ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲ (ರಿ.) ನಾಯಕವಾಡಿ ಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ಸಂಭ್ರಮ
Friday, August 15, 2025
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ವಿಧಾನ್ಸಭಾ ಕ್ಷೇತ್ರದ ಗುಜ್ಜಾಡಿ ಗ್ರಾಮದ ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲ (ರಿ.) ನಾಯಕವಾಡಿ - ಗುಜ್ಜಾಡಿಯಲ್ಲಿ ನಮ್ಮ ದೇಶದ 79ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮ ಮತ್ತು ಸಭಾ ಕಾರ್ಯಕ್ರಮ ನಡೆಯಿತು.
ಧ್ವಜಾರೋಹಣವನ್ನು ಬೆಳಕು ಸೋಲಾರ್ ಸಿಸ್ಟಮ್ ನಾಯಕವಾಡಿ ಇದರ ಮಾಲೀಕರಾದ ಶ್ರೀಶಂಕರ್ ಪೂಜಾರಿ ಅವರು ಧ್ವಜಾರೋಹಣ ಕಾರ್ಯಕ್ರಮ ನೇರವೆರಿಸಿದರು .
ಮುಖ್ಯ ಅತಿಥಿಗಳಾಗಿ ನಮ್ಮ ಮಾತೃ ಸಂಸ್ಥೆಯಾದ ಶ್ರೀ ಸಂಗಮೇಶ್ವರ ದೇವಸ್ಥಾನದ ಅಧ್ಯಕ್ಷರಾದ ಶ್ರೀರಘುರಾಮ.ಟಿ , ಸ್ಥಳೀಯ ಅಂಗನವಾಡಿ ಶಿಕ್ಷಕಿಯಾದ ಕುಮಾರಿ ನಿರೀಕ್ಷಾ, ಶ್ರೀರಾಮ್ ಫೈನಾನ್ಸ್ ಬೈಂದೂರು ಶಾಖೆಯ ಮ್ಯಾನೇಜರಾದ ಶ್ರೀ ಕರುಣಾಕರ್ ಕಿರಿಮಂಜೇಶ್ವರ, ಯುವಕ ಮಂಡಲ, ಮಾತೃ ಸಂಸ್ಥೆ ಮತ್ತು ಸಂಗಮ ಮಹಿಳಾ ತಂಡ ಪದಾಧಿಕಾರಿಗಳು , ಸರ್ವ ಸದಸ್ಯರುಗಳು, ಅಂಗನವಾಡಿ ಪುಟಾಣಿಗಳು, ಪೋಷಕರು, ಸಾರ್ವಜನಿಕರು ಇವರುಗಳ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ಜರುಗಿತು.
ಸಿಂಧೂರ 79 ನೇ ಸ್ವಾತಂತ್ರೋತ್ಸವ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿತ್ತು