ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

ಶಿರಸಿ ಕಾಲೇಜು ರಸ್ತೆಯಲ್ಲಿ ಬೈಕ್ ಸವಾರನ ಮೇಲೆ ಕಾರು ಹತ್ತಿಸಿ , ದರೋಡೆಗೆ ಯತ್ನ?

ಶಿರಸಿ ಕಾಲೇಜು ರಸ್ತೆಯಲ್ಲಿ ಬೈಕ್ ಸವಾರನ ಮೇಲೆ ಕಾರು ಹತ್ತಿಸಿ , ದರೋಡೆಗೆ ಯತ್ನ?

ಶಿರಸಿ* :ಕಾಲೇಜ ರಸ್ತೆಯಲ್ಲಿ ಬೈಕ್ ಅಡ್ಡ ಹಾಕಿ,ಕಾರು ಹತ್ತಿಸಿ ಹಲ್ಲೆ ಮಾಡಿ ದರೋಡೆಗೆ ಯತ್ನಿಸಿದ ಘಟನೆಯೊoದು ವರದಿಯಾಗಿದೆ. ಇಂದು ಮಧ್ಯಾಹ್ನ ನಡೆದ ಘಟನೆಯಲ್ಲಿ ಮಾರುತಿ ಹನುಮಂತ ಮರಾಠೆ ಸಾ: ಕೆಇಬಿ ರಸ್ತೆ, ಶಿರಸಿ ಇವರು ತಮ್ಮ ಬುಲೆಟ್ ಬೈಕ್ ನಲ್ಲಿ ಕಾಲೇಜು ರಸ್ತೆಯಲ್ಲಿ ಹೋಗುತ್ತಿರುವಾಗ ನಾಲ್ಕು ಜನರಿದ್ದ ಕಾರೊoದು ಇವರ ಬೈಕ್ ಮೇಲೆ ನುಗ್ಗಿತೆoದು ಹೇಳಲಾಗುತ್ತಿದೆ.ಸವಾರ ಕೆಳಗೆ ಬಿದ್ದ ಕೂಡಲೇ ನಾಲ್ಕು ಜನ ಹಲ್ಲೆ ಮಾಡಿದ್ದು, ಜನ ಸೇರುತ್ತಿರುವಂತೆಯೇ ಮಾರುತಿ ಮರಾಟೆಯ ಬೈಕ್ ಕೀಲಿ ಕಸಿದು, ತಾವು ತಂದ ಕಾರನ್ನು ಅಲ್ಲೇ ಬಿಟ್ಟು ಪರಾರಿ ಆದರೆoದು ಹೇಳಲಾಗಿದೆ. ಈ ಮಧ್ಯೆ ಬೈಕ್ ನ ಬಾಕ್ಸ್ ನಲ್ಲಿದ್ದ ಸುಮಾರು ಎರಡು ಲಕ್ಷ ರೂಪಾಯಿಗಳನ್ನು ಅಪಹರಿಸಲಾಗಿದೆ ಎಂದು ಶಂಕೆ ಇದೆ.NMPS ಪಿ ಎಸ್ ಐ ಬಸವರಾಜ ಕನಶೆಟ್ಟಿ ಹಾಗೂ ಸಿಬ್ಬಂದಿ ಸ್ಥಳದಲ್ಲಿದ್ದು ತನಿಖೆ ಕೈಗೊಂಡಿದ್ದಾರೆ ಘಟನೆಯ ಕುರಿತು ಭೀಮ ಘರ್ಜನೆ ಸಂಘಟನೆ ಅಧ್ಯಕ್ಷ ಪುನೀತ್ ಮರಾಟೆ ಮಾಹಿತಿ ನೀಡಿದ್ದು ತನಿಖೆಗೆ ಆಗ್ರಹಿಸಿದ್ದಾರೆ.


Ads on article

Advertise in articles 1

advertising articles 2

Advertise under the article