ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Kundapura: ನಾಪತ್ತೆಯಾಗಿದ್ದ ಬಾಲಕನನ್ನು ಪತ್ತೆ ಹಚ್ಚಿದ ಗಂಗೊಳ್ಳಿ ಠಾಣಾಧಿಕಾರಿ ಪವನ್ ನಾಯಕ್*

Kundapura: ನಾಪತ್ತೆಯಾಗಿದ್ದ ಬಾಲಕನನ್ನು ಪತ್ತೆ ಹಚ್ಚಿದ ಗಂಗೊಳ್ಳಿ ಠಾಣಾಧಿಕಾರಿ ಪವನ್ ನಾಯಕ್*


ಕುಂದಾಪುರ ತಾಲೂಕಿನ, ಗುಜ್ಜಾಡಿ ಗ್ರಾಮದ, ಬೆಣ್ಗೆರೆ ಪರಿಸರದ ಒಬ್ಬ 10 ವರ್ಷದ ಬಾಲಕ ನಾಪತ್ತೆಯಾಗಿರುವ ಬಗ್ಗೆ ಮನೆಯವರು ಸಂಜೆ 7 ಗಂಟೆಗೆ ಗಂಗೊಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರನ್ನು ನೀಡಿದ ತಕ್ಷಣದಲ್ಲಿ ಕಾರ್ಯಪ್ರವೃತ್ತರದ ಪೊಲೀಸ್ ಪಡೆ ಮತ್ತು ಸಾರ್ವಜನಿಕರು ಎಷ್ಟೇ ಹುಡುಕಿದರೂ ಬಾಲಕನ ಯಾವುದೇ ಸುಳಿವು ಕೂಡ ದೊರೆತಿರಲಿಲ್ಲ ಆದರೂ ಕೂಡ ಸಮಯ ರಾತ್ರಿ 12:40ರ ಹೊತ್ತಿಗೆ ಮತ್ತೆ ಸಾರ್ವಜನಿಕರೊಂದಿಗೆ ಚರ್ಚಿಸಿ ಒಬ್ಬೊಬ್ಬರು ಒಂದೊಂದು ಕಡೆ ತೆರಳುವಂತೆ ಕಾರ್ಯಾಚರಣೆ ನಡೆಸಿದಾಗ ದೊಡ್ಡ ಎರಡು ಬಂಡೆಕಲ್ಲಿನ ಮಧ್ಯ ಇರುವ ಪೊಟರೆಯ ಬೆಳೆದ ಗಿಡಗಳ ಸಂಧಿಯಲ್ಲಿ ಅವಿತು ಕುಳಿತಿರುವುದನ್ನು ಪತ್ತೆ ಹಚ್ಚಿದ 
 *ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಪವನ್ ನಾಯಕ್ ಮತ್ತು ಸಿಬ್ಬಂದಿಗಳಾದ ರಾಘವೇಂದ್ರ ಪಿ, ಸಂದೀಪ್, ಚಂದ್ರಶೇಖರ ರಾಘವೇಂದ್ರ ಶೆಟ್ಟಿ, ಮೋಹನ್ ಬೈಂದೂರು ಸೇರಿದಂತೆ   ಸಾರ್ವಜನಿಕರ ಸಹಾಯದಿಂದ ಬಾಲಕನನ್ನು ಜಾಗರೂಕತೆಯಿಂದ ರಕ್ಷಿಸಿ ಮನೆಗೆ ಬಿಡಲಾಯಿತು. ಈ ಒಂದು ಕಾರ್ಯಾಚರಣೆಯಲ್ಲಿ ಸಾರ್ವಜನಿಕರು ಅತಿ ಹೆಚ್ಚು ಸಂಖ್ಯೆಯಲ್ಲಿ ಸಹಕರಿಸಿದ್ದು ಮತ್ತು ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿರುವುದರಿಂದ ಬಾಲಕ ಕ್ಷೇಮವಾಗಿ ಮನೆಗೆ ತಲುಪಲು ಸಾಧ್ಯವಾಯಿತು ಎಂದು ಬಾಲಕನ ಮನೆಯವರು ತಿಳಿಸಿರುತ್ತಾರೆ.
ವರದಿ: ಸತೀಶ್ ಕಂಚುಗೋಡು.

Ads on article

Advertise in articles 1

advertising articles 2

Advertise under the article