ಗಂಗೊಳ್ಳಿ ಸ. ಕಿ. ಪ್ರಾ. ಶಾಲೆ ಗಂಗೊಳ್ಳಿ79 ನೇ ಸ್ವಾತಂತ್ರ್ಯ ಸಂಭ್ರಮ
Friday, August 15, 2025
ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೇಲ್ ಗಂಗೊಳ್ಳಿ ಬಾವಿಕಟ್ಟೆ ಭಾಗದ ಸ. ಕಿ. ಪ್ರಾ. ಶಾಲೆ ಗಂಗೊಳ್ಳಿ
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಂತಿ ಖಾರ್ವಿ ( ಅಧ್ಯಕ್ಷರು ಗ್ರಾಮ ಪಂಚಾಯತ್ ಗಂಗೊಳ್ಳಿ) ಯವರು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಸವಿತಾ ಖಾರ್ವಿ ಅಧ್ಯಕ್ಷರು SDMC, ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಚಂದ್ರ ಖಾರ್ವಿ, ರಾಜೇಂದ್ರ ಶೇರುಗಾರ್, ಅಶ್ವಿನಿ ಖಾರ್ವಿ, ಹಾಗೂ ಭಾಸ್ಕರ್ ಜಿ ಗೌರವಾಧ್ಯಕ್ಷರು ಅಂಬೇಡ್ಕರ್ ಯುವಕ ಮಂಡಲ ಮೇಲ್ ಗಂಗೊಳ್ಳಿ, ಶ್ರೀ ನಾಗೇಶ್ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಶ್ರೀ ನಾಗಲಕ್ಷ್ಮಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ, ಆನಂದ ಶಿಕ್ಷಣ ಪ್ರೇಮಿಗಳು ಗಂಗೊಳ್ಳಿ, ಸತೀಶ್ ಕಂಚುಗೋಡು ಜಿಲ್ಲಾಧ್ಯಕ್ಷರು ಅಂಬೇಡ್ಕರ್ ಸೇನೆ ಉಡುಪಿ ಜಿಲ್ಲೆ, ದಾಮೋದರ ಮೊಗವೀರ ನಾಯಕವಾಡಿ ಜಿಲ್ಲಾಧ್ಯಕ್ಷರು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಉಡುಪಿ ಜಿಲ್ಲೆ, ಸಹನ ಅಂಗನವಾಡಿ ಕಾರ್ಯಕರ್ತೆ, ಗುರುರಾಜ್ ಆಚಾರಿ ಮುಖ್ಯೋಪಾಧ್ಯಾಯರು, ಪೋಷಕರು ಮತ್ತು ಊರ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ವಿವರ:
ದಾನಿಗಳಾದ ಶ್ರೀಯುತ ರಾಜೇಂದ್ರ ಶೇರುಗಾರ್ ಅವರು ನೀಡಿದ ಟ್ರಾಕ್ ಸೂಟ್ಗಳನ್ನು ಮಕ್ಕಳಿಗೆ ವಿತರಿಸಲಾಯಿತು ಮತ್ತು ಸತೀಶ್ ಕಂಚುಗೋಡು ಮತ್ತು ಬಳಗದವರಾದ ದಾಮೋದರ ಮೊಗವೀರ, ಸಚಿನ್, ಸವಿನ್, ಶಿವ ರಂಜನ್, ಮುನ್ನ ಬಾವಿಕಟ್ಟೆ ಇವರುಗಳು ನೀಡಿದ ಲೇಖನ ಸಾಮಗ್ರಿ ಮತ್ತು ಸಿಹಿ ತಿಂಡಿ ವಿತರಣೆ ಕಾರ್ಯಕ್ರಮ ನಡೆಯಿತು ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಿದರು .