಾಲಾವಕಾಶ ನೀಡಲಾಗಿದೆ.
ಈ ಕುರಿತು ಎಲ್ಲ ಲಾರಿ ಚಾಲಕರಿಗೂ ಹಾಗೂ ಮಾಲೀಕರಿಗೆ ಮಾಹಿತಿ ತಲುಪಿಸುವ ಉದ್ದೇಶದಿಂದ ಶೀಘ್ರದಲ್ಲೇ ಪಾಂಪ್ಲೆಟ್‌ಗಳನ್ನು ವಿತರಿಸಲಾಗುತ್ತದೆ.
ಇದೇ ವೇಳೆ, ಬಸ್‌ಗಳಿಗೆ ಬಾಗಿಲು ಅಳವಡಿಸುವ ಅಂತಿಮ ಗಡುವನ್ನು ಜನವರಿ 20 ಎಂದು ನಿಗದಿಪಡಿಸಲಾಗಿದ್ದು, ಆ ದಿನಾಂಕದ ಬಳಿಕ ನಿಯಮ ಉಲ್ಲಂಘಿಸಿದ ಬಸ್‌ಗಳಿಗೆ ದಂಡ ಅಥವಾ ಜಪ್ತಿ ಕ್ರಮ ಕೈಗೊಳ್ಳಲಾಗುತ್ತದೆ.
SP ಹರಿರಾಮ್ ಶಂಕರ್ ರವರ ನಿನ್ನೆ ಸೂಚಿಸಿದ ಖಡಕ್ ಆದೇಶಕ್ಕೆ ಗುರುವಾರ ಬೆಳಗಿನಿಂದಲೇ ರಸ್ತೆಯಲ್ಲಿ ಟಿಪ್ಪರ್ ಲಾರಿಗಳು ಬಹಳಷ್ಟು ಕಡಿಮೆ ಸಂಚರಿಸುತ್ತಿದ್ದು ಟಿಪ್ಪರ್ ಮಾಲೀಕರು ಎಸ್ ಪಿ ಅವರ ಆದೇಶಕ್ಕೆ ಬೆಚ್ಚಿಬಿದ್ದಿದ್ದಂತೂ ಸತ್ಯ, ಹರಿರಾಮ್ ಶಂಕರ್ ರವರ ಆದೇಶಕ್ಕೆ ಸಾರ್ವಜನಿಕ ವಲಯದಲ್ಲಿ ಬಾರಿ ಪ್ರಶಂಸೆ ವ್ಯಕ್ತವಾಗುತ್ತಿದ,
ಅಕ್ರಮ ದಂಧೆ ಕೋರರ ವಿರುದ್ಧ ಸಮರಸಾರಿದ ಜಿಲ್ಲಾಡಳಿತ