ಬೈಂದೂರು: ಮರವಂತೆ ಬೀಚಿನಲ್ಲಿ ಪ್ರವಾಸಿಗರ ಬೆಲೆ ಬಾಳುವ ಬ್ಯಾಗ್ ಕಳವು; ಕಳ್ಳನನ್ನು ಬೆನ್ನಟ್ಟಿದ ಸ್ಥಳೀಯರು
Sunday, September 14, 2025
ಬೈಂದೂರು: ಮರವಂತೆ ಬೀಚ್ ಗೆ ಆಗಮಿಸಿದಂತ ಪ್ರವಾಸಿಗರ ಮಹಿಳೆಯ ಬ್ಯಾಗ್ ಅನ್ನು ಆಟೋ ರಿಕ್ಷಾದಲ್ಲಿ ಬಂದಂತ ಖದೀಮ ಕಳ್ಳರು ಕದ್ದು ಪರಾರಿಯಾದ ಘಟನೆ ಆದಿತ್ಯವಾರ ಮಧ್ಯಾಹ್ನ ನಡೆದಿದೆ
ತಕ್ಷಣ ಕರಾವಳಿ ಪೊಲೀಸರು ಹಾಗೂ KND ಸಿಬ್ಬಂದಿ ಕದ್ದು ಆಟೋದಲ್ಲಿ ಪರಾರಿ ಯಾಗುತ್ತಿರುವ ಕಳ್ಳನನ್ನು ನಾವುಂದ ಅರೆಹೊಳೆ ಕೊಲ್ಲೂರು ಸಂಪರ್ಕಿಸುವ ರಸ್ತೆಯ ತನಕ ಬೆನ್ನಟ್ಟಿದರು, ಏನು ಪ್ರಯೋಜನವಾಗಿಲ್ಲ , ಕಳ್ಳ ಮಾತ್ರ ಕರಾವಳಿ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದನೇ ಕಳ್ಳರನ್ನು ಅಟ್ಟಿಸಿಕೊಂಡು ಹೋದ ಬೀಚಿನಲ್ಲಿ ಅಂಗಡಿ ಹೊಂದಿರುವ ರಾಘವೇಂದ್ರ ಪೂಜಾರಿ ಹಾಗೂ ಕೆ ಎನ್ ಡಿ ಸಿಬ್ಬಂದಿ ಕಳ್ಳ ನನ್ನ ಅಡ್ಡಗಟ್ಟಿ ಅವನ ಮೊಬೈಲ್ ಅನ್ನು ಕಸಿದುಕೊಂಡು ಪೊಲೀಸರಿಗೆ ನೀಡಿದ್ದು ಆರೋಪಿ ಮಾತ್ರ ಪರಾರಿಯಾಗಿದ್ದಾನೆ
ಕೂಡಲೆ ಗಂಗೊಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ತಕ್ಷಣ ಠಾಣೆಯಣೆಯ ಸಿಬ್ಬಂದಿಗಳಾದ ಶಾಂತರಾಮ್ ಶೆಟ್ಟಿ ASI ಆನಂದ್ ಮೊದಲಾದವರು ಕಾರ್ಯಚಣೆಯಲ್ಲಿ ಪಾಲ್ಗೊಂಡು ಮಹಿಳೆಯ ಬ್ಯಾಗಿನಲ್ಲಿರುವ ಮೊಬೈಲ್ ಫೋನ್ ಲೊಕೇಶನ್ ಕಲೆ ಹಾಕುತ್ತಿದ್ದಾರೆ ,
ಗಂಗೊಳ್ಳಿ ಪೊಲೀಸರು ಹಾಗೂ ಸ್ಥಳೀಯರಾದ ಸುಶಾಂತ್ ಶೆಟ್ಟಿ ಬಿಯಾರ ಗೋಪಾಲಕೃಷ್ಣ ನಾಡ, ರಾಜು ಕುರು ನಾಗರಾಜ್ ಪಡುಕೋಣೆ ಸತೀಶ್ ಕಂಚಗೋಡು ವಿಶ್ವನಾಥ್ ಪಡುಕೋಣೆ ಮೊದಲದವರು ಕಾರ್ಯಾಚರಣೆಯಲ್ಲಿ
ಪೊಲೀಸರಿಗೆ ಸಹಕರಿಸಿದ್ದರು
ಖದೀಮ ಕಳ್ಳನ ಹುಡುಗಾಟ ನಡೆಸುತ್ತಿದ್ದಾರೆ
ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಕಳ್ಳನ ಹೆಡೆಮುರಿ ಕಟ್ಟಲು ಪೊಲೀಸರ ಹಾಗೂ ಸ್ಥಳೀಯರ ಕಾರ್ಯಚರಣೆ ಮುಂದುವರಿದಿದೆ