honnavar: ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಸಂಸ್ಕೃತಿ ಕುಂಭ ಮಲೆನಾಡ ಉತ್ಸವ ಮತ್ತು ರಾಜ್ಯ ಮಟ್ಟದ ಜಾನಪದ ನೃತ್ಯ ಹಾಗೂ ಕುಣಿತ ಭಜನಾ ಸ್ಪರ್ಧೆ.
Thursday, January 8, 2026
ಹೊನ್ನಾವರ: ಶ್ರೀ ವಿಶ್ವ ವೀರಾಂಜನೇಯ ಮಹಾಸಂಸ್ಥಾನಮ್, ಹೇಮಪುರ ಮಹಾಪೀಠಮ್, ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಮಾರ್ಚ್ 27, 2026 ರಿಂದ ಏಪ್ರಿಲ್ 02, 2026 ರ ವರೆಗೆ ಜಾತ್ರಾ ಮಹೋತ್ಸವ, 'ಸಂಸ್ಕೃತಿ ಕುಂಭ ಮಲೆನಾಡ ಉತ್ಸವ – 2026' ಮತ್ತು ರಾಜ್ಯ ಮಟ್ಟದ ಜಾನಪದ ನೃತ್ಯ ಹಾಗೂ ಕುಣಿತ ಭಜನೆ ಸ್ಪರ್ಧೆ ಸತತ 7 ದಿನಗಳವರೆಗೆ ನಡೆಯಲಿದೆ. ಇದೇ ಸಮಯದಲ್ಲಿ ಹೊರರಾಜ್ಯದ ಜಾನಪದ ನೃತ್ಯ ಪ್ರಕಾರಗಳ ಪ್ರದರ್ಶನ, ಅನುಭವಿ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸ್ಥಳೀಯ ಪ್ರತಿಭೆಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳ ಜೊತೆಗೆ ಶರಾವತಿ ಕುಂಭ ಸ್ನಾನ, ಶರಾವತಿ ಆರತಿ, ಪುಷ್ಪ ರಥೋತ್ಸವ, ಬ್ರಹ್ಮ ರಥೋತ್ಸವ ಕಾರ್ಯಕ್ರಮಗಳು ನಡೆಯಲಿವೆ.
ಜಾನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ. 1,00,000/-, ದ್ವಿತೀಯ ಬಹುಮಾನ ರೂ. 75,000/- ಹಾಗೂ ತೃತೀಯ ಬಹುಮಾನ ರೂ. 50,000/-, ಚತುರ್ಥ ಬಹುಮಾನ ರೂ. 25,000/-, ಸಮಾಧಾನಕರ ಬಹುಮಾನ ರೂ. 10,000/- ಹಾಗೂ ಪ್ರಮಾಣಪತ್ರ ನೀಡಲಾಗುವುದು.
ಕುಣಿತ ಭಜನೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ. 70,000/-, ದ್ವಿತೀಯ ಬಹುಮಾನ ರೂ. 50,000/- ಹಾಗೂ ತೃತೀಯ ಬಹುಮಾನ ರೂ. 30,000/-, ಚತುರ್ಥ ಬಹುಮಾನ ರೂ. 20,000/-, ಸಮಾಧಾನಕರ ಬಹುಮಾನ ರೂ. 10,000/- ಹಾಗೂ ಪ್ರಮಾಣಪತ್ರ ನೀಡಲಾಗುವುದು.
ಸತತ 7 ದಿನಗಳವೆರೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ರಾಜ್ಯ ಮಟ್ಟದ ಈ ಸ್ಪರ್ಧೆಯ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9986710126 ನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ತಂಡಗಳು ಜನವರಿ 30 ರ ಒಳಗಾಗಿ ತಮ್ಮ ಸ್ವ-ವಿವರಗಳನ್ನು A ವಿಳಾಸಕ್ಕೆ ಅಂಚೆಯ ಮೂಲಕ ಕಳುಹಿಸಕೊಡಬೇಕಾಗಿ ವಿನಂತಿಸುತ್ತೇವೆ.
ವಿಳಾಸ: ಜಾನಪದ ನೃತ್ಯ ಹಾಗೂ ಕುಣಿತ ಭಜನಾ ಸ್ಪರ್ಧೆ ವಿಭಾಗ, ಸಿಲೆಕ್ಟ್ ಫೌಂಡೇಶನ್, ಶ್ರೀಕ್ಷೇತ್ರ ಬಂಗಾರಮಕ್ಕಿ, ಪೋ: ಗೇರಸೊಪ್ಪ, ತಾ: ಹೊನ್ನಾವರ (ಉ.ಕ.)
581384
-ಧರ್ಮದರ್ಶಿಗಳು
ಶ್ರೀಕ್ಷೇತ್ರ ಬಂಗಾರಮಕ್ಕಿ