udupi: ಕಾನೂನು ಮಾಹಿತಿ ಕಾರ್ಯಗಾರ ಮತ್ತು ರೈತರೊಂದಿಗೆ ಮುಕ್ತ ಸಂವಾದ.
Saturday, May 16, 2026
ಕಾನೂನು ಸೇವೆ ರೈತರೆಡೆಗೆ ಎಂಬ ಧ್ಯೇಯ ವಾಕ್ಯದೊಂದಿದೆ.
ತಾರೀಕು;15-05-2026 ರಂದು ಹೆಬ್ಗೋಳಿ ಕುಷ್ಟ ಅಗ್ರಿಕಲ್ಚರ್ ಕಂಪೆನಿ. ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸಹಭಾಗಿತ್ವ ದಲ್ಲಿ ಸ್ಥಳೀಯ ರೈತರಿಗೆ ಕಾನೂನು ಮಾಹಿತಿ ಮತ್ತು ಮುಕ್ತ ಸಂವಾದ ಕಾರ್ಯಕ್ರದಲ್ಲಿ ಹೆಬ್ಗೋಳಿ ಕುಷ್ಟ ಅಗ್ರಿಕಲ್ಚರ್ ಕಂಪನಿ, ಪ್ರವರ್ತಕ ಹಾಗೂ ರೈತರು ಆದ ಪ್ರವೀಣ್ ಹೆಬ್ಗೋಳಿ ಪ್ರಸ್ತಾವಿಕ ಮಾತನಾಡಿ ರೈತರು ದೇಶದಲ್ಲಿ ಮೊದಲ ಸ್ಥಾನ ಗುರುತಿಸಿ ಕೋಲ್ಬೇಕಾದ್ರೆ ಕಾನೂನು ಅರಿವು ಅಗತ್ಯ, ರೈತರು ಮಾತನಾಡುವಾಗ ಸರಿಯಾದ ಪದ ಬಳಕೆ ಮಾಡಿದ್ರೆ, ರೈತರ ಮುಂದೆ ನಿಂತು ಮಾತಾಡಲು ಯಾರಿಗೂ ಸಾಧ್ಯ ಇಲ್ಲ ಅಂಥ ಹೇಳಿದ್ರು,ವಕೀಲರು ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಾಯಕ ಕಾನೂನು ನೆರವು ಅಭಿರಕ್ಷಕರು ರಾಘವೇಂದ್ರ ಎಸ್. ರವರು ಭಾಗವಹಿಸಿ ರೈತರಿಗೆ ಕಾನೂನು ಮಾಹಿತಿ ರೈತರ ಕಾನೂನು ರೀತ್ಯಾ ಹಕ್ಕು ಬಾಧ್ಯತೆ, ದಾಖಲೆ ತಿದ್ದುಪಡಿ ಸಮಸ್ಯೆ, ಕಂದಾಯ ದಾಖಲೆ ಅಗತ್ಯತೆ, ತಿದ್ದುಪಡಿ ಕ್ರಮ, ರೈತ ಗ್ರಾಹಕ ಹಕ್ಕು, ರೈತರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಗತ್ಯ ನೆರವು ಕೂಡ ಇನ್ನಿತರ ವಿಷಯಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡುತ್ತಾ ರೈತ ಪ್ರಶ್ನೆಗಳಿಗೆ ಮುಕ್ತ ಸಂವಾದದಲ್ಲಿ ಭಾಗವಹಿಸಿದರು. ಸಭೆಯಲ್ಲಿ ಹಿರಿಯ ರೈತರು, ಸಾಮಾಜಿಕ ಹೋರಾಟಗಾರರು ಆದ ರತ್ನಾಕರ ಶೆಟ್ಟಿ , ಪ್ರಗತಿರ ರೈತರಾದ ಬೊಜ್ಜು ಪೂಜಾರಿ ಚಾರಿಟಬಲ್ ಟೆಸ್ಟ್ (ರಿ) ಬೆಚ್ಚಳ್ಳಿ ಅಧ್ಯಕ್ಷರಾದ ರಾಜೇಂದ್ರ ಪೂಜಾರಿ,ಹೆಬ್ಗೋಳಿ ಕುಷ್ಟ ಅಗ್ರಿಕಲ್ಚರ್ ಕಂಪೆನಿ. ಪ್ರವರ್ತಕರು ಹಾಗೂ ಕಾರ್ಯಕ್ರಮ ಆಯೋಜಕರು. ಅದ ಪ್ರವೀಣ್ ಹೆಬ್ಗೋಳಿ ಭಾಗವಹಿಸಿದ್ದರು