ಮೊಳಹಳ್ಳಿ ಅಕ್ರಮ ಪಡಿತರ ಅಕ್ಕಿ ದಾಸ್ತಾನು| ಆಹಾರ ನಿರೀಕ್ಷಕರಿಂದ ದಾಳಿ, 8 ಕ್ವಿಂಟಾಲ್ ಅಕ್ಕಿ ಜಪ್ತಿ!
Wednesday, August 6, 2025
ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಮೊಳಹಳ್ಳಿ ಗ್ರಾಮದ ಮಾಸ್ತಿ ಕಟ್ಟೆಯ ಉದಯ ಎಂಬುವವರ ಮನೆಯ ಬಳಿ ಇರುವ ಗೋಡೌನ್ ನಲ್ಲಿ ಅನ್ನ ಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಿಸುವ ಪಡಿತರ ಅಕ್ಕಿಯನ್ನು ಕಾನೂನು ಬಾಹಿರವಾಗಿ ದಾಸ್ತಾನು ಇರುವ ಸ್ಥಳಕ್ಕೆ. ಕುಂದಾಪುರ ಆಹಾರ ನಿರೀಕ್ಷಕರಾದ H .S ಸುರೇಶ್ ಹಾಸನ ರವರು ದಾಳಿ ನಡೆಸಿ 8 ಕ್ವಿಂಟಾಲ್‌ಗೂ ಅಧಿಕ ಅಕ್ಕಿ ವಶಪಡಿಸಿಕೊಂಡ ಘಟನೆ ಸೋಮವಾರ ನಡೆದಿದೆ.
ಈ ಸಂದರ್ಭ ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರವೀಣ್ ಕುಮಾರ್ ಮತ್ತು ಸಿಬ್ಬಂದಿಗಳು ಹಾಜರಿದ್ದರು
ಕುಂದಾಪುರ ಆಹಾರ H S ಸುರೇಶ್ ರವರು ದಾಳಿ ನಡೆಸಿ ಅಕ್ರಮವಾಗಿ ಶೇಖರಣೆ ಮಾಡಿದಂತ ಗೋಡನ್ ಒಳಗಡೆ ಇರುವಂತ ಬಿಳಿ ಪಾಲಿಥೀನ್ ಚೀಲದಲ್ಲಿ ತುಂಬಿದ್ದ ಒಟ್ಟು 8 ಕ್ವಿಂಟಾಲ್ 45 ಕೆ ಜಿ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.