ಧರ್ಮಸ್ಥಳ ಬುರುಡೆ ಕಳೆಬರ ,ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
Saturday, August 23, 2025
ಧರ್ಮಸ್ಥಳ:
ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿದ್ದಾಗ ನೂರಾರು ಶವಗಳನ್ನು ಹೂತಿದ್ದೇನೆ ಎಂದು ದೂರು ನೀಡಿದ್ದ ಅನಾಮಿಕ ಮುಸುಕುದಾರಿಯನ್ನು ಬಂಧನ ಮಾಡಲಾಗಿದೆ.
ಈವರೆಗೆ ಪ್ರಕರಣದ ಪ್ರಮುಖ ಸಾಕ್ಷಿಧಾರನಾಗಿದ್ದ ಮುಸುಕುಧಾರಿಯನ್ನು ಸುಧೀರ್ಘ ವಿಚಾರಣೆಯ ನಂತರ ಎಸ್ಐಟಿ ತಂಡ ಬಂಧಿಸಿದೆ. ಬಂಧನದ ಬಳಿಕ ಮುಸುಕುಧಾರಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಈವರೆಗೆ ಮುಸುಕುಧಾರಿ ಪ್ರಕರಣದ ಸಾಕ್ಷಿಧಾರನಾದ ಕಾರಣ ವಿಟ್ನೆಸ್ ಪ್ರೊಟೆಕ್ಷನ್ ಯಾಕ್ಟ್ ಅಡಿಯಲ್ಲಿ ಅವರ ವಿವರವನ್ನು ಗುಪ್ತವಾಗಿಡಲಾಗಿದ್ದು ಈಗ ಅದರಿಂದ ವಿಮುಕ್ತಗೊಳಿಸಿ ಆರೋಪಿಯಾಗಿ ಬದಲಾಗಿದ್ದು ಅವರ ಹೆಸರು ಸಿ.ಎನ್.ಚಿನ್ನಯ್ಯ ಎಂದು ಗುರಿತಿಸಲಾಗಿದೆ