ಕುಂದಾಪುರ: ಬೈಕಿಗೆ ಹಂದಿ ಢಿಕ್ಕಿ: ; ಬಿದ್ದಿದ್ದ ಬೈಕ್ ಮೇಲೆ ಚಲಿಸಿದ ಟಿಪ್ಪರ್ :ASI ಬಸವರಾಜ್ ಗಾಯ ;
Wednesday, September 24, 2025
ಕುಂದಾಪುರ: ಬೈಕಿಗೆ ವನ್ಯಜೀವಿ ಕಾಡುಹಂದಿ ಢಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ಗಂಗೊಳ್ಳಿ ಪೊಲೀಸ್ ಠಾಣೆಯ ಎಎಸ್‌ಐ ಬನ್ನಾಡಿಯ ನಿವಾಸಿ ಬಸವರಾಜ್ ಪಿ.ಎಂ. ಗಾಯಗೊಂಡ ಘಟನೆ ಕೋಟದ ಮಣೂರು ಸಮೀಪ ಮಂಗಳವಾರ ಸಂಭವಿಸಿದೆ.
ಗಸ್ತು ಕರ್ತವ್ಯ ಮುಗಿಸಿ ಬೆಳಗಿನ ಜಾವ ಗಂಗೊಳ್ಳಿ ಪೊಲೀಸ್ ಠಾಣೆಯಿಂದ ಕರ್ತವ್ಯ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ಬ್ರಹ್ಮಾವರ ತಾಲೂಕು ಮಣೂರಿನಲ್ಲಿ ಕಾಡು ಹಂದಿ ಅಡ್ಡ ಬಂದು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದರೂ, ಅದನ್ನು ಕಂಡ ಲಾರಿಯೊಂದರ ಚಾಲಕನು ಬಸವರಾಜ್ ಅವರನ್ನು ರಸ್ತೆಯ ಬದಿಯಲ್ಲಿ ಕುಳುಹಿಸಿದ ವೇಳೆ ರಸ್ತೆಯಲ್ಲಿ ಬಿದ್ದಿದ್ದ ಬೈಕಿಗೆ ಕುಂದಾಪುರ ಕಡೆಯಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ ಯೊಂದು ಚಾಲಕ ಬೈಕಿನ ಮೇಲೆಯೇ ಚಲಾಯಿಸಿಕೊಂಡು ಪರಾರಿಯಾದನು ಎನ್ನಲಾಗಿದೆ,
. ಬೈಕ್ ಹಾನಿಗೀಡಾಗಿದೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚಿನ ಮಾಹಿತಿ ಪೊಲೀಸರಿಂದ ತಿಳಿಯಬೇಕಾಗಿದೆ