ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರಿಸಿಕೊಂಡ ಗರುಡ ಗ್ಯಾಂಗಿನ ಆರೋಪಿ ಅರೆಸ್ಟ್ ಮಾಡಿದ: ಕಾಪು ಪೊಲೀಸ್
Friday, September 19, 2025
ಬೈಂದೂರು: 2019- 20 ರ ಸಮಯದಲ್ಲಿ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಗರುಡ ಗ್ಯಾಂಗಿನ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ಪೊಲೀಸರನ್ನು ಚಳ್ಳೆ ಹಣ್ಣು ತಿನಿಸಿ ತಲೆಮರಿಸಿಕೊಂಡ ಗರುಡ ಗ್ಯಾಂಗಿನ ಕಿಂಗ್ ಪಿನ್ ಆರೋಪಿ ಮೊಹಮ್ಮದ್ ಆಸೀಪ್ ನನ್ನು ಶುಕ್ರವಾರ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದ ಗ್ರಾಮದ ಮುಸ್ಲಿಂ ಕೇರಿ ಬಡಕೆರೆ ಗ್ರಾಮದ ನಿವಾಸಿ ಎಂಬಾತನನ್ನು ಚಿಕ್ಕಮಗಳೂರು ನಗರದ ಗೌರಿ ಕಾಲುವೆ ಎಂಬಲ್ಲಿ ಪತ್ತೆ ಹಚ್ಚಿ ಕಾಪು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು,,
ಈತನ ಮೇಲೆ ಇವಾಗಲೇ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಹಲವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ,
ಪ್ರಕರಣ:
ಕಾಪು ಪೊಲೀಸ್ ಠಾಣಾ ಅಕ್ರ:107/2020 ಕಲಂ:143, 148,448,323,324,354,506,424,307 ಜೊತೆಗೆ 149 ಐಪಿಸಿ ಪ್ರಕರಣವು ಮಾನ್ಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎಸ್.ಸಿ ನಂಬ್ರ 18/2020 ರಲ್ಲಿ ಗರುಡ ಗ್ಯಾಂಗಿನ ಆರೋಪಿತನಾದ ಮೊಹಮ್ಮದ್ ಆಸೀಪ್ ಪ್ರಾಯ:35 ವಷ೯, ತಂದೆ:ಎಂ. ಮೊಹಮ್ಮದ್ ಹನೀಪ್ ವಾಸ:ಮನೆ ನಂಬ್ರ 2-55 ಸಿ ಬದ್ರಿಯಾ ಹೌಸ್, ಮುಸ್ಲಿಂ ಕೇರಿ, ಬಡಾಕೇರೆ, ನಾವುಂದ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಈತನು ಪೆಬ್ರವರಿ 2025 ರಿಂದ ಮಾನ್ಯ ನ್ಯಾಯಾಲಯದ ವಿಚಾರಣೆಗೆ ವಿಳಾಸದಲ್ಲಿ ಕೂಡ ಇರದೇ ತಲೆ ಮರೆಸಿಕೊಂಡಿದ್ದು, ಈತನ ಮೇಲೆ ಕಾಪು ಪೊಲೀಸ್ ಠಾಣೆಯಲ್ಲಿ ಅಲ್ಲದೇ,ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ 04 ಪ್ರಕರಣಗಳು ಬೈಂದೂರು ಪೊಲೀಸ್ ಠಾಣೆಯಲ್ಲಿ 02 ಪ್ರಕರಣ ಹಾಗೂ ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆಯಲ್ಲಿ -02 ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ -02, ಪ್ರಕರಣಗಳು ದಾಖಲಾಗಿದ್ದು ಮಾನ್ಯ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿದ್ದು ಯಾವುದೇ ಪ್ರಕರಣಗಳಲ್ಲಿಯೂ ಮಾನ್ಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿರುತ್ತಾನೆ.
ಕಾಪು ಪೊಲೀಸ್ ಠಾಣಾ ಸಿಬ್ಬಂದಿಗಳಾದ ಹೆಚ್.ಸಿ 137 ನೇ ಮಹಮ್ಮದ್ ರಪೀಕ್ , ಸಿಪಿಸಿ 1222 ಮೋಹನ ಚಂದ್ರ ಹಾಗೂ ಸಿಪಿಸಿ 113 ನೇ ಗಣೇಶ್ ಶೆಟ್ಟಿ ರವರು ದಿನಾಂಕ:18/09/2025 ರಂದು ಚಿಕ್ಕಮಗಳೂರು ನಗರದ ಗೌರಿ ಕಾಲುವೆ ಎಂಬಲ್ಲಿ ಪತ್ತೆ ಹಚ್ಚಿ ಡಾ. ಹರ್ಷ ಪ್ರಿಯಂವದಾ. ಐ.ಪಿ.ಎಸ್ ಸಹಾಯಕ ಪೊಲೀಸ್ ಅಧಿಕ್ಷಕರು ಕಾರ್ಕಳ ಉಪ ವಿಭಾಗ ಜಯಶ್ರೀ ಎಸ್ ಮಾಣೆ ಸಿ.ಪಿ.ಐ ಕಾಪು ವೃತ್ತ, ಹಾಗೂ ತೇಜಸ್ವಿ.ಟಿ.ಐ. ಪಿ.ಎಸ್.ಐ ಕಾಪು ಪೊಲೀಸ್ ಠಾಣೆ ಇವರ ಮಾಗ೯ದಶ೯ನದಲ್ಲಿ ಈತನನ್ನು ಮಾನ್ಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಡುಪಿ ಇಲ್ಲಿನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಧೀಶರು ದಿನಾಂಕ:16/10/2025 ರವರೆಗ ನ್ಯಾಯಾಂಗ ಬಂದನ ವಿಧಿಸಿ ಆದೇಶ ನೀಡಿರುತ್ತಾರೆ. ವಾರೆಂಟ್ ಅಸಾಮಿಯನ್ನು ಹಿರಿಯಡ್ಕ ದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಬಿಡಲಾಗಿದೆ.
ಕಾಪು ಪೊಲೀಸರ ಕರ್ತವ್ಯ ನಿಷ್ಠೆಗೆ ಹಾಗೂ ನಿಸ್ವಾರ್ಥ ಸೇವೆಗೆ ಉಡುಪಿ ಪೊಲೀಸ್ ಇಲಾಖೆ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಪ್ರಸಂಸೆ ವ್ಯಕ್ತವಾಗಿದೆ,