Kundapura : 16 ಪ್ರಕರಣದಲ್ಲಿ ಬೇಕಾಗಿರುವ ನಟೋರಿಯಸ್ ಗೋ ಕಳ್ಳತನದ ಆರೋಪಿಯನ್ನು ಬಂಧಿಸಿದ ಗಂಗೊಳ್ಳಿ ಪೊಲೀಸರು !! ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ
Friday, August 8, 2025
ದಾಮೋದರ ಮೊಗವೀರ ಸಾರಥ್ಯದಲ್ಲಿ:
ಈತ ಮಂಗಳೂರು ಉಡುಪಿ, ಉತ್ತರ ಕರ್ನಾಟಕ, ಚಿಕ್ಕಮಗಳೂರು , ಹಾಸನ, ಭಾಗದಲ್ಲಿ ಅಕ್ರಮ ಗೋಮಾಂಸ ಮತ್ತು ಗೋ ಸಾಗಾಟ 16 ಪ್ರಕರಣದಲ್ಲಿ ಬೇಕಾಗಿರುವ ನಟೋರಿಯಸ್ ಆರೋಪಿ ಅನ್ಸರ್ ತೋಡಾರ ನನ್ನು ಬುಧವಾರ ರಾತ್ರಿಯ ವೇಳೆ ಗಂಗೊಳ್ಳಿ ಠಾಣೆಯ ಉಪ ನಿರೀಕ್ಷಕ ಪವನ್ ನಾಯಕ್ ಮತ್ತು ಸಿಬ್ಬಂದಿಗಳು ಬಂಧಿಸಿ ಗುರುವಾರ ಬೆಳಿಗ್ಗೆ ಗಂಗೊಳ್ಳಿ ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಮಾಡಿರುವ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಹಾಗೂ ಉಳಿದ ಮೂವರು ಆರೋಪಿಗಳ ಹೆಸರು ಜುಬೇರ್ ಯಾನೆ ಜುಮ್ಕಿ ಜುಬೇರ್ , ಆರೀಫ್ ಮತ್ತು ಇಕ್ಬಾಲ್ ಯಾನೆ ಕರಿ ಇಕ್ಬಾಲ್ ಆರೋಪಿಗಳ ಹೆಸರು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ, ಸಂಜೆಯ ವೇಳೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ, ಹಾಗೂ ಸೋಮವಾರದಂದು ಮತ್ತೆ ಆರೋಪಿಯನ್ನು ಗಂಗೊಳ್ಳಿ ಪೊಲೀಸರು ಕಷ್ಟಡಿಗೆ ತೆಗೆದುಕೊಳ್ಳುವ ಮಾಹಿತಿ ಇದೆ ಎಂದು ತಿಳಿದುಬಂದಿದೆ,
ಮೂವರು ಆರೋಪಿಗಳ ಹೆಡೆಮುರಿ ಕಟ್ಟಲು ಗಂಗೊಳ್ಳಿ ಪೊಲೀಸರ ಶೋಧ ಕಾರ್ಯಾಚರಣೆ ಮುಂದುವರಿದಿದೆ,
ಗಂಗೊಳ್ಳಿ ಪೊಲೀಸರ ಸಾಹಸಮಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ, ಹಾಗೂ ಉಡುಪಿ ಜಿಲ್ಲೆಯ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಕೃತಜ್ಞತೆ ಸಲ್ಲಿಸಿದ್ದಾರೆ, ಗಂಗೊಳ್ಳಿ ಪೊಲೀಸರ ಕಾರ್ಯಾಚರಣೆಯಿಂದ ಉಡುಪಿ ಜಿಲ್ಲೆಗೆ ಮತ್ತು ಪೊಲೀಸ್ ಇಲಾಖೆಗೆ ಹೆಗ್ಗಳಿಕೆಗೆ ಪಾತ್ರವಾಗಿದೆ,
ಕೃತ್ಯಕ್ಕೆ ಬಳಸಿದ ಬಿಳಿ ಬಣ್ಣದ ಕ್ರೆಟಾ ಕಾರ್ ( ಅಂದಾಜು ಮೌಲ್ಯ 6 ಲಕ್ಷ ರೂಪಾಯಿ) ಹಾಗೂ 1 ಮೊಬೈಲ್ ಫೋನ್ ಗಳನ್ನು (ಅಂದಾಜು ಮೌಲ್ಯ 5 ಸಾವಿರ) ಸ್ವಾದೀನಪಡಿಸಿಕೊಳ್ಳಲಾಗಿದೆ.
ಈ ಕಾರ್ಯಚರಣೆಯಲ್ಲಿ ರಾಘವೇಂದ್ರ ಪೂಜಾರಿ, ಕೃಷ್ಣ ದೇವಾಡಿಗ, ಸಂದೀಪ್ ಕುರಾಣಿ, ಶಾಂತರಾಮ್ ಶೆಟ್ಟಿ, ರಾಜು ನಾಯ್ಕ್, ಪ್ರಸನ್ನ, ಚೇತನ, ಮಾಳಪ್ಪ ದೇಸಾಯಿ ಚಿದಾನಂದ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು