ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಂಕೋಲಾ ತಾಲೂಕ ಅಧ್ಯಕ್ಷರಾಗಿ ಮಾರುತಿ ಹರಿಕಂತ್ರ ಆಯ್ಕೆ
Wednesday, August 20, 2025
ಅಂಕೋಲಾ: ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಂಕೋಲಾ ತಾಲ್ಲೂಕು ಘಟಕ ಅಸ್ತಿತ್ವಕ್ಕೆ ಬಂದಿದ್ದು ಜನಮಾಧ್ಯಮ ಪತ್ರಿಕೆಯ ಕರಾವಳಿ ವಿಭಾಗದ ಕಾರ್ಯನಿರ್ವಾಹಕ ಮಾರುತಿ ಹರಿಕಂತ್ರ ಅಧ್ಯಕ್ಷರಾಗಿ ಹಾಗೂ ವಿಕಾಸವಾಹಿನಿ ವರದಿಗಾರ ಕಿರಣ್ ಗಾಂವಕರ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿದ್ದಾರೆ.
ಸಂಘಟನೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ ಆದೇಶದ ಮೇರೆಗೆ ಕರಾವಳಿ ವಿಭಾಗದ ಉಸ್ತುವಾರಿ ಕುಮಾರ ನಾಯ್ಕ್ ಮತ್ತು ಜಿಲ್ಲಾಧ್ಯಕ್ಷ ನಾಗರಾಜ ದೈವಜ್ಞ ಅನುಮೋದನೆಯ ಮೇರೆಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಪತ್ರಕರ್ತರಾದ ವಿದ್ಯಾಧರ ಮೊರಬಾ, ವಿಲಾಸ ನಾಯಕ, ನಾಗರಾಜ ಶೆಟ್ಟಿ ಮತ್ತು ಸುಪ್ರಿಯಾ ನಾಯ್ಕ್ ಅವರನ್ನು ಒಳಗೊಂಡ ಸಂಘಟನೆಯು ರಚಿತವಾಗಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯು ರಾಜ್ಯ ಮಟ್ಟದಲ್ಲಿ ಪತ್ರಕರ್ತರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪತ್ರಕರ್ತರ ಹಿತಾಸಕ್ತಿ ಮತ್ತು ಹಕ್ಕುಗಳ ರಕ್ಷಣೆಗಾಗಿ ಹಾಗೂ ವಸ್ತುನಿಷ್ಠ ವರದಿಗಾರಿಕೆಗೆ ಪ್ರೋತ್ಸಾಹಿಸುತ್ತದೆ. ಈಗಾಗಲೇ ರಾಜ್ಯದ 27 ಜಿಲ್ಲೆಗಳಲ್ಲಿ ಸಂಘದ ಘಟಕಗಳಿದ್ದು ಜಿಲ್ಲೆಯ ವಿವಿಧಡೆ ತಾಲ್ಲೂಕು ಮಟ್ಟದಲ್ಲಿ ಸಂಘಟನೆ ಬಲವಾಗಿದೆ. ನೂತನ ಸಂಘಟನೆಯು ತಾಲ್ಲೂಕಿನ ಪತ್ರಕರ್ತರ ನೈಜ ಧ್ವನಿಯಾಗಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಕಾರ್ಯನಿರ್ವಹಣೆ ಮಾಡಲಿದೆ ಎಂದು ಸಂಘದ ಅಧ್ಯಕ್ಷ ಮಾರುತಿ ಹರಿಕಂತ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
COSTALNEWS ಕುಂದಾಪುರ