ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Aಕುಂದಾಪುರ: ಯಾರ ಮುಲಾಜಿಲ್ಲದೆ ನಡೆಯುತ್ತಿದೆ ಅಕ್ರಮ ಕೆಂಪು ಮಣ್ಣಿನ ದಂಧೆ!!

Aಕುಂದಾಪುರ: ಯಾರ ಮುಲಾಜಿಲ್ಲದೆ ನಡೆಯುತ್ತಿದೆ ಅಕ್ರಮ ಕೆಂಪು ಮಣ್ಣಿನ ದಂಧೆ!!

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಹಲವು ಕಡೆಗಳಲ್ಲಿ ದಿನನಿತ್ಯ ಯಾರ ಭಯದ ಮುಲಾಜಿಲ್ಲದೆ ನಡೆಯುತ್ತಿದೆ ಅಕ್ರಮ ಕೆಂಪು ಮಣ್ಣು ದಂಧೆ ನಡೆಯುತ್ತಿದೆ 
 ಹೌದು ಒಂದೆಡೆ ರಸ್ತೆಯಲ್ಲಿ ಬಿದ್ದಿರುವ ಹೋಂಡಾ ಗುಂಡಿ ಗಳ ಸಮಸ್ಯೆಯಿಂದ ಜನಸಾಮಾನ್ಯರು ತಿರುಗಾಡುವುದೇ ಕಷ್ಟಕರವಾಗಿದೆ ಅದರಲ್ಲೂ ರಸ್ತೆಯಲ್ಲಿ ಕೆಂಪು ಮಣ್ಣು ತುಂಬಿದ ಟಿಪ್ಪರ್ ಲಾರಿಗಳು ಟಾರ್ಪಲ್ ಇಲ್ಲದೆ ಕೆಂಪು ಮಣ್ಣು ತುಂಬಿಸಿಕೊಂಡು ಓಡಾಡುತ್ತಿವೆ ಇದರ ಧೂಳು ಒಟ್ಟಾರೆಯಾಗಿ ಜನರು ಮಾತ್ರ ರಸ್ತೆಯಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ ಎಂಬುದೇ ಸಾರ್ವಜನಿಕರ ಆಗ್ರಹ 
 ಮುಳ್ಳಿಕಟ್ಟೆ , ಗುಜ್ಜಾಡಿ, ಆಲೂರು ನಾಡ ಗುಡ್ಡೆ ಅಂಗಡಿ, ಮಾರಣಕಟ್ಟೆ ಕೊಲ್ಲೂರು ಹೆಮ್ಮಾಡಿ ತಲ್ಲೂರು ಕುಂದಾಪುರ ಕಂಡ್ಲೂರು ಬಸ್ರೂರು ಕವ್ರಾಡಿ, ಹಳ್ನಾಡು ಜಪ್ತಿ ಹುಣಸೆ ಮಕ್ಕಿ ಇನ್ನು ಕುಂದಾಪುರ ಬೈಂದೂರು ತಾಲೂಕಿನ ಹಲವು ಭಾಗಗಳಲ್ಲಿ ಅಕ್ರಮವಾಗಿ ಕೆಂಪು ಮಣ್ಣು ದಂಧೆ ನಡೆಯುತ್ತಿದೆ , 

ಉಡುಪಿ ಭೂ ವಿಜ್ಞಾನ ಇಲಾಖೆಯ ಗಣಿ ಅಧಿಕಾರಿಗಳು ಮಾತ್ರ ನಮಗೆ ಏನೂ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ, ಅಲ್ಪಸ್ವಲ್ಪ ಪೊಲೀಸ್ ಇಲಾಖೆ ಅಕ್ರಮ 
ಗಣಿಗಾರಿಕೆಯ ಮೇಲೆ ಸ್ವಲ್ಪಮಟ್ಟಿಗೆ ಕಡಿವಾಣ ಹಾಕಿದ್ದಾರೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ 

ಮಾನ್ಯ ಜಿಲ್ಲಾಧಿಕಾರಿಗಳು ಕುಂದಾಪುರ ಬೈಂದೂರು ಕಡೆಗೆ ಗಮನಹರಿಸಿ ಅಕ್ರಮ ಕೆಂಪು ಮಣ್ಣು ಗಣಿಗಾರಿಕೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದೇ ಸಾರ್ವಜನಿಕರ ಅಭಿಪ್ರಾಯವಾಗಿದೆ

Ads on article

Advertise in articles 1

advertising articles 2

Advertise under the article