ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

 ಶಿರಸಿ ಕಸ್ತೂರಬಾ ನಗರದಲ್ಲಿ ಕಟ್ಟಡದಿಂದ ವ್ಯಕ್ತಿ ಬಿದ್ದು ದಾರುಣ ಸಾವು :

ಶಿರಸಿ ಕಸ್ತೂರಬಾ ನಗರದಲ್ಲಿ ಕಟ್ಟಡದಿಂದ ವ್ಯಕ್ತಿ ಬಿದ್ದು ದಾರುಣ ಸಾವು :

ಶಿರಸ : ಕಟ್ಟಡದ ಮೇಲಿನಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ದಾರುಣ ಘಟನೆ ಶಿರಸಿ ನಗರದ ಕಸ್ತೂರಬಾ ನಗರದಲ್ಲಿ ಸಂಭವಿಸಿದ ಬಗ್ಗೆ ವರದಿಯಾಗಿದೆ.ತಂಜಿಲ್ ಪಾಷಾ (42)ವಯಸ್ಸಿನ ವ್ಯಕ್ತಿ ಮೃತನಾಗಿದ್ದು, ಈತ ಹಣ್ಣು ವ್ಯಾಪಾರ ಮಾಡುವ ವೃತ್ತಿಯವ ಎಂದು ಹೇಳಲಾಗುತ್ತಿದೆ.ಈತ ಬೆಂಗಳೂರಿನ ರಾಮನಗರ ನಿವಾಸಿ ಎನ್ನಲಾಗುತ್ತಿದ್ದು 15 ದಿನಗಳಿಗೊಮ್ಮೆ ಹಣ್ಣು ವ್ಯಾಪಾರ ವ್ಯವಹಾರ ನಿಮಿತ್ತ ಶಿರಸಿಗೆ ಬರುತ್ತಿದ್ದ ಎನ್ನಲಾಗಿದೆ. ಅದರಂತೆ ಅಕ್ಟೋಬರ್ 13ರ ರಾತ್ರಿ ಈತ ರಾತ್ರಿಯ ವೇಳೆಯಲ್ಲಿ ಕಸ್ತೂರಬಾ ನಗರದ ಲಮಾಣಿ ಓಣಿ ಪಕ್ಕದ ರಸ್ತೆಯ ಮನೆಯೊಂದರ- ಕಟ್ಟಡದ ಮೇಲೆ ಮಲಗಿದ ವೇಳೆಯಲ್ಲಿ, ಆಕಸ್ಮಿಕವಾಗಿ ಕಟ್ಟಡದಿಂದ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿ ಶಂಕೆ ವ್ಯಕ್ತವಾಗಿದೆ. ಮನೆಯ ಮಾಲೀಕರು ಇಂದು ಬೆಳಿಗ್ಗೆ ಬಾಗಿಲು ತೆಗೆದಾಗ ಎದುರುಗಡೆ ತಂಜಿಲ್ ಪಾಷ ಮೃತಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.ಶಿರಸಿ ಹೊಸ ಮಾರುಕಟ್ಟೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತನ ಸಂಬಂಧಿಕರು ಬೆಂಗಳೂರಿನಿಂದ ಆಗಮಿಸುತ್ತಿದ್ದಾರೆ ಎನ್ನಲಾಗಿದೆ.ಹೆಚ್ಚಿನ ವಿವರ ಬರಬೇಕಿದೆ.


Ads on article

Advertise in articles 1

advertising articles 2

Advertise under the article