ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

 ಜನರ  ಆಕ್ರೋಶಕ್ಕೆ ಮಣಿದು   ಬನ್ನಂಜೆ ನಾರಾಯಣ ಗುರು ವೃತ್ತ ಮರುಸ್ಥಾಪನೆ

ಜನರ ಆಕ್ರೋಶಕ್ಕೆ ಮಣಿದು ಬನ್ನಂಜೆ ನಾರಾಯಣ ಗುರು ವೃತ್ತ ಮರುಸ್ಥಾಪನೆ

ಉಡುಪಿ: ಉಡುಪಿ ನಗರಸಭೆಯಿಂದ ಅಧಿಕೃತವಾಗಿ ಸ್ಥಾಪನೆಗೊಂಡಿದ್ದ ಬನ್ನಂಜೆ ನಾರಾಯಣ ಗುರು ವೃತ್ತವನ್ನು ಯಾವುದೇ ಮುನ್ಸೂಚನೆ ಇಲ್ಲದೆ ತೆರವು ಮಾಡಲಾಗಿದ್ದು ಇದು ವಿವಾದವಾಗುತ್ತಿದ್ದಂತೆ ಮತ್ತೆ ಇಂದು ಪುನರ್ ಸ್ಥಾಪಿಸಲಾಗಿದೆ.
ಶನಿವಾರ ಬನ್ನಂಜೆಯಲ್ಲಿದ್ದ ನಾರಾಯಣಗುರು ವೃತ್ತವನ್ನು ಕಿತ್ತು ಹಾಕಿ, ಪಾಳು ಬಿದ್ದ ಜಾಗದ ಪೊದೆಗಳ ಮಧ್ಯೆ ಬಿಸಾಡಲಾಗಿತ್ತು. ಬಳಿಕ ವೃತ್ತವಿದ್ದ ಜಾಗದಲ್ಲಿ ಬ್ಯಾಂಕ್ ಆಫ್ ಬರೋಡ ನಾಮಫಲಕವನ್ನು ಹಾಕಲಾಗಿತ್ತು. ಇದು ಗೊತ್ತಾಗುತ್ತಿದ್ದಂತೆ ಉಡುಪಿ ಶಾಸಕರ ಸಹಿತ ಮಾಜಿ ಶಾಸಕ ,ಬಿಲ್ಲವ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿದ್ದವು.ಇದೀಗ ಎಲ್ಲೆಡೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ತಕ್ಷಣ ನಾರಾಯಣ ಗುರು ವೃತ್ತವನ್ನು ಪುನರ್ ಸ್ಥಾಪಿಸಿದೆ

Ads on article

Advertise in articles 1

advertising articles 2

Advertise under the article