ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

ಕುಂದಾಪುರ :  ಸಮಾಜ ಸೇವೆಯೇ ನನ್ನ ಗುರಿ ಆಟೋ ಚಾಲಕ: ಕೋಡಿ ಅಶೋಕ್ ಪೂಜಾರಿ   +919008146599 ಸಂಪರ್ಕಿಸಿ

ಕುಂದಾಪುರ : ಸಮಾಜ ಸೇವೆಯೇ ನನ್ನ ಗುರಿ ಆಟೋ ಚಾಲಕ: ಕೋಡಿ ಅಶೋಕ್ ಪೂಜಾರಿ +919008146599 ಸಂಪರ್ಕಿಸಿ

ಕುಂದಾಪುರ: 
ಪರೋಪಕಾರಾರ್ಥಂ ಇದಂ ಶರೀರಂ ಸಂಸ್ಕೃತದ ಶುಭಾಷಿತದಂತೆ ಈ ಮಾನವ ಶರೀರ ಇರುವುದೇ ಪರೋಪಕಾರಕ್ಕಾಗಿ ಎನ್ನುವಂತ ವಿಚಾರಧಾರೆಯನ್ನು ಮೈಗೂಡಿಸಿಕೊಂಡಂತಹ ವ್ಯಕ್ತಿ
ಕುಂದಾಪುರ: ತಾಲೂಕಿನ ಕೋಡಿ ಅಶೋಕ್ ಪೂಜಾರಿ ಅವರು ತೀರ ಬಡತನದಲ್ಲಿ ಹುಟ್ಟಿದ ಇವರು ಜೀವನದಲ್ಲಿ ನಾನು ಕೂಡ ಸಹಾಯ ಮಾಡಬೇಕು ಎಂಬ ಹಂಬಲದಿಂದ ಬಾಲ್ಯದಲ್ಲಿ ಮಧ್ಯಂತರದಲ್ಲಿ ಶಾಲೆಯನ್ನು ಬಿಟ್ಟು ಮೊದಲಿಗೆ ಖಾಸಗಿ ಬಸ್ಸಿನ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಾರೆ, ಕಳೆದ 17 ವರ್ಷಗಳಿಂದ ಬಸ್ ಕಂಡಕ್ಟರ್ ಕಾರ್ಯನಿರ್ವಹಿಸಿ ಕೆಲಸ ಬಿಟ್ಟು ,ಆಟೋ ಖರೀದಿ ಮಾಡಿ ಮನೆಯ ಸುತ್ತಮುತ್ತಲಿನ ಜನರಿಗೆ ತುರ್ತು ಸಮಯದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು, ಗರ್ಭಿಣಿ ಸ್ತ್ರೀಯರಿಗೆ ಪ್ರಯಾಣದ ಉಚಿತ ಸೇವೆ ಮಾಡುವುದು, ಹೀಗೆ ಪ್ರಾರಂಭತ: ಸಮಾಜ ಸೇವೆಯಲ್ಲಿ ತೊಡಗಿಕೊಂಡು ಕೋಡಿ ಭಾಗದಲ್ಲಿ ಜನ ಮೆಚ್ಚಿದ ಹುಡುಗನಾಗಿ ಜನಪ್ರಿಯ ರಾಗುತ್ತಾರೆ, 
ಹೌದು ಇಷ್ಟಕ್ಕೆನಿಲ್ಲದ ಇವರ ಸೇವಾ ಭಾವನೆ ಕಳೆದ ಮೂರು ವರ್ಷಗಳ ಹಿಂದೆ ಟೀಮ್ ಸಮಾನತಂ ಎಂಬ ಸಮಾನ ಮನಸ್ಕರ ಸಂಘಟನೆ ಕಟ್ಟಿಕೊಂಡು ಊರಿನ ಹಿರಿಯರು ಯುವಕರ ಜೊತೆ ಕೂಡಿಕೊಂಡು ಅನಾರೋಗ್ಯ ಪೀಡಿತರಿಗೆ ಸಹಾಯಧನ ನೀಡುತ್ತಿದ್ದು ಈಗಾಗಲೇ 35 ಕ್ಕೂ ಹೆಚ್ಚು ಫಲಾನುಭವಿಗಳಿಗೆ 7 ಲಕ್ಷಕ್ಕೂ ಅಧಿಕ ಹಣದ ನೆರವು ನೀಡಿದ್ದಾರೆ. ಕುಂದಾಪುರ ಭಾಗದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪುಸ್ತಕ ಕಿಟ್ ವಿತರಣೆ, ಉಚಿತ ರಕ್ತದಾನ ಶಿಬಿರ, ಅಸಹಾಯಕರಿಗೆ ನೆರವಿನ ಹಸ್ತ ಇತ್ಯಾದಿ ಇತ್ಯಾದಿ ಸೇವೆ ಮಾಡುತ್ತಾ ಕುಂದಾಪುರ ತಾಲೂಕಿನತ್ಯಂತ ಹಾಗೂ ಜಿಲ್ಲೆಯ ಹಲವು ಕಡೆ ಇವರ ಜನರ ಸೇವೆಯಿಂದ ಜನತೆಯ ಜನ ಮೆಚ್ಚುಗೆ ಪಾತ್ರರಾಗಿದ್ದಾರೆ, 

