ಚಿತ್ತೂರಿನಲ್ಲಿ ದೇವ ದೈವ ನರ್ತಕರ ಸಂಘ ( ರಿ) ಉದ್ಘಾಟನೆ*
Monday, August 25, 2025
ಕುಂದಾಪುರ : ದೇವ ದೈವ ನರ್ತಕರ ಸಂಘ (ರಿ.) ಕುಂದಾಪುರ ಹಾಗೂ ಬೈಂದೂರು ವಲಯದ ಉದ್ಘಾಟನಾ ಸಮಾರಂಭವು ಕೊಲ್ಲೂರು ಮುಖ್ಯರಸ್ತೆಯ ಚಿತ್ತೂರು ಸಕಲ ಕನ್ವೆಷನ್ ಸಭಾಭವನದಲ್ಲಿ ಭಾನುವಾರ ನಡೆಯಿತು.
ಉಡುಪಿ ಚಿಕ್ಕ ಮಗಳೂರು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕುಂದಾಪುರ ಹಾಗೂ ಬೈಂದೂರು ವಲಯದ ದೇವ ದೈವ ನರ್ತಕರ ಸಂಘ ಉದ್ಘಾಟಿಸಿ ಮಾತನಾಡಿದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು ಧಾರ್ಮಿಕ ಹಾಗೂ ಸನಾತನ ಧರ್ಮ ಉಳಿಸಲು ಸಂಘಟನೆಯ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟೆಹೊಳೆ ಮಾತನಾಡಿ ಮಂಗಳೂರಿನಲ್ಲಿ ವಿಮಾನ ಪೈಲೆಟ್ ಒಬ್ಬರು ದೈವ ನರ್ತನದ ಪಾತ್ರಿ ಆಗಿದ್ದಾರೆ, ಆದರೆ ಗ್ರಾಮೀಣ ಭಾಗದ ಜನ ಆಧುನಿಕತೆ ಎಂದು ಧಾರ್ಮಿಕ ಧರ್ಮವನ್ನು ಮರೆಯುತ್ತಿರುವುದು ಸರಿಯಲ್ಲ, ಇನ್ನಾದರೂ ಯುವಕರು ತಮ್ಮ ಸನಾತನ ಧರ್ಮ ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ಕೆ ಮುಂದಾಗಬೇಕು ಎಂದು ಹೇಳಿದರು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಯವರು ಸಂಘದ ಐಡಿ ಕಾರ್ಡ್ ವಿತರಣೆ ಮಾಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ದೇವ ದೈವ ನರ್ಥಕರ ಸಂಘದ ಅಧ್ಯಕ್ಷ ಪ್ರದೀಪ್ ಶೆಟ್ಟಿ ಮಾತನಾಡಿ ನಮ್ಮ ಸಂಘಟನೆ ವತಿಯಿಂದ ಮುಂದಿನ ದಿನಗಳಲ್ಲಿ ಸದಸ್ಯರ ಆರೋಗ್ಯ ಸಮಸ್ಯೆಗೆಸ್ಪಂದಿಸುವುದು ಹಾಗೂ, ಕಡು ಬಡತನದ ಮನೆ ಇಲ್ಲದವರಿಗೆ ಗೃಹ ನಿರ್ಮಾಣಕ್ಕೆ ನೆರವು ನೀಡುವುದು ನಮ್ಮ ಸಂಘದ ಮೂಲ ಕರ್ತವ್ಯವಾಗಿದೆ ಹಾಗೂ ತಕ್ಷಣ ದರ್ಶನ ಪಾತ್ರಿಗಳು ಸಂಘದ ಸದಸ್ಯತ್ವದ ಕಾರ್ಡ್ ಪಡೆದುಕೊಳ್ಳುವಂತೆ ವಿನಂತಿಸಿದರು.
ಸಭಾ ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಸಂಘದ ಗೌರವ ಅಧ್ಯಕ್ಷ ಸತೀಶ್ ನಾಯಕ್ ನೆರವೇರಿಸಿದರು, ರವಿರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಸಂಘದ ಕಾರ್ಯದರ್ಶಿ ಸತೀಶ್ ಪಾಣಾರ ವಂದಿಸಿದರು.
ವರದಿ: ಸುರೇಶ್ ಅಮಾಸೆ ಬೈಲು ಕೋಸ್ಟಲ್ ನ್ಯೂಸ್ ಕುಂದಾಪುರ