ಬೈಂದೂರು: ಜ್ಞಾನದಾ ಶೈಕ್ಷಣಿಕ ಸಂಸ್ಥೆಯಲ್ಲಿ ರೆಡ್ ಕಲರ್ ಡೇ ಆಚರಣೆ
Monday, September 1, 2025
ಬೈಂದೂರು : ವಿದ್ಯಾರ್ಥಿಗಳಲ್ಲಿ ಕೆಂಪು ಬಣ್ಣದ ಮಹತ್ವ ಮತ್ತು ಸೃಜನಶೀಲತೆ ಬೆಳೆಸಲು ಪ್ರೀ - ಪ್ರಾಥಮಿಕ ವಿದ್ಯಾರ್ಥಿಗಳಿಗೆ ಜ್ಞಾನದಾ ಶೈಕ್ಷಣಿಕ ಸಂಸ್ಥೆಯಲ್ಲಿ *ರೆಡ್ ಕಲರ್ ಡೇ* ಆಚರಿಸಲಾಯಿತು ಶಿಕ್ಷಕರು ಕಥೆ ಮತ್ತು ಹಾಡುಗಳ ಮೂಲಕ ಕೆಂಪು ಬಣ್ಣದ ಮಹತ್ವವನ್ನು ಪರಿಚಯಿಸಿದರು ವಿದ್ಯಾರ್ಥಿಗಳು ಕೆಂಪು ಬಣ್ಣದ ಉಡುಪುಗಳನ್ನು ಧರಿಸಿ ಕೆಂಪು ಬಣ್ಣದ ಹಣ್ಣುಗಳನ್ನು ತಂದು ಸಂಭ್ರಮಿಸಿದರು
ಪ್ರಾಂಶುಪಾಲರಾದ ಡಾ. ರವಿದಾಸ್ ಶೆಟ್ಟಿ ಕೆಂಪು ಬಣ್ಣವು ಅಚ್ಚುಮೆಚ್ಚಿನ ಬಣ್ಣವಾಗಿದೆ ಇದು ಪ್ರೀತಿ ಮತ್ತು ಕಾಳಜಿಯ ಸಂಕೇತವಾಗಿದೆ ಜೊತೆಗೆ ಅನೇಕ ಸಂಚಾರ ಚಿಹ್ನೆಗಳನ್ನು ಓದಲು, ಅಪಾಯ ಮತ್ತು ಎಚ್ಚರಿಕೆಯನ್ನು ಗುರುತಿಸಲು ಕೆಂಪು ಬಣ್ಣದ ಮಹತ್ವವನ್ನು ತಿಳಿದುಕೊಳ್ಳುವುದು ಅತಿ ಮಹತ್ವವಾಗಿದೆ ಎಂದರು ಈ ದಿನ ವಿದ್ಯಾರ್ಥಿಗಳಿಗೆ ಮೋಜಿನ ದಿನವಾಗಿ ಅತ್ಯಂತ ಉತ್ಸುಕತೆಯಿಂದ ಪಾಲ್ಗೊಂಡರು