ಕುಂದಾಪುರ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ 70 ಫೈಬರ್ ಸ್ಟೂಲ್ ನೀಡಿ ಮಾನವೀಯತೆ ಮೆರೆದ : ಮುಂಬೈ ಉದ್ಯಮಿ
Tuesday, October 7, 2025
ಕುಂದಾಪುರ ಸರಕಾರಿ ಆಸ್ಪತ್ರೆ ಖಾಸಗಿ ಆಸ್ಪತ್ರೆ ಗಿಂತ ಕಡಿಮೆ ಇಲ್ಲ ಎಂಬಂತೆ ಎಲ್ಲರ ಗಮನ ಸೆಳೆದಿದೆ, ದಿನನಿತ್ಯ ಸ್ವಚ್ಛತೆ , ಮತ್ತು ಕೆಲಸ ಮಾಡುವ ಸಿಬ್ಬಂದಿಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತದೆ, ಹಾಗೂ ರೋಗಿಗಳಿಗೆ ಮತ್ತು ರೋಗಿಗಳ ಜೊತೆ ಇರುವ ಸಂಬಂಧಿಕರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಹಿರಿಯ ವೈದ್ಯರು ಮತ್ತು ಆಡಳಿತ ವರ್ಗ ದಿನದ 24 ಗಂಟೆಗಳ ಕಾಲ ನಿಗಾ ನಿಗಬಯಸಲಾಗುತ್ತದೆ,
ಜಿಲ್ಲೆಯಿಂದ ಹಾಗೂ ಹೊರ ಜಿಲ್ಲೆಯಿಂದ ರೋಗಿಗಳು ದಿನನಿತ್ಯ ಸಾಕಷ್ಟು ಬಂದು ಹೋಗುವ ಸಾರ್ವಜನಿಕ ಆಸ್ಪತ್ರೆ ಇದಾಗಿದ್ದು ಮತ್ತು ಅತ್ಯುತ್ತಮ ವೈದ್ಯರು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಬಡ ರೋಗಿಗಳಿಗೆ ಸಮಸ್ಯೆ ಆಗಬಾರದೆಂದು ಆಸ್ಪತ್ರೆಯ ವೈದ್ಯ ಡಾಕ್ಟರ್ ನಾಗೇಶ್ ಪುತ್ರನ್ ಅವರ ಸ್ನೇಹಿತರಾದ ಮುಂಬೈಯಲ್ಲಿ ಉದ್ಯಮಿಯಾಗಿರುವ ಗಿಳಿಯಾರು ಬಡಾಮನೆ ರತ್ನಾಕರ ಶೆಟ್ಟಿ ಹಾಗು ಅರುಣ್ ಕುಮಾರ್ ಶೆಟ್ಟಿಯವರು ಆಸ್ಪತ್ರೆಗೆ ರೋಗಿಗಳ ಜೊತೆ ಇರುವವರ ಉಪಯೋಗಕ್ಕಾಗಿ, 70 ಫೈಬರ್ ಸ್ಟೂಲ್ ಗಳನ್ನು ಹೃದಯವಂತ ದಾನಿಗಳು ನೀಡಿರುತ್ತಾರೆ.
ಈ ಪುಣ್ಯದ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಆಸ್ಪತ್ರೆಯ ಆಡಳಿತ ಅಧಿಕಾರಿ ಚಂದ್ರ ಮರಕಾಲ ಮತ್ತು ವೈದ್ಯರ ವರ್ಗ ಸಿಬ್ಬಂದಿಗಳು ರೋಗಿಯ ಸಂಬಂಧಿಕರು ಕೃತಜ್ಞತೆ ಸಲ್ಲಿಸಿದ್ದಾರೆ,
ಆಸ್ಪತ್ರೆ ವೈದ್ಯರು ವೈದ್ಯಕೀಯ ತಪಾಸಣೆಯ ಜೊತೆ ಜೊತೆಯಲಿ ಆಸ್ಪತ್ರೆಯ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ನೋಡಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ
ವರದಿ: ಸತೀಶ್ ಕಂಚುಗೋಡು ಕೋಸ್ಟಲ್ ನ್ಯೂಸ್ ಕುಂದಾಪುರ