Kundapura ಗೋಕಳ್ಳರನ್ನು ಸಿನಿಮಯಾ ರೀತಿಯಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಗಂಗೊಳ್ಳಿ ಪೊಲೀಸರು
Wednesday, August 6, 2025
ದಾಮೋದರ ಮೊಗವೀರ ಸಾರಥ್ಯದಲ್ಲಿ
ಕುಂದಾಪುರ ; ಇತ್ತೀಚಿನ ದಿನಗಳಲ್ಲಿ ಗೋಕಳ್ಳತನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ರವರ ಖಡಕ್ ಆದೇಶದಂತೆ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಯಲ್ಲಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರು. ಅದರಂತೆ ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕಳೆದ ಮೂರು ನಾಲ್ಕು ದಿನಗಳ ಹಿಂದೆ ಗೋಕಳ್ಳತನ ನಡೆದಿರುವ ಬಗ್ಗೆ ಸಂಶಯ ವ್ಯಕ್ತವಾದ ಹಿನ್ನೆಲೆ ಗಂಗೊಳ್ಳಿ ಠಾಣೆಯ ಉಪನಿರೀಕ್ಷಕ ಪವನ್ ನಾಯಕ್, ಹಾಗೂ ತನಿಕ ವಿಭಾಗದ ಪಿಎಸ್ಐ ಬಸವರಾಜ್ ಕನಶೆಟ್ಟಿ ಮತ್ತು ಸಿಬ್ಬಂದಿಗಳು ಕಾರ್ಯಚರಣೆಗೆ ಇಳಿಯುತ್ತಾರೆ.
ಗಂಗೊಳ್ಳಿ ಪೊಲೀಸರು ಆರೋಪಿಗಳನ್ನು ಹುಡುಕುತ್ತಾ ಉಡುಪಿ ಜಿಲ್ಲೆಯ ಪಡುಬಿದ್ರೆ ಠಾಣಾ ವ್ಯಾಪ್ತಿಯ ಹೆಜಮಾಡಿ ಟೋಲ್ ಬಳಿ ರಾತ್ರಿ 9:00ಯಿಂದ ಬೆಳಗಿನ ಜಾವ 5:00 ಸುಮಾರಿಗೆ ಕಾಯ್ದು ಕುಳಿತಿದ್ದು ದನಗಳನ್ನು ಕದ್ದು ಸಾಗಾಟ ಮಾಡುತ್ತಿದ್ದ ಆರೋಪಿಗಳ ಫಾರ್ಚುನರ್ ಕಾರು ಟೋಲ್ ಗೇಟ್ ಬಳಿ ಬರುತ್ತಿದ್ದಂತೆ ಪೊಲೀಸರು ಗೇಟಿನ ಮೂರನೇ ದ್ವಾರದಲ್ಲಿ ಕಾರಿಗೆ ಅಡ್ಡಗಟ್ಟಿ ಆರೋಪಿಗಳನ್ನು ಬಂಧಿಸಲು ಮುಂದಾದಾಗ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾರೆ.
ತಕ್ಷಣ ಗಂಗೊಳ್ಳಿ ಪೊಲೀಸರು ತಮ್ಮ ಪ್ರಾಣದ ಹಂಗನ್ನು ತೊರೆದು ಆರೋಪಿಗಳನ್ನು ಹೆಡೆ ಮುರಿಕಟ್ಟಲೇಬೇಕೆಂದು ಮುನ್ನುಗುತ್ತಾರೆ.
ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗುತ್ತಾರೆ ಆದರೂ ಗಂಗೊಳ್ಳಿ ಪೊಲೀಸರು ಎದೆ ಜಗ್ಗದೆ ಆರೋಪಿಗಳ ಜೊತೆ ಸೆಣಸಾಡುತ್ತಾರೆ, ಆರೋಪಿಗಳ ಪೈಕಿ ನಾಲ್ಕು ಆರೋಪಿಗಳಲ್ಲಿ ಓರ್ವ ಆರೋಪಿಯನ್ನು ಪೊಲೀಸರು ಬಂದಿಸುತ್ತಾರೆ.
ದನಗಳ್ಳರು ತಾವು ಕಳ್ಳತನ ಮಾಡಿ ದನಗಳನ್ನು ಉಸಿರುಗಟ್ಟಿಸುವ ರೀತಿಯಲ್ಲಿ ಹಾಕಿ ಸಾಗಿಸುತ್ತಿದ್ದ ಫಾರ್ಚೂನರ್ ಕಾರು ವಶಕ್ಕೆ ಪಡೆದುಕೊಂಡಿದ್ದಾರೆ ಇನ್ನುಳಿದ ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎನ್ನಲಾಗಿದೆ. ಕಾರು ಚಾಲಕ ಆರೋಪಿ ಮಹಮ್ಮದ್ ಶಾರೋಜ್ ಸುರತ್ಕಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಗಂಗೊಳ್ಳಿ ಠಾಣಾ ಪೊಲೀಸ್ ಉಪ ನಿರೀಕ್ಷಕ ಬಸವರಾಜ್ ಕನಶೆಟ್ಟಿ ಮತ್ತು ಪಿಸಿ ಸಂದೀಪ್ ಅವರು ಹಾಗೂ ಇನ್ನುಳಿದ ಪೊಲೀಸರಿಗೆ ಗಾಯಗಳಾಗಿವೆ. ಟೋಲ್ ಪೆಟ್ರೋಲಿಂಗ್ ವಾಹನ ಚಾಲಕ ಲೋಹಿತ್ ಎಂಬವರಿಗೂ ಗಾಯಗಳಾಗಿವೆ.
