ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

 ಕುಂದಾಪುರ:  ಪುರಸಭೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಹೊಳೆಗೆ ಮಣ್ಣು ತುಂಬಿಸಿ  ಭೂ ಮಾಫಿಯಾ ಹುನ್ನಾರ..!?  ಪಾಲುದಾರರು ಯಾರು..!!??

ಕುಂದಾಪುರ: ಪುರಸಭೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಹೊಳೆಗೆ ಮಣ್ಣು ತುಂಬಿಸಿ ಭೂ ಮಾಫಿಯಾ ಹುನ್ನಾರ..!? ಪಾಲುದಾರರು ಯಾರು..!!??

ಕುಂದಾಪುರ: ಕಳೆದ ಹಲವು ತಿಂಗಳಿಂದ ಕುಂದಾಪುರ ಪುರಸಭೆ ವ್ಯಾಪ್ತಿಯ ಕೋಡಿ ಭಾಗದಲ್ಲಿ ಹೊಳೆಯ ಬದಿ ದಂಡೆಗೆ ಅಕ್ರಮವಾಗಿ ಮಣ್ಣು ತುಂಬಿಸಿ ಭೂ ಮಾಫಿಯಾ ದಂಧೆ ಹುನ್ನಾರ ನಡೆಯುತ್ತಿದೆ ಎಂದು ಸ್ಥಳೀಯ ಸಾರ್ವಜನಿಕರು ಆರೋಪ, 

ಕುಂದಾಪುರ - ಕೋಡಿ ಸಂಪರ್ಕಿಸುವ ಮುಖ್ಯರಸ್ತೆಯ ಭಾಗದ ಶಿವಾಲಯ ರಸ್ತೆ ಸಮೀಪದ ನಾಗ ಜಟ್ಟಿಗೇಶ್ವರ ದೇವಸ್ಥಾನದ ಮುಂಭಾಗದ ಹೊಳೆಗೆ ಅಕ್ರಮವಾಗಿ ಮಣ್ಣು ತುಂಬಿಸಿ ಭೂ ಮಾಫಿಯಾ ನಡೆಸುವ ಹುನ್ನಾರ ನಡೆಯುತ್ತಿದೆ ಎನ್ನಲಾಗಿದೆ, ಹಾಗೆ ಇದೇ ಜಾಗದಲ್ಲಿ ಬೋಟ್ ಬಿಲ್ಡಿಂಗ್ ಇದೆ, ಬೋಟ್ ಬಿಲ್ಡಿಂಗ್ ನಡೆಸುವರು ಪುರಸಭೆಯ ಯಾವುದೇ ಪರವನಿಗೆ ಇಲ್ಲಿಯ ತನಕ ಪಡೆಯಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ, 
ಹೌದು ಭೂ ಮಾಫಿಯಾ ಮಾಡುವವರು ರಾಜಕೀಯ ಬಲ ಹಣ ಬಲ ಪ್ರಯೋಗ ಮಾಡಿ ಸ್ಥಳೀಯರಿಗೆ ಭಯದ ವಾತಾವರಣ ನಿರ್ಮಾಣ ಮಾಡಿ, ಕಣ್ಣಿದ್ದು ಕುರುಡರಾಗಿ ಬಾಯಿ ಇದ್ದು ಮೂಕನಾಗಿ ಕುಳಿತು ಕಾದು ನೋಡುತ್ತಿದ್ದಾರೆ,




  ಈ ಪ್ರಕರಣದ ಬಗ್ಗೆ ಈ ಹಿಂದೆ ಕೋಡಿ ವ್ಯಾಪ್ತಿಯ ಪುರಸಭೆ ಮಹಿಳಾ ಸದಸ್ಯ ಯೋರ್ವರು ಪುರಸಭೆ ಅಧಿಕಾರಿಗಳಿಗೆ ಹಾಗೂ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ, 
ಆದರೆ ಸದ್ಯಸರ ಮಾತಿಗೆ ಬೆಂಬಲ ನೀಡಿದಂತೆ ನಾಟಕ ಆಡಿ ಕಾಟಾಚಾರಕ್ಕೆ ನೋಟಿಸ್ ಮಾಡಿ ಕೈ ತೊಳೆದುಕೊಂಡ ಪ್ರಸಂಗ ನಡೆದಿದೆ, 
ಪುರಸಭೆ ಅಧ್ಯಕ್ಷರು ಮೋಹನ್ ದಾಸ್ ಶೆಣೈ ಯವರು ಕುಂದಾಪುರ ಭಾಗದಲ್ಲಿ ಸಿಂಪಲ್ ಶೆಣೈ ಯವರಾಗಿ ಜನಪ್ರಿಯತೆ ಹೊಂದಿದವರು ಈ ಪ್ರಕರಣ ನೋಡಿದರೆ ಸಿಂಪಲ್ ಶೆಣೈ ಯವರೊ!! ........ !!!!??? ಶೆಣೈ ಯವರೊ!!?? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ, 