ಕರೋನ ಸಮಯದಲ್ಲಿ ಆಹಾರ ಕಿಟ್, ಔಷಧ ವಿತರಣೆ , ಕರೋನದಲ್ಲಿ ಮೃತಪಟ್ಟ ಸಾವಿನ ದಪನ ಕಾರ್ಯ ಮಾಡಿದ್ದಾರೆ, 
ಇವರ ಎಲ್ಲಾ ಸೇವೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಗೌರವಿಸಿ ಸನ್ಮಾನಿಸಲಾಯಿತು, ಕುಂದಾಪುರ ಬೈಂದೂರ್ ಭಾಗದ ಆಶಕ್ತರ ನೆರವಿಗಾಗಿ ಇವರ ಕಲ್ಪವೃಕ್ಷ ಎಂಬ ಟ್ರಸ್ಟ್ರ ರಚನೆ ಗೊಳ್ಳುತ್ತಿದೆ. ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಜನತೆಗೆ ಇನ್ನಷ್ಟು ಸೇವೆ ಮಾಡುವ ನಿಟ್ಟಿನಲ್ಲಿ ಮುಂದಾಗಿದ್ದಾರೆ, ಆದರೆ ಕಲ್ಪವೃಕ್ಷ ಎಂಬ ಟ್ರಸ್ಟ್ ಗೆ ರಾಜ್ಯದ ಹಾಗೂ ಜಿಲ್ಲೆಯ ಸ ಹೃದಯ ಮಾನವತೆಯ ಹೃದಯವಂತ ಶ್ರೀಮಂತಿಕೆಯ ಜನರು ಕಲ್ಪವೃಕ್ಷ ಟ್ರಸ್ಟಿನ ಸದ್ಯಸರಾಗುವ ಮೂಲಕ ಬಡವರ ಸೇವೆ ಕಾರ್ಯ ಮಾಡುವ ಅವಕಾಶ ಸಿಗುವಂತಾಗುತ್ತದೆ ಎಂದು ಸಮಾಜ ಸೇವಕ ಹೃದಯವಂತ ರತ್ನಾಕರ ಕರಾವಳಿ ಭಾಗದ ಕರ್ಣ ಎಂದೆ ಜನಪ್ರಿಯರಾಗಿರುವ ಕೋಡಿ ಅಶೋಕ್ ಪೂಜಾರಿಯವರು ಮನವಿ ಮಾಡಿಕೊಂಡರು, 
ಕೋಡಿ ಭಾಗದ ಯುವಕರನ್ನು ಹಾಗೂ ಹಿರಿಯರನ್ನು ಸೇರಿಕೊಂಡು ಬಹಳಷ್ಟು ವರ್ಷದಿಂದ ಶೈಕ್ಷಣಿಕ, ಸಾಂಸ್ಕೃತಿಕ, ಆರೋಗ್ಯ ಕ್ಷೇತ್ರ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಉತ್ತಮ ಜನಪರ ಸೇವೆ ಮಾಡಿ ಸಮಾಜ ಸೇವೆಯ ಮೂಲಕ ಜನರ ಮನ ಗೆದ್ದ ಅಶೋಕ್ ಪೂಜಾರಿ ಕೋಡಿ ಯವರು ಇನ್ನಷ್ಟು ಅಶಕ್ತರ ಸೇವೆ ಮಾಡುವ ಅವಕಾಶ ಸಿಗಲಿ ಎಂಬುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ 
ಕೋಡಿ ಅಶೋಕ್ ಪೂಜಾರಿಯವರಿಗೆ ಮಾಡುವ ಕಾರ್ಯಕ್ಕೆ ಶ್ರೀದೇವರು ಒಳಿತು ಮಾಡಿ ಬಡ ಸಂತ್ರಸ್ತರಿಗೆ ಇನ್ನು ಹೆಚ್ಚಿನ ಸಹಾಯ ಮಾಡುವ ಶಕ್ತಿ ಕರುಣಿಸಲಿ ಎಂದು ಸಮಸ್ತ ಜನತೆಯ ಪರವಾಗಿ ಕೋಸ್ಟಲ್ ನ್ಯೂಸ್ ತಂಡ ಶ್ರೀದೇವರು   ಆಶೀರ್ವಾದ ನೀಡಲಿ ಎಂದು ಬೇಡಿಕೊಳ್ಳುತ್ತೇವೆ. 

COSTALNEWS.  Kundapura
ವರದಿ: ದಾಮೋದರ ಮೊಗವೀರ ನಾಯಕವಾಡಿ ವರದಿಗಾರರು

Ads on article

Advertise in articles 1

advertising articles 2

Advertise under the article