ಗಂಗೊಳ್ಳಿ : 23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ…!!
Thursday, August 21, 2025
ಗಂಗೊಳ್ಳಿ : ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾದಂತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ನಾಸೀರ ಖಾನ್ ಎಂದು ಗುರುತಿಸಲಾಗಿದೆ.
ಗಂಗೊಳ್ಳಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 33/2002 ಕಲಂ:498ಎ,504,506,(2) ಐಪಿಸಿ ಮತ್ತು 3,4,6 ವರದಕ್ಷಣೆ ಕಾಯ್ದೆ, ಸಿ ಸಿ ನಂಬರ್ 1457/2002ಪ್ರಕರಣದಲ್ಲಿ ಎಲ್.ಪಿ.ಸಿ ಆಸಾಮಿಯಾದ ನಾಸೀರ ಖಾನ್ (52 ವರ್ಷ) ತಂದೆ: ರೆಹಮತ್ತುಲ್ಲಾ ಖಾನ್ ವಾಸ: ಕೆರೆಹಿತ್ತಲು ,ಗಿಲಾರ ಗುಂಡಿ,ಆನಂದಪುರ ಪೋಸ್ಟ್ ಸಾಗರ ತಾಲೂಕು ,ಶಿವಮೊಗ್ಗ ಜಿಲ್ಲೆ. ಪ್ರಸ್ತುತ ಹಾಲಿ ವಿಳಾಸ ವಿಜಾಪುರ, ಸಂಪಿಗೆ, ಕಚ್ಚಿಗೆ ಬೈಲು ಗ್ರಾಮ ಹೊಸನಗರ ತಾಲೂಕು ಶಿವಮೊಗ್ಗ ಜಿಲ್ಲೆ ಎಂಬಾತನು ಸುಮಾರು 23 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರಿಸಿಕೊಂಡಿದ್ದು, ಸದ್ರಿ ಆರೋಪಿತನನ್ನು ದಿನಾಂಕ 20/08/2025 ರಂದು ಠಾಣಾ ಸಿಬ್ಬಂದಿ ಹೆಡ್ ಕಾನ್ಸ್ಟೇಬಲ್ ಕೃಷ್ಣ, ದೇವಾಡಿಗ ಪಿ ಸಿ, ಪ್ರಸನ್ನ, ಪಿ ಸಿ ಸಂದೀಪ್ ಕುರಾಣಿ ರವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ಆರೋಪಿಯನ್ನು ಬಂಧಿಸಿ ಮಾನ್ಯ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿಲಾಗಿದೆ.
ಇತ್ತೀಚಿನ ದಿನಗಳಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕರ್ತವ್ಯ ನಿಷ್ಠೆ ಮತ್ತು ಚುರುಕಿನ ಕಾರ್ಯಾಚರಣೆ ಯಿಂದ ಕಳೆದ ಹಲವು ವರ್ಷಗಳಿಂದ ಪ್ರಕರಣಕ್ಕೆ ಸಂಬಂಧಿಸಿದಂತಹ ಹಲವು ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ,
ಪೊಲೀಸರ ಕರ್ತವ್ಯ ನಿಷ್ಠೆಗೆ ಸಾರ್ವಜನಿಕ ವಲಯದಲ್ಲಿ ಮತ್ತು ಉಡುಪಿ ಜಿಲ್ಲಾ ವರಿಷ್ಠಾಧಿಕಾರಿ ಯವರ ಪ್ರಸಂಸೆಗೆ ಪಾತ್ರರಾಗಿದ್ದಾರೆ