ಆರೋಪಿಗಳ ಫಾರ್ಚೂನರ್ ಕಾರನ್ನು ಸುತ್ತುವರಿದು ಆರೋಪಿಗಳನ್ನು ಬಂಧಿಸಲು ಮುಂದಾದಾಗ ಶಾರೋಜ್ ಸೇರಿದಂತೆ ಸಫ್ವಾನ್ ಕಾಪು, ಅಜೀಮ್ ಕಾಪು ಮತ್ತು ರಾಜಿಕ ಬಜ್ಪೆ ಆರೋಪಿಗಳು ಬಳಸಿದ ಫಾರ್ಚುನರ್ ಕಾರನ್ನು ಪಿಎಸ್‌ಐ ಬಸವರಾಜ್ ಕನಶೆಟ್ಟಿ ಅವರಿಗೆ ಢಿಕ್ಕಿ ಹೊಡೆದು ಅವರ ಕೈ ಮೇಲೆ ಕಾರು ಹಾರಿಸಿ ಪರಾರಿಯಾಗಿದ್ದಾರೆ.
ಈ ಪ್ರಕರಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸು ಮತ್ತು ಬೊಲೆನೋ ಕಾರುಗಳಿದ್ದು, ಒಮ್ಮೆಲೇ ಹಿಂದಕ್ಕೆ ಕಾರನ್ನು ಚಲಾಯಿಸಿದಾಗ ಪಿಸಿ ಸಂದೀಪ್‌ಗೂ ಗಂಭೀರ ಗಾಯಗಳಾಗಿವೆ,
ಆರೋಪಿಗಳು ಕಾರನ್ನು ಹಿಮ್ಮುಖವಾಗಿ ಚಲಿಸಿದ ಹಿಂಬದಿಯಿದ್ದ ಪಿಎಸ್‌ಐ ಪವನ್ ನಾಯಕ್ ಅವರ ಕಾರಿಗೂ ಢಿಕ್ಕಿ ಹೊಡೆದಿದ್ದಾರೆ.
ಒಟ್ಟಾರೆಯಾಗಿ ಆರೋಪಿಗಳು ಕೆ ಆರ್ ಎಸ್ ಆರ್ ಟಿ ಸಿ ಬಸ್ ಎರಡು ಖಾಸಗಿ ಕಾರುಗಳು ಟೋಲ್ ವಾಹನಗಳು ಇತ್ಯಾದಿ ಹನಿ ಮಾಡಿದ್ದಾರೆ ಎನ್ನಲಾಗಿದೆ,
ಗಂಗೊಳ್ಳಿ ಪೊಲೀಸರು ಮಾತ್ರ ಯಾವುದಕ್ಕೂ ಜಗ್ಗ ದೇ ತಮ್ಮ ಪ್ರಾಣವನ್ನು ಲೆಕ್ಕಿಸದೆ ಸಿನಿಮಿಯಾ ರೀತಿಯಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟಿ ಸೆರೆ ಬಡಿದಿದ್ದಾರೆ, ಈ ಪ್ರಕರಣವನ್ನು ನೋಡಿ ಉಡುಪಿ ಜಿಲ್ಲಾ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಗಂಗೊಳ್ಳಿ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕಳ್ಳತನ, ದರೋಡೆ, ಗಣಿಗಾರಿಕೆ, ಅತ್ಯಾಚಾರ, ನಾಪತ್ತೆ, ಇತ್ಯಾದಿ ಯಾವುದೇ ರೀತಿಯ ಪ್ರಕರಣಗಳು ದಾಖಲಾದರೂ ಆರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ನೀಡುವಲ್ಲಿ ಉಡುಪಿ ಜಿಲ್ಲೆಯಲ್ಲಿ ಗಂಗೊಳ್ಳಿ ಪೊಲೀಸರು ಮುಂಚೂಣಿಯಲಿದ್ದಾರೆ ಮತ್ತು ಪೊಲೀಸ್ ಇಲಾಖೆಗೆ ಮಾದರಿಯಾಗಿದ್ದಾರೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಕರ್ತವ್ಯ ನಿರತ ಪೊಲೀಸರ ಪ್ರಾಣಹಾನಿಗೆ ಯತ್ನಿಸಿದ್ದ ಮತ್ತು ಸಾರ್ವಜನಿಕ ಸೊತ್ತು ನಾಶಗೈದ ಕುರಿತಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ದನಗಳ್ಳತನ ಮಾಡಿದವರನ್ನು ಮೂಲಾಜಿಲ್ಲದೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿ ಗೋಮಾತೆಯನ್ನು ಸಂರಕ್ಷಿಸುವ ಗಂಗೊಳ್ಳಿ ಪೊಲೀಸ್ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಈ ಘಟನೆಯಲ್ಲಿ ಕೃಷ್ಣ ದೇವಾಡಿಗ , ರಾಘವೇಂದ್ರ ಶಾಂತರಾಮ್ ಶೆಟ್ಟಿ, ಚೇತನ್, ರಾಜು ನಾಯಕ್, ಪ್ರಸನ್ನ , ಯವರಿಗೆ ಸಣ್ಣಪುಟ್ಟ ಗಾಯಗಳಾಗಿವೆ, ಎಂದು ತಿಳಿದುಬಂದಿದೆ,
ಈ ಸಂದರ್ಭ ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಜಿಲ್ಲೆಯ ಪೊಲೀಸ್ ಠಾಣೆಯ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.
ಈ ಘಟನೆಯ ಬಗ್ಗೆ ಉನ್ನತ ತನಿಖೆ ನಡೆಯುತ್ತಿದೆ.
ವರದಿ: ಗೋಪಾಲ್ ಕವ್ರಾಡಿ ಕೋಸ್ಟಲ್ ನ್ಯೂಸ್ ಕುಂದಾಪುರ