ಕುಂದಾಪುರ:: ಅಂದರ್ ಬಾಹರ್ ಜುಗಾರಿ ಆಟ ನಾಲ್ಕು ಮಂದಿ ಬಂಧನ, ಮೂವರು ಪರಾರಿ!!
Monday, October 13, 2025
ಕುಂದಾಪುರ: ಕಸಬಾ ಗ್ರಾಮದ ಮದ್ದುಗುಡ್ಡೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಟ ಆಡುತ್ತಿದ್ದಾರೆಂದು ದೊರೆತ ಖಚಿತ ಮಾಹಿತಿಯಂತೆ ಕುಂದಾಪುರ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಮಿಥುನ ಖಾರ್ವಿ(35), ಚಂದ್ರ ಪೂಜಾರಿ(45) ರೆಹಮತ್(51) ನಿರಂಜನ್ ನಾಯಕ್ (39) ಬಂಧಿತರು. ಕುಂದಾಪುರ ಪೊಲೀಸ್ ಉಪನಿರೀಕ್ಷಕ ನಂಜಾ ನಾಯ್ಕರಿಗೆ ಬಂದ ಖಚಿತ ಮಾಹಿತಿಯಂತೆ ದಾಳಿ ಮಾಡಿದ್ದಾರೆ. ಅಂದರ್ ಬಾಹರ್ ಜುಗಾರಿ ಆಟಕ್ಕೆ ಉಪಯೋಗಿಸಿದ ಬಿಳಿ ಬಣ್ಣದ ಪಾಲೀಥಿನ್ ಚೀಲ, ಡೈಮಾನ್, ಆಟಿನ್, ಇಸ್ಪೀಟ್ ಎಲೆಗಳು, ನಗದು ರೂ 2660ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ
ಕಿರಣ, ಹರೀಶ್, ಮಂಜುನಾಥ ಎಂಬವರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾರೆ.
ಆರೋಪಿಗಳ ಪತ್ತೆಹಚ್ಚಲು ಪೊಲೀಸರ ಶೋಧ ಕಾರ್ಯಾಚರಣೆ ಮುಂದುವರೆದಿದೆ