ಬೈಂದೂರು : ಬಿಜೂರು ಶ್ರೀ ದುರ್ಗಾಪರಮೇಶ್ವರಿ ಆಟೋ, ಕಾರು, ಗೂಡ್ಸ್ ಚಾಲಕರ ಮತ್ತು ಮಾಲಕರ ಸಂಘದ ಅದ್ದೂರಿ 79ನೇ ಸ್ವಾತಂತ್ರ್ಯ ದಿನಾಚರಣೆ
Friday, August 15, 2025
ಬಿಜೂರು:
ಶ್ರೀ ದುರ್ಗಾಪರಮೇಶ್ವರಿ ಆಟೋ, ಕಾರು, ಗೂಡ್ಸ್ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಪ್ರತಿವರ್ಷದಂತೆ ಈ ಬಾರಿ ಕೂಡ ಮೀನಾಕ್ಷಿ ವಿಜಯಕುಮಾರ್ ಬೆಸ್ಕೂರ್ ಅವರು ರಥಬೀದಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿ ಸಾಮಾಜಿಕ ಜವಾಬ್ದಾರಿಯ ಮನೋಭಾವವನ್ನು ತೋರಿಸಿದರು.
ವೇದಿಕೆಯಲ್ಲಿ ಪ್ರಿಯದರ್ಶಿನಿ ಕಮಲೇಶ್ ಬೆಸ್ಕೂರ್, ಕಮಲೇಶ್ ಬೆಸ್ಕೂರ್, ಸಂಘದ ಅಧ್ಯಕ್ಷ ಯೋಗೀಶ್ ದೇವಾಡಿಗ, ಕಾರ್ಯದರ್ಶಿ ರಾಧಾಕೃಷ್ಣ,ಜೇಸಿ ಪುರುಷೋತ್ತಮದಾಸ್, ಗ್ರಾಮ ಪಂಚಾಯತ್ ಸದಸ್ಯರಾದ ಮಂಜುನಾಥ್ ದೇವಾಡಿಗ, ಗಂಗಾಧರ್ ದೇವಾಡಿಗ, ಅಶೋಕ್ ಪೂಜಾರಿ, ರವೀಂದ್ರ ಪ್ರಭು, ಜಯದುರ್ಗಾ ಕೆಟರರ್ಸ್ ಮಾಲಕರಾದ ಅಶೋಕ್ ಪೂಜಾರಿ, ಹಿರಿಯ ನಾಗರಿಕರಾದ ಪಾಂಡುರಂಗ ಖಾರ್ವಿ, ದುರ್ಗಯ್ಯ ಪೂಜಾರಿ, ಸಂಘದ ಸರ್ವ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಭಾಸ್ಕರ ದೇವಾಡಿಗ ಸ್ವಾಗತಿಸಿ ನಿರೂಪಿಸಿದರು. ಅಂತಿಮವಾಗಿ ಗಣೇಶ್ ದೇವಾಡಿಗ ವಂದನಾರ್ಪಣೆ ಸಲ್ಲಿಸಿದರು.