ಶಿರಸಿ :ತುಡುಗುಣಿಯಲ್ಲಿ ಕಳ್ಳ ಬೇಟೆಗಾರರಿಂದ ಗುಂಡು ಹಾರಿಸಿ ಜಿಂಕೆ ಹತ್ಯೆ!!ಮಂಚಿಕೇರಿ ಅರಣ್ಯ ವ್ಯಾಪ್ತಿಯಲ್ಲಿ ನಡೆದ ಘಟನೆ
Saturday, October 11, 2025
ಶಿರಸಿ
: ಮಂಚಿಕೇರಿ: ಯಲ್ಲಾಪುರ ತಾಲೂಕಿನ ವ್ಯಾಪ್ತಿಗೆ ಒಳಪಡುವ ಮಂಚಿಕೇರಿ ವಲಯ ಅರಣ್ಯ ಇಲಾಖೆ ಸರಹದ್ದಿನ ಶಿರಸಿ -ಯಲ್ಲಾಪುರ ರಸ್ತೆ ತುಡುಗುಣಿಯಲ್ಲಿ ಕಾಡುಪ್ರಾಣಿ ಬೇಟೆಗಾರ ದುಷ್ಕರ್ಮಿಗಳು ಜಿಂಕೆಯೊಂದನ್ನು ಹತ್ಯೆ ಮಾಡಿರುವ ಬಗ್ಗೆ ಇಂದು ಬೆಳಗ್ಗೆ ವರದಿಯಾಗಿದೆ.
ದುಷ್ಕರ್ಮಿಗಳು ತುಡುಗುಣಿ ಸೇತುವೆ ಸಮೀಪದ ಕಾಡಿನಲ್ಲಿ ಬಂದೂಕಿನಿಂದ ಗುಂಡು ಹಾರಿಸಿ , ಜಿಂಕೆಯನ್ನು ಹತ್ಯೆ ಮಾಡಿರುವುದಾಗಿ ಹೇಳಲಾಗುತ್ತಿದೆ. ಇಂದು ಬೆಳಗಿನ ಜಾವ ಜಿಂಕೆಯನ್ನು ಹತ್ಯೆ ಮಾಡಲಾಗಿದ್ದು,ಹತ್ತಿರದ ನಿವಾಸಿಗಳು ಸದ್ದು ಕೇಳಿ ಬ್ಯಾಟರಿ ಬೆಳಕು ಬಿಟ್ಟಾಗ ಜಿಂಕೆಯನ್ನು ಅಲ್ಲೇ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.ಮಂಚಿಕೆರಿ ವಲಯ ಅರಣ್ಯಾಧಿಕಾರಿ ಬಸವರಾಜ ಬೋಚಳ್ಳಿ ಸ್ಥಳದಲ್ಲಿ ಮೊಕ್ಕಾo ಹೂಡಿದ್ದು,ದಾಂಡೇಲಿ ಯಿಂದ ತಜ್ಞರು ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದ್ಯಂತ ಹೆಚ್ಚಿನ ಕಡೆ ಕಾಡಿನ ಮರ ಹಾಗೂ ಪ್ರಾಣಿಗಳನ್ನು ನಾಶ ಮಾಡಲು ಬೇಟೆಗಾರರ ಜೊತೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕೈಜೋಡಿಸಿರುವ ಬಗ್ಗೆ ಸಂಶಯ ವ್ಯಕ್ತವಾಗುತ್ತಿದೆ ಮಾನ್ಯ ಸಚಿವರು ತಕ್ಷಣ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದೇ ಸಾರ್ವಜನಿಕರ ಅಭಿಪ್ರಾಯವಾಗಿದೆ