ಹಾಲಾಡಿ ಯಲ್ಲಿ ಬೊಲೆರೋ ಪಿಕಪ್ ವಾಹನಕ್ಕೆ ಕಾರು ಡಿಕ್ಕಿ : ಗಾಯಾಳುಗಳು ಆಸ್ಪತ್ರೆಗೆ!!
Monday, August 18, 2025
A ಕುಂದಾಪುರ ತಾಲೂಕಿನ ಹಾಲಾಡಿ ಬಿದ್ಕಲ ಕಟ್ಟೆ ಸಂಪರ್ಕಿಸುವ ರಾಜ್ಯ ರಸ್ತೆಯ ಹಾಲಾಡಿ ಸಮೀಪ ಬಜಾಜ್ ಮೋಟಾರ್ ಸರ್ವಿಸ್ ಎದುರುಗಡೆ ಅತಿ ವೇಗವಾಗಿ ಚಲಾಯಿಸಿಕೊಂಡು ಬಂದಿರುವ ಮಾರುತಿ ಎಸ್ ಕ್ರಾಸ್ ಕಾರು ಬುಲೆರೋ ಪಿಕಪ್ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದು ಪಿಕಪ್ ವಾಹನದ ಹಿಂದುಗಡೆ ನಿಂತಿರುವ ಕೂಲಿ ಕಾರ್ಮಿಕರು ಗಂಭೀರ ಗಾಯಗೊಂಡು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ
ಮಾರುತಿ ಎಸ್ ಕ್ರಾಸ್ ಕಾರು ಶಿವಮೊಗ್ಗ ಜಿಲ್ಲೆಯ ಶಿರಾಳ ಕೊಪ್ಪ ಮೂಲದ ಯುವಕರು ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಬಂದು ಮರಳಿ ಶಿವಮೊಗ್ಗ ಕಡೆಗೆ ಮಧ್ಯಾಹ್ನ 3:00 ಗಂಟೆ ಸಮಯದಲ್ಲಿ ಹಾಲಾಡಿ ಸಮೀಪ ಅತಿ ವೇಗವಾಗಿ ಕಾರು ಚಲಿಸಿದ ಪರಿಣಾಮ ಎದುರು ಕಡೆಯಿಂದ ಬರುತ್ತಿರುವ ಬುಲೆರೋ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ
ಕಾರಿನಲ್ಲಿ ಮೂವರು ಯುವಕರು ಮದ್ಯಪಾನ ಸೇವನೆ ಮಾಡಿ ಮೋಜು ಮಸ್ತಿ ಯಿಂದ ಕಾರು ಚಲಾಯಿಸಿದ್ದಾರೆ ಎನ್ನಲಾಗಿದೆ ರಭಸವಾಗಿ ಕಾರು ಡಿಕ್ಕಿ ಹೊಡೆದ ಪರಿಣಾಮ ಬುಲೆರೋ ವಾಹನದಲ್ಲಿ ಹಿಂದುಗಡೆ ನಿಂತಿರುವ ಕೂಲಿ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದೆ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ
ಘಟನಾ ಸ್ಥಳಕ್ಕೆ ಶಂಕರ್ ನಾರಾಯಣ ಪೊಲೀಸ್ ಠಾಣೆಯ ಉಪನಿರೀಕ್ಷಕ ಹಿರೇಗೌಡ್ರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ
ಶಂಕರ್ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