ಬೈಂದೂರು: ಕಾಲ್ಲೋಡು ಅಕ್ರಮ ಕೆಂಪು ಗಣಿಗಾರಿಕೆ ಅಡ್ಡ ಮೇಲೆ ಪೊಲೀಸ್ ದಾಳಿ
Monday, October 13, 2025
ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ಠಾಣಾ ವ್ಯಾಪ್ತಿಯ ಕಾಲ್ಲೋಡು ಗ್ರಾಮದಲ್ಲಿ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಪ್ರಕರಣ ಪತ್ತೆಯಾಗಿದೆ.
ಕಾಲ್ತೋಡು ಗ್ರಾಮದ ಕಪ್ಪಡಿ ಪ್ರದೇಶದ ಸರ್ಕಾರಿ ಜಾಗದಲ್ಲಿ ಬಹಳಷ್ಟು ದಿನಗಳಿಂದ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ, ಬೈಂದೂರು ಠಾಣೆಯ ಪಿ ಎಸ್ ಐ ತಿಮ್ಮೇಶ ಬಿ.ಎನ್. ನೇತೃತ್ವದ ಪೊಲೀಸರು ಸ್ಥಳಕ್ಕೆ ದಾಳಿ
ಸದ್ರಿ ಸರಕಾರಿ ಜಮೀನಿನಲ್ಲಿ ವಿಜಯ ಶೆಟ್ಟಿ ಎಂಬಾತ ಯಾವುದೇ ಪರವಾನಿಗೆಯಿಲ್ಲದೇ ಅಕ್ರಮವಾಗಿ ಕೆಂಪು ಕಲ್ಲು ತೆಗೆಯುತ್ತಿದ್ದುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಸುಮಾರು 40 ಅಡಿ ಉದ್ದ 40 ಅಡಿ ಅಗಲ ಮತ್ತು 8 ಅಡಿ ಆಳದ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದ್ದು, 200ಕ್ಕೂ ಹೆಚ್ಚು ಕೆಂಪು ಕಲ್ಲುಗಳು ರಾಶಿಯಾಗಿ ಪತ್ತೆಯಾಗಿವೆ.
ಸ್ಥಳದಿಂದ ಪವರ್ ಟಿಲ್ಲರ್ ಮಿಷಿನ್, ಡೀಸೆಲ್ ಎಂಜಿನ್ ಯಂತ್ರ, ಕಲ್ಲು ಕಟಿಂಗ್ ಟಿಲ್ಲರ್ ಹಾಗೂ ಸುಮಾರು 200 ಕೆಂಪುಕಲ್ಲು ಸೇರಿ ಒಟ್ಟು ರೂ.1,30,500 ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ,
ಬೈಂದೂರು ಭಾಗದಲ್ಲಿ ಇನ್ನಷ್ಟು ಅಕ್ರಮ ಕೆಂಪು ಕಲ್ಲು ಗಣಿಗಾರಿಕೆಯ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂಬುದು ತಿಳಿದು ಬಂದಿದೆ,
ಬೈಂದೂರು ಭಾಗದಲ್ಲಿ ಪೊಲೀಸರು ಅಕ್ರಮ ಚಟುವಟಿಕೆಗಳ ಮೇಲೆ ಹೆಚ್ಚಿನ ಕ್ರಮ ಕೈಗೊಳ್ಳುವ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