ಬ್ರಹ್ಮಾವರ: ಕೋರ್ಟ್ ನಲ್ಲಿ ಗಂಡನ ಆರೋಪ ಸಾಬೀತು- ಮನನೊಂದ ಪತ್ನಿ ಮಗುವಿನೊಂದಿಗೆ ತಾನೂ ಆತ್ಮಹತ್ಯೆಗೆ ಶರಣು!
Monday, September 1, 2025
ಬ್ರಹ್ಮಾವರ: ಬ್ರಹ್ಮಾವರದ ಆರೂರು ಗ್ರಾಮದಲ್ಲಿ ತಾಯಿ ಮತ್ತು ಮಗು ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆಗೆ ಕಾರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ತನ್ನ ಗಂಡನ ಕೊಲೆಯತ್ನದ (307) ಕೇಸ್ ನಲ್ಲಿ ಕೆಳ ನ್ಯಾಯಾಲಯದಲ್ಲಿ ಆರೋಪಿ ಎಂದು ಸಾಬೀತಾಗಿತ್ತು. ಇದನ್ನು ಹೈಕೋರ್ಟ್ ಕೂಡ ಎತ್ತಿ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಮನನೊಂದ ಪತ್ನಿ ತನ್ನ ಮಗುವನ್ನು ಮೊದಲು ನೇಣಿಗೆ ಹಾಕಿ ಬಳಿಕ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಡುಪಿ ಎಸ್ ಪಿ ಹರಿರಾಮ್ ಶಂಕರ್ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಇವತ್ತು ಸಂಜೆ ಎಸ್ ಪಿ ಹರಿರಾಮ್ ಶಂಕರ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದರು. ಈ ವೇಳೆ ಮಹಿಳೆ ಬರೆದಿದ್ದ ಡೆತ್ ನೋಟ್ ಕೂಡ ಪೊಲೀಸರಿಗೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆಯನ್ನು ಮುಂದುವರಿಸುತ್ತಿರುವುದಾಗಿ ಎಸ್ಪಿ ಮಾಹಿತಿ ನೀಡಿದ್ದಾರೆ.ಇಂದು ಮಧ್ಯಾಹ್ನ ಬ್ರಹ್ಮಾವರದ ಆರೂರು ಗ್ರಾಮದಲ್ಲಿ ತಾಯಿ ಸುಷ್ಮೀತಾ (23) ತನ್ನ ಮಗು ಶ್ರೇಷ್ಠ (1ವರ್ಷ 6 ತಿಂಗಳು) ರನ್ನು ನೇಣಿಗೆ ಹಾಕಿ ತಾವೂ ಆತ್ಮಹತ್ಯೆಗೆ ಶರಣಾಗಿದ್ದರು.