ಶಿರೂರು : ತ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾಟದಲ್ಲಿ ಜ್ಞಾನದಾ ಶೈಕ್ಷಣಿಕ ಸಂಸ್ಥೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ
Wednesday, August 6, 2025
ಶಿರೂರು :
ತ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾಟದಲ್ಲಿ ಜ್ಞಾನದಾ ಶೈಕ್ಷಣಿಕ ಸಂಸ್ಥೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ
ಬೈಂದೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು ಮತ್ತು ಸ. ಹಿ. ಪ್ರಾಥಮಿಕ ಶಾಲೆ ಕೇಸರ್ ಕೊಡಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬೈಂದೂರು ಹೋಬಳಿ ಮಟ್ಟದ 14 ರ ವಯೋಮಾನದ ಬಾಲಕಿಯರ ತ್ರೋಬಾಲ್ ಮತ್ತು ಬಾಲಕರ ವಾಲಿಬಾಲ್
ಪಂದ್ಯಾಟದಲ್ಲಿ ಪ್ರಥಮಸ್ಥಾನಿಯಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಇವರಿಗೆ
ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್ ತರಭೇತಿಯನ್ನು ನೀಡಿರುತ್ತಾರೆ
ಇವರಿಗೆ ಆಡಳಿತ ಮಂಡಳಿ,
ಪ್ರಾಂಶುಪಾಲರು,ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಶುಭ ಕೋರಿರುತ್ತಾರೆ