ಅ. 12ರಂದು ಗಾಯನ ಕಾರ್ಯಕ್ರಮ, 'ಕದಂಬ ಕಲಾ ರಾಧಕ -2025' ಪ್ರಶಸ್ತಿ ಪ್ರಧಾನ ಕಾರ್ಯಕ್ರಮ
Saturday, October 11, 2025
ಶಿರಸಿ*: ಇಲ್ಲಿನ ಹೊಟೆಲ್ ಸುಪ್ರಿಯಾ ಇಂಟರ್‌ನ್ಯಾಶನಲ್ ಸಭಾಂಗಣದಲ್ಲಿ ನಾಡಿನ ಹೆಮ್ಮೆಯ ಕವಿ ಡಾ.ಕಾ.ವೆಂ.ಶ್ರೀನಿವಾಸಮೂರ್ತಿ ಗೀತೆಗಳ ಗಾಯನ ಕಾರ್ಯಕ್ರಮವನ್ನು ಕರ್ನಾಟಕ ಸುಗಮ ಸಂಗೀತ ಪರಿಷತ್ತು ಉತ್ತರ ಕನ್ನಡ ಘಟಕದ ಸಹಭಾಗಿತ್ವದಲ್ಲಿ ಬನವಾಸಿ ಕದಂಬ ಕಲಾ ಸಾಂಸ್ಕೃತಿಕ ಪರಿಷತ್ತು ವತಿಯಿಂದ ಅ.12 ರಂದು ಸಂಜೆ 4 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಆಯೋಜಿಸಲಾಗಿದೆ. ಇದೇ ವೇಳೆ ಕವನ ಸಂಕಲನ ಬಿಡುಗಡೆ ಹಾಗೂ ಕದಂಬ ಕಲಾರಾಧಕ-2025 ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕದಂಬ ಕಲಾ ಸಾಂಸ್ಕೃತಿಕ ಪರಿಷತ್ತು ಅಧ್ಯಕ್ಷ ಕದಂಬ ರತ್ನಾಕರ ಹೇಳಿದರು.
ಅವರು ಶನಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಗೀತ ಸಾಹಿತ್ಯದ ಮೂಲಕ ಕನ್ನಡದ ಪರಿಚಯವನ್ನು ನಾಡು, ವಿದೇಶಗಳಲ್ಲಿ ಪರಿಚಯಿಸಿದ್ದೇವೆ. ಯುವ ಪೀಳಿಗೆ ಬೇರೆಡೆ ಯೋಚಿಸದೇ ಸಾಂಸ್ಕೃತಿಕವಾಗಿ ನಮ್ಮ ನೆಲದ ಸಂಸ್ಕೃತಿಯನ್ನು ಉಳಿಸಲು ಪ್ರೇರಣೆ ಆಗಿದೆ ಎಂದರು.
ಸುಗಮ ಸಂಗೀತ ಗೀತಗಾಯನವನ್ನು ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಲಿದ್ದು, ಕದಂಬ ಕಲಾ ಸಾಂಸ್ಕೃತಿಕ ಪರಿಷತ್ತು ಅಧ್ಯಕ್ಷ ಕದಂಬ ರತ್ನಾಕರ ಅಧ್ಯಕ್ಷತೆ ವಹಿಸಲಿದ್ದಾರೆ. ಕದಂಬ ರತ್ನಾಕರ ಅವರ ದ್ವಿತೀಯ ಕವನ ಸಂಕಲನ "ಹೊನ್ನುಡಿ' ಕೃತಿಯನ್ನು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಲೋಕಾರ್ಪಣೆಗೊಳಿಸುವರು.