udupi ಉಡುಪಿ: ಬಿಲ್ಲವರ ಸುದ್ದಿಗೆ ಬಂದರೆ ಬಿಡುವ ಮಾತೇ ಇಲ್ಲ..! ಪ್ರವೀಣ್ ಪೂಜಾರಿ
Wednesday, June 10, 2026
ಉಡುಪಿ: ಅನಿತಾ ಕಾಸರಗೋಡು ಎಂಬ ಹೆಸರಿನ ಮಹಿಳೆ ಉಡುಪಿ ಮತ್ತು ದ. ಕ. ಜಿಲ್ಲೆಯ ಹಿಂದುಳಿದ ವರ್ಗಕ್ಕೆ ಸೇರಿದ ಬಿಲ್ಲವ ಸಮುದಾಯವನ್ನು ಅವಹೇಳನಕಾರಿಯಾಗಿ ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುತ್ತಿದ್ದು, ಇದು ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾನತೆಯ ತತ್ವಾದರ್ಶಗಳನ್ನು ಪಾಲಿಸಿಕೊಂಡು ಬರುತ್ತಿರುವ ಬಿಲ್ಲವ ಸಮುದಾಯಕ್ಕೆ ಅತೀವ ನೋವುಂಟು ಮಾಡಿದ್ದು, ಆದರೂ ಇದಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ವಯಂ ಪ್ರೇರಿತ ಕಾನೂನು ಕ್ರಮ ಕೈಗೊಳ್ಳುವ ಅವಕಾಶವಿದ್ದರೂ ಇಷ್ಟರ ತನಕ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ,
ತಾನು ಮೇಲ್ವರ್ಗದ ಮಹಿಳೆ ಎಂದು ಅಹಂನಿಂದ ಹೇಳಿಕೊಂಡು ಅನಿತಾ ಕಾಸರಗೋಡು ಸಮುದಾಯಗಳ ಮಧ್ಯೆ ಮತ್ತು ಧರ್ಮಗಳ ನಡುವೆ ಸಂಘರ್ಷ ತರುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಾನಸಿಕ ಅಸವಸ್ಥೆಯಂತೆ ಬಿಲ್ಲವ ಸಮಾಜವನ್ನು ನಿಂದಿಸುತ್ತ ತನ್ನ ಚಾಳಿಯನ್ನು ಮುಂದುವರಿಸಿದ್ದು, ಈ ಸಂಬಂಧ ಉಡುಪಿ ಹಾಗೂ ದ. ಕ. ಜಿಲ್ಲೆಯ ಜನಪ್ರತಿನಿದಿಗಳು ಶಾಸಕರು ಸಂಸದರು ಆಕೆಯ ಹೇಳಿಕೆಯನ್ನು ಖಂಡಿಸದಿರುವುದು ಇಡೀ ಬಿಲ್ಲವ ಸಮಾಜ ಬೇಸರಗೊಂಡಿದೆ. ಪೊಲೀಸ್ ಇಲಾಖೆ ಆಕೆಯನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸದೆ ನಿರ್ಲಕ್ಷಿಸಿ ಬಿಲ್ಲವ ಸಮಾಜದ ತಾಳ್ಮೆಯನ್ನು ಪರೀಕ್ಷಿಸಿದರೆ ಅತೀ ಶೀಘ್ರದಲ್ಲಿ ಎಲ್ಲಾ ಬಿಲ್ಲವ ಸಂಘ ಸಂಸ್ಥೆಗಳು ಮತ್ತು ಸಮಾಜದ ಮುಖಂಡರು ಒಗ್ಗಟ್ಟಾಗಿ ಉಗ್ರ ಹೋರಾಟ ಮಾಡಲಾಗುವುದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷರು ಪ್ರವೀಣ್ ಪೂಜಾರಿ ತಿಳಿಸಿದ್ದಾರೆ.