ಕುಂದಾಪುರ : ಅಕ್ರಮ ಮರಳು ಸಾಗಾಟ : ವಾಹನ ಸಹಿತ ಇಬ್ಬರು ವಶಕ್ಕೆ…!!
Thursday, August 7, 2025
ದಾಮೋದರ ಮೊಗವೀರ ಸಾರಥ್ಯದಲ್ಲಿ
ಕುಂದಾಪುರ : ಪಂಚ ಗಂಗಾವಳಿ ಹೊಳೆಯ ಬಳಿ ಮಹೇಂದ್ರ ಮ್ಯಾಕ್ಸಿಮೊ ವಾಹನದಲ್ಲಿ ಹಾಗೂ ಟಾಟಾ ಎಸಿಇ ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆ ಎಂದು ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ವಾಹನ ಚಾಲಕರಾದ ಸುಜನ್ ಹಾಗೂ ನಿಖಿಲ್ ಎಂಬವರವನ್ನು ಮರಳು ಸಹಿತ ವಶಪಡಿಸಿಕೊಂಡಿದ್ದಾರೆ.
ನಂಜ ನಾಯ್ಕ , ಪೊಲೀಸ್ ಉಪನಿರೀಕ್ಷಕರು(ಕಾ ಮತ್ತು ಸು), ಕುಂದಾಪುರ ಪೊಲೀಸ್ ಠಾಣೆ ಕುಂದಾಪುರ ಇವರಿಗೆ ಮದ್ಯಾಹ್ನ ಚರ್ಚ ರಸ್ತೆಯ ಬಳಿಯಿರುವ ಪಂಚಗಂಗಾವಳಿ ಹೊಳೆಯಲ್ಲಿ ಮರಳನ್ನು ತೆಗೆದು ಎರಡು ವಾಹನಗಳಲ್ಲಿ ತುಂಬಿಸುತ್ತಿರುವುದಾಗಿ ಸಾರ್ವಜನಿಕರಿಂದ ಮಾಹಿತಿ ಬಂದಂತೆ ಪಂಚ ಗಂಗಾವಳಿ ಹೊಳೆಯ ಬಳಿ ಬಂದಾಗ ಬಿಳಿ ಬಣ್ಣದ KA-19-AA-2515 ನಂಬ್ರದ ಮಹೇಂದ್ರ ಮ್ಯಾಕ್ಸಿಮೊ ವಾಹನದಲ್ಲಿ 40 ಪ್ಲಾಸ್ಟಿಕ್ ಚೀಲಗಳಲ್ಲಿ ಮರಳನ್ನು ತುಂಬಿಸಿ ಇಟ್ಟಿರುವುದು ಕಂಡುಬಂದಿರುತ್ತದೆ.
2) ಸಿಲ್ವರ್ ಬಣ್ಣದ KA-20-D-2787 TATA ACE ಆಗಿದ್ದು, ಇದರಲ್ಲಿ 40 ಪ್ಲಾಸ್ಟಿಕ್ ಚೀಲಗಳಲ್ಲಿ ಮರಳನ್ನು ತುಂಬಿಸಿ ಇಟ್ಟಿರುವುದು ಕಂಡು ಬಂದಿರುತ್ತದೆ. ಆರೋಪಿತರು ಯಾವುದೇ ಪರವಾನಿಗೆ ಇಲ್ಲದೆ ಸುನೀಲ್ ಎಂಬಾನ ಜೊತೆ ಸೇರಿ ಪಕ್ಕದಲ್ಲಿರುವ ಪಂಚಗಂಗಾವಳಿ ಹೊಳೆಯಿಂದ ಮರಳನ್ನು ಕಳವು ಮಾಡಿ ತೆಗೆದು ಗೊಣಿ ಚೀಲಗಳಿಗೆ ತುಂಬಿಸಿ ಸಾಗಾಟ ಮಾಡಲು ತುಂಬಿಸುತ್ತಿರುವುದಾಗಿ ಕಂಡುಬಂದಿರುವುದಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 98/2025 ಕಲಂ:303(2).112 BNS ಮತ್ತು 4,4(1)(a) 21 MMDR ACT ರಂತೆ ಪ್ರಕರಣ ದಾಖಲಾಗಿರುತ್ತದೆ.