Kundapura : ತ್ರಾಸಿ ಬೀಚ್‌ನ ಉದ್ಯಾವನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣಕ್ಕೆ ಅನುಮತಿ ನೀಡುವಂತೆ : ಅಂಬೇಡ್ಕರ್ ಸೇನೆ (ರಿ) ಮತ್ತು ಜೈ ಭೀಮ್ ನೀಲಿ ಪಡೆ ಗಂಗೊಳ್ಳಿ ಆಗ್ರಹ
Friday, August 8, 2025
ದಾಮೋದರ ಮೊಗವೀರ ಸಾರಥ್ಯದಲ್ಲಿ:
ಬೈಂದೂರು: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ : ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತ್ರಾಸಿ ಬೀಚ್‌ನ ಉದ್ಯಾನವನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ನಿರ್ಮಿಸಲು ಅನುಮತಿ ನೀಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಜೈ ಭೀಮ್ ನೀಲಿ ಪಡೆ) ಗಂಗೊಳ್ಳಿ ಮತ್ತು ಅಂಬೇಡ್ಕರ್ ಸೇನೆ ರಿ ವತಿಯಿಂದ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈಗಾಗಲೇ ತ್ರಾಸಿ ಗ್ರಾಮ ಪಂಚಾಯತ್ ಅಂಬೇಡ್ಕರ್ ರವರ ಪ್ರತಿಮೆ ನಿರ್ಮಾಣಕ್ಕೆ ಅನುಮತಿ ನೀಡಿದ್ದು, ಆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಸಮಿತಿ ಒತ್ತಾಯಿಸಿದೆ.
ಗ್ರಾಮ ಪಂಚಾಯತ್ ತ್ರಾಸಿ, ಜಾವಕ್ಕ ಸಂಖ್ಯೆ 55/2025/26ರ ಅಡಿಯಲ್ಲಿ ಗ್ರಾಮಸಭೆ ಮತ್ತು ಕುಂದು ಕೊರತೆ ಸಭೆಯಲ್ಲಿ ನಿರ್ಣಯ ಕೈಗೊಂಡು, ತ್ರಾಸಿ ಬೀಚ್‌ನ ಉದ್ಯಾನವನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಗ್ರಾಮ ಪಂಚಾಯತ್‌ನ ಈ ಅನುಮತಿ ಪತ್ರವನ್ನು ಮನವಿಯೊಂದಿಗೆ ಲಗತ್ತಿಸಲಾಗಿದೆ. ಈ ನಿರ್ಣಯಕ್ಕೆ ಸೂಕ್ತ ಬೆಂಬಲ ನೀಡಬೇಕೆಂದು ಸಮಿತಿ ಮನವಿ ಮಾಡಿಕೊಂಡಿದೆ.
ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಯವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪ್ರತಿಮೆಯನ್ನು ನಿರ್ಮಿಸಲು ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಿ, ಅನುಮತಿ ನೀಡುವಂತೆ ಸಮಿತಿಯು ವಿನಂತಿಸಿದೆ.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ನಿತೀಶ್ ಹೊಳ್ಳ, ಉಡುಪಿ ಜಿಲ್ಲಾಧಿಕಾರಿ ಟಿ.ಕೆ. ಸ್ವರೂಪ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಗದೀಶ್ ಗಂಗೊಳ್ಳಿ (ಪ್ರಧಾನ ಸಂಚಾಲಕರು, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಜೈ ಭೀಮ್ ನೀಲಿ ಪಡೆ, ಗಂಗೊಳ್ಳಿ)ಸತೀಶ್ ಕಂಚುಗೋಡು (ಜಿಲ್ಲಾಧ್ಯಕ್ಷರು, ಅಂಬೇಡ್ಕರ್ ಸೇನೆ, ಉಡುಪಿ ಜಿಲ್ಲೆ) ದಾಮೋದರ ಮೊಗವೀರ ನಾಯಕವಾಡಿ (ಜಿಲ್ಲಾಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ (ಧ್ವನಿ) ಗೋಪಾಲ್ ಕವ್ರಾಡಿ, ನಾಗ ಬಿ.ಎಚ್. ಆರತಿ ಗಿಳಿಯಾರು ಪತ್ರಕರ್ತರು ಮತ್ತು ಉಪಸಂಪಾದಕರು ರಾಮನಗರ ನ್ಯೂಸ್ ಪತ್ರಿಕೆ ಹಾಜರಿದ್ದರು