ಗಂಗೊಳ್ಳಿ: ಸಿಕ್ಕಿರುವ ಬ್ಯಾಗನ್ನು ಮರಳಿ ವಾರಿಸುದಾರರಿಗೆ ನೀಡಿ ಪ್ರಾಮಾಣಿಕತೆ ಮೆರೆದ ಗಂಗೊಳ್ಳಿ ಠಾಣೆ ಸಿಬ್ಬಂದಿ: ಗಂಗಾಧರ ಪೂಜಾರಿ
Saturday, September 20, 2025
ಗಂಗೊಳ್ಳಿ: ಕುಂದಾಪುರದ ಎಸ್ ಬಿ ಐ ಬ್ಯಾಂಕ್ ಬಳಿ ಗಂಗೊಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಗಂಗಾಧರ ಪೂಜಾರಿ ಅವರಿಗೆ ಸಿಕ್ಕಿರುವ ಸುಮಾರು 13 ಗ್ರಾಂ ತೂಕದ ಒಂದೂವರೆ ಲಕ್ಷ ರೂ. ಮೌಲ್ಯದ ಚಿನ್ನವನ್ನು ಬ್ಯಾಗ್ ಸಿಕ್ಕಿದ ತಕ್ಷಣ ವಾರೀಸುದಾರರಾದ ಕುಂದಾಪುರ ಚಿಕ್ಕನ್‌ಸಾಲ್ ರೋಡ್ ನಿವಾಸಿ ರಾಕೇಶ್ ಬೆರಟ್ಟೋ ಅವರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಗಂಗೊಳ್ಳಿ ಠಾಣೆಯ ಸಿಬ್ಬಂದಿ ಗಂಗಾಧರ್ ಪೂಜಾರಿ ಯವರ ಕರ್ತವ್ಯನಿಷ್ಠೆ, , ಸಮಾಜ ಸೇವೆಗೆ , ಮತ್ತು ಪ್ರಾಮಾಣಿಕತೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ,
ಪೊಲೀಸ್ ಇಲಾಖೆಯ ಸಿಬ್ಬಂದಿ ಗಂಗಾಧರ್ ಪೂಜಾರಿ ಅವರ ಪ್ರಾಮಾಣಿಕತೆಯನ್ನು ನೋಡಿ ಉಡುಪಿ ಜಿಲ್ಲಾ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಪ್ರಸಂಸೆ ವ್ಯಕ್ತಪಡಿಸಿದರು
ಸಿಕ್ಕಿರುವ ಬ್ಯಾಗನ್ನು ಗಂಗೊಳ್ಳಿ ಠಾಣೆ PSI ಪವನ್ ನಾಯ್ಡ್ ಹಸ್ತಾಂತರ ಮಾಡಿದರು.
ರಾಕೇಶ್ ಬೆರಟ್ಟೋ ಚಿಕ್ಕನ್ ಸಾಲ್ ರೋಡ್ ಕುಂದಾಪುರ 13ಗ್ರಾಂ ಅಂದಾಜು ಒಂದೂವರೆ ಲಕ್ಷ ಮೌಲ್ಯದ ಚಿನ್ನ ಕುಂದಾಪುರ SBI ಬ್ಯಾಂಕ್ ಬಳಿ ಸಿಕ್ಕಿದ್ದನ್ನು ಗಂಗೊಳ್ಳಿ ಠಾಣಾ ಸಿಬ್ಬಂದಿಯವರಾದ ಗಂಗಾಧರ ಪೂಜಾರಿಯವರು ವಾರೀಸುದಾರರಿಗೆ ಬಿಟ್ಟುಕೊಡಲಾಯಿತು