ಕುಂದಾಪುರ: ಸಮಾನತೆ ಸಭೆಗೆ ಅಹಿಂಸಾ ನಾಯಕ; ನಟ ಚೇತನ್ ಗಂಗೊಳ್ಳಿಗೆ ಆಗಮನ
Sunday, September 21, 2025
ಬೈಂದೂರು: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರದ ಗಂಗೊಳ್ಳಿ ಬಾವಿ ಕಟ್ಟೆ ಅಂಬೇಡ್ಕರ್ ಸಭಾಭವನದಲ್ಲಿ ಆದಿತ್ಯವಾರ ಸಂಜೆ 6 ಗಂಟೆಗೆ ಸಮಾನತೆ ಸಭೆ ಜರುಗಲಿದೆ ಕಾರ್ಯಕ್ರಮಕ್ಕೆ ಅಹಿಂಸಾ ನಾಯಕ ನಟ ಚೇತನ್ ಆಗಮಿಸಲಿದ್ದಾರೆ ಎಂದು ದಲಿತ ಮುಖಂಡ ಜಗದೀಶ್ ಗಂಗೊಳ್ಳಿ ಹಾಗೂ ಸತೀಶ್ ಕಂಚುಗೋಡು ತಿಳಿಸಿದ್ದಾರೆ
ಮೌಢ್ಯ ಮತ್ತು ಸಾಮಾಜಿಕ ಅ ಸಮಾನತೆ ಯನ್ನು ದೂರ ಮಾಡಿ ಸಮಾನತೆ ಸಮಾಜ ನಿರ್ಮಾಣ ಮಾಡುವ ಮೂಲಕ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಸಮಾಜ ಸುಧಾರಕರ ಅಗತ್ಯವಿದೆ ಎಂಬ ನಿಟ್ಟಿನಲ್ಲಿ ಕಾರ್ಯಕ್ರಮ ದಲಿತ ಮುಖಂಡರು ಮತ್ತು ಸಮಾನ ವಾದಿಗಳ ಒಕ್ಕೂಟ ಬೈಂದೂರು ಕ್ಷೇತ್ರದ ಘಟಕ ಗಂಗೊಳ್ಳಿ ಅವರು ಆಯೋಜಿಸಿದ್ದಾರೆ
ವರದಿ: ಗೋಪಾಲ್ ಕವ್ರಾಡಿ COSTALNEWS ಕುಂದಾಪುರ
ಈ ಕಾರ್ಯಕ್ರಮಕ್ಕೆ ಕುಂದಾಪುರ ಹಿರಿಯ ನ್ಯಾಯವಾದಿ ರವಿಕಿರಣ್ ಮುಡೇಶ್ವರ, ಹಾಗೂ ಕೊರಗ ಸಮುದಾಯದ ನಾಯಕ ಗಣೇಶ್ ಕುಂಭಾಸಿ ಮತ್ತು ದಲಿತ ಮುಖಂಡರು ಹಾಗೂ ಸಮಾಜ ಸುಧಾರಕರು, ಲೇಖಕರು, ಸಾಹಿತಿಗಳು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟನೆಯ ನಾಯಕರು ಹೇಳಿದ್ದಾರೆ
ಸಭೆಯಲ್ಲಿ ಎಲ್ಲಾ ಜಾತಿಯ ನಾಯಕರು ಮತ್ತು ಧರ್ಮದವರು ಆಗಮಿಸಿ ಸಮಾನತೆ ಸಭೆಯ ಚರ್ಚೆಗೆ ಅವಕಾಶ ನೀಡಲಾಗಿದೆ,
ಆದಿತ್ಯವಾರ 21- 09- 2025 ಸಂಜೆ 6:00ಗೆ ಗಂಗೊಳ್ಳಿ ಗ್ರಾಮದ ಬಾವಿ ಕಟ್ಟೆ ಅಂಬೇಡ್ಕರ್ ಸಭಾಭವನದಲ್ಲಿ ಕಾರ್ಯಕ್ರಮ ಜರುಗಲಿದೆ
ವರದಿ: ಗೋಪಾಲ್ ಕವ್ರಾಡಿ COSTALNEWS ಕುಂದಾಪುರ