ಸಮೀಕ್ಷೆ ಕಾರ್ಯದಲ್ಲಿ ನಿರ್ಲಕ್ಷ್ಯ: ಉಡುಪಿ ಜಿಲ್ಲೆಯಲ್ಲಿ ಮೂವರು ಶಿಕ್ಷಕಿಯರಿಗೆ ಸಸ್ಪೆಂಡ್ !!!
Saturday, October 4, 2025
ಉಡುಪಿ: ಒಳಕಾಡು ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿಯರಾದ ಸುರೇಖ, ರತ್ನಾ, ಉದ್ಯಾವರ ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲಾ ಸಹಶಿಕ್ಷಕಿ ಪ್ರಭಾ ಬಿ. ಮೂವರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ.
ಹೌದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ನಿಯೋಜನೆ ಕುರಿತ ಆದೇಶ ಸ್ವೀಕರಿಸದೆ ನಿರ್ಲಕ್ಷ್ಯಸಿದ್ದ ಶಿಕ್ಷಕಿಯರನ್ನು ಅಮಾನತು ಮಾಡಲಾಗಿದೆ. ಆದೇಶ ಪ್ರತಿ ಸ್ವೀಕರಿಸಲು ಹಲವು ಬಾರಿ ಸಂಪರ್ಕಿಸಿದರೂ ನಿರ್ಲಕ್ಷಿಸಿದರು ಮಾತ್ರವಲ್ಲದೆ ನೋಟಿಸ್‌ಗೂ ಸಮಜಾಯಿಷಿ ನೀಡಿದ ಕಾರಣ ಅಮಾನತು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ,
ಈ ರೀತಿಯ ಸರಕಾರಿ ಕಾರ್ಯದ ಸೇವೆ ನಿರ್ಲಕ್ಷಿ ಮಾಡಿದರೆ ಇನ್ನಷ್ಟು ಶಿಕ್ಷಕರ ಅಮಾನತು ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.