ಭೂ ಮಾಫಿಯಾ ದಂದೆ ಕೋರರು ಹಿರಿಯ ರಾಜಕೀಯ ನಾಯಕರ ಹೆಸರು ಬಳಸಿ ಸ್ಥಳೀಯ ಜನಪ್ರತಿನಿಧಿಗಳ ಹೆಸರಿನಲ್ಲಿ ಈ ದಂಧೆಯ ಹುನ್ನಾರ ನಡೆಯುತ್ತಿದೆ, ಇಂತಹ ವ್ಯಕ್ತಿಯಿಂದ ಹಿರಿಯ ರಾಜಕೀಯ ನಾಯಕರ ಹೆಸರು ಕೆಡಿಸುವ ಕೆಲಸ ಮುಂದಿನ ದಿನದಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ, 
ಈ ಭೂ ಮಾಫಿಯಾ ನಡೆಸಲು ಪುರಸಭೆ ಅಧಿಕಾರಿಗಳು, ಕಂದಾಯ ಇಲಾಖೆಯವರು, ಅರಣ್ಯ ಇಲಾಖೆಯವರು, ಹಾಗೂ ಸಂಬಂಧಪಟ್ಟ ಇಲಾಖೆಯವರು ಕಣ್ಣಿದ್ದು ಕುರುಡರಾಗಿ ವರ್ತಿಸುತ್ತಿರುವುದು ನೋಡಿದರೆ ಎಲ್ಲರೂ ಕಾಣದ ಕಣ್ಣಿಗೆ ಕೈ ಗೊಂಬೆ ಆಗಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ !?? 

ಕುಂದಾಪುರ ಪುರಸಭೆಯಲ್ಲಿ ಉತ್ತಮ ಕೆಲಸ ಮಾಡುವ ಒಂದಷ್ಟು ಒಳ್ಳೆಯ ಸದ್ಯಸರು ಇದ್ದಾರೆ , ಈ ಪ್ರಕರಣದ ಬಗ್ಗೆ ಪ್ರಜ್ಞಾವಂತ ಪ್ರಾಮಾಣಿಕ ಪುರಸಭೆಯ ಸದಸ್ಯರು ತಕ್ಷಣ ಅಕ್ರಮ ಭೂ ಒತ್ತುವರಿ ಮಾಡಿಕೊಂಡವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗ ಬೇಕೆನ್ನುವುದೇ ಪ್ರಜ್ಞಾವಂತ ಸ್ಥಳೀಯರ ಆಗ್ರಹವಾಗಿದೆ, 
ತಕ್ಷಣ ಮಾನ್ಯ ಕುಂದಾಪುರ ಕ್ಷೇತ್ರದ ಶಾಸಕರಾದ ಶಾಸಕ ಕಿರಣ್ ಕುಮಾ‌ರ್ ಕೊಡ್ಲಿ ಯವರು ಪುರಸಭೆಯ ಆಡಳಿತ ಅಧಿಕಾರಿಗಳು ಮತ್ತು ಅಧ್ಯಕ್ಷರು ಸರ್ವ ಸದಸ್ಯರು ಇತ್ತ ಕಡೆ ಗಮನಹರಿಸಿ ಭೂ ಮಾಫಿಯಾ ಮಾಡುವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದೇ ಸ್ಥಳೀಯ ಸಾರ್ವಜನಿಕರ ಅಭಿಪ್ರಾಯವಾಗಿದೆ. 

ಮಾನ್ಯ ಕಂದಾಯ ಸಚಿವರು ಕುಂದಾಪುರ ಕೋಡಿ ಭಾಗದಲ್ಲಿ ಹೊಳೆಗೆ ಮಣ್ಣು ತುಂಬಿಸಿ ಭೂ ಮಾಫಿಯಾ ಹುನ್ನಾರ ನಡೆಯುತ್ತಿದೆ ಇದಕ್ಕೆ ಈ ಕೂಡಲೇ ಕ್ರಮ ಕೈಗೊಳ್ಳಬೇಕು , ಎಂಬುದೇ ನಿಮ್ಮ COSTALNEWS ಆಶಯ

Ads on article

Advertise in articles 1

advertising articles 2

Advertise under the article