ಧರ್ಮಸ್ಥಳದಲ್ಲಿ ಯೂಟ್ಯೂಬರ್ ,ಪತ್ರಕರ್ತರ ಮೇಲೆ ಹಲ್ಲೆ ಹಾಗೂ ಪ್ರಚೋದನೆ ನೀಡಿದವರ ಮೇಲೆ ಕ್ರಮ ಕೈಗೊಳ್ಳುವಂತೆ : ದಲಿತ ಸಂಘಟನೆ ನಾಯಕರಿಂದ ಉಡುಪಿ ಜಿಲ್ಲೆಯ ವರಿಷ್ಠಾಧಿಕಾರಿಗೆ ದೂರು !!
Friday, August 8, 2025
ಉಡುಪಿ : ಧರ್ಮಸ್ಥಳ ಗ್ರಾಮದಲ್ಲಿ ದಲಿತ ಯೂಟ್ಯೂಬರ್ ಅಭಿ ಹಾಗೂ ಪತ್ರಕರ್ತರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಹಾಗೂ ಈ ಕೃತ್ಯ ನಡೆಸಲು ಷಡ್ಯಂತ್ರ ರೂಪಿಸಿದ ವಸಂತ್ ಗಿಳಿಯಾರ್ ಹಾಗೂ ಕಿರಿಕ್ ಕೀರ್ತಿ ಮೇಲೆ ಪ್ರಕರಣ ದಾಖಲು ಮಾಡಿ ಕಾನೂನು ಕ್ರಮ ಜರುಗಿಸುವಂತೆ ಅಂಬೇಡ್ಕರ್ ಸೇನೆ ರಿ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ನೀಲಿ ಪಡೆ ಗಂಗೊಳ್ಳಿ ಸಂಘಟನೆ ವತಿಯಿಂದ ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ರವರಿಗೆ ಮನವಿ ಮೂಲಕ ದೂರು ನೀಡಲಾಯಿತು.
ಧರ್ಮಸ್ಥಳದಲ್ಲಿ ನಡೆದ ಅತ್ಯಾಚಾರ ಹಾಗೂ ಕೊಲೆಗೆ ರಾಜ್ಯಸರಕಾರ ವಿಶೇಷ ತನಿಖೆ ಸಂಸ್ಥೆಯಾದ SIT ರಚನೆ ಮಾಡಿ ಅದೇಶ ಹೊರಡಿಸಿದ್ದು ತನಿಖೆ ಪ್ರಗತಿಯಲ್ಲಿದ್ದು ಇದರ ಬಗ್ಗೆ ಹಲವು ವರ್ಷಗಳಿಂದ ಸುದ್ದಿ ಮಾಡುತ್ತಿರುವ ಯೂಟ್ಯೂಬ್ ಮುಖ್ಯಸ್ಥರು ಹಾಗೂ ಪತ್ರಕರ್ತರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಅಲ್ಲಿನ ಗುಂಡಾಗಳ ಮೇಲೆ ಹಾಗೂ ಇದಕ್ಕೆ ಮೊದಲೇ ಪ್ರಚೋದನೆ ನೀಡಿ ಟಿವಿ ಮಾಧ್ಯಮದ ಲೈವ್ ನಲ್ಲೆ ಸೌಜನ್ಯ ಹೋರಾಟಗಾರರಿಗೆ ನುಗ್ಗಿ ಹೊಡೆಯುತ್ತೇವೆ ಎಂದು ಹೇಳಿದ ವಸಂತ ಗಿಳಿಯಾರ್ ಹಾಗೂ ಕಿರಿಕ್ ಕೀರ್ತಿ ಇನ್ನಿತರ ಮೇಲೆ ತಕ್ಷಣ ಪ್ರಕರಣ ದಾಖಲು ಮಾಡಿ ಬಂದಿಸಬೇಕು ಹಾಗೂ ಹಲ್ಲೆಗೊಳಗದ ದಲಿತ ಸಮುದಾಯಕ್ಕೆ ಸೇರಿದ ಅಭಿ ಅವರಿಗೆ ತೀವ್ರವಾದ ಹಲ್ಲೆ ಆಗಿದ್ದು ಅವರಿಗೆ ನ್ಯಾಯ ಸಿಗಬೇಕು ಹಾಗೆ ಹಲ್ಲೆ ಮಾಡಿದವರ ವಿರುದ್ಧ ಅಟ್ರಾಸಿಟಿ ಕಾಯ್ದೆ ದಾಖಲು ಮಾಡಿ ಹಲ್ಲೆ ಮಾಡಿದವರು ಹಾಗೂ ಹಲ್ಲೆ ಪ್ರಚೋದನೆ ನೀಡಿದವರನ್ನು ತಕ್ಷಣ ಕೇಸು ದಾಖಲಿಸಿಕೊಂಡು ಬಂಧಿಸಬೇಕೆಂದು ದಲಿತ ನಾಯಕರು ಮನವಿ ಮಾಡಿಕೊಂಡರು,
ಈ ಸಂದರ್ಭ ಸತೀಶ್ ಕಂಚುಗೋಡು ಉಡುಪಿ ಜಿಲ್ಲಾಧ್ಯಕ್ಷ ಅಂಬೇಡ್ಕರ್ ಸೇನೆ ರಿ ಹಾಗೂ ಜಗದೀಶ್ ಗಂಗೊಳ್ಳಿ ಜೈ ಭೀಮ್ ನೀಲಿ ಪಡೆ ಗಂಗೊಳ್ಳಿ ಆರತಿ ಗಿಳಿಯಾರ , ಗೋಪಾಲ್ ಕವ್ರಾಡಿ ನಾಗಣ್ಣ BH ಜಯಂತ್ ಮಲ್ಪೆ ದಲಿತ ನಾಯಕರು ಹಾಗೂ ಸಮುದಾಯದ ಚಿಂತಕರು ಹಾಜರಿದ್ದರು