udupi ಕುಂದಾಪುರ: ಖಾರ್ವಿ ಕೇರಿ ರಿಂಗ್ ರಸ್ತೆಯ ಬಳಿ ನೂತನ ಶೌಚಾಲಯ ನಿರ್ಮಾಣ ಮಾಡುವಂತೆ ಸ್ಥಳೀಯರ ಒತ್ತಾಯ..!
Saturday, May 16, 2026
ಕುಂದಾಪುರ: ಕುಂದಾಪುರ ಪುರಸಭೆ ವ್ಯಾಪ್ತಿಯ ಮೂರನೇ ವಾರ್ಡಿನ ಖಾರ್ವಿ ಮಧ್ಯ ಕೇರಿಯ ರಿಂಗ್ ರಸ್ತೆಯ ಸಮೀಪದಲ್ಲಿ ಪುರಸಭೆಯಿಂದ ಸಾರ್ವಜನಿಕರ ಶೌಚಾಲಯವನ್ನು 35 ರಿಂದ 40 ವರ್ಷದ ಹಿಂದೆ ಪುರಸಭೆಯಿಂದ ಶೌಚಾಲಯವನ್ನು ಕಟ್ಟಿಕೊಟ್ಟಿರುತ್ತೇವೆ ಅದಕ್ಕೆ ಶೌಚಾಲಯ ಪಿಟ್ಟ ಹೋಂಡಾ ಇಲ್ಲದಿರುವುದರಿಂದ ಮತ್ತು ಅದು ದುರಸ್ತಿ ವ್ಯವಸ್ಥೆಯಲ್ಲಿ ಇರುವುದರಿಂದ ದುರಸ್ತಿ ಮಾಡಿಸಿ ಹೊಸದಾಗಿ ಸಾರ್ವಜನಿಕರ ಶೌಚಾಲಯವನ್ನು ಮತ್ತು ಪಿಟ್ಟು ಹೊಂಡವನ್ನು ನಿರ್ಮಿಸಿ ಕೊಡಬೇಕಾಗಿ ನಾಮ ನಿರ್ದೇಶತ ಸದಸ್ಯರಾದ ಸದಾನಂದ ಖಾರ್ವಿ ಯವರು ಹಾಗೂ ಅಲ್ಲಿನ ನಾಗರಿಕರು ಒಟ್ಟು ಸೇರಿ ಅರ್ಜಿಯನ್ನು ಪುರಸಭೆಯ ಅಧಿಕಾರಿಗಳಿಗೆ ಸಲ್ಲಿಸಿರುತ್ತಾರೆ ಹಾಗೂ ಜನರ ಮೂಲಸೌಕರ್ಯ ಒದಗಿಸುವಂತೆ ಒತ್ತಾಯ.
ಮುಖ್ಯ ಅಧಿಕಾರಿ ಅವರ ಅನುಪಸ್ಥಿತಿಯಲ್ಲಿ ಪುರಸಭೆ ಕಂದಾಯ ನಿರೀಕ್ಷಕರಾದ ಅಂಜಲಿ ಗೌಡ ಅವರು ಮನವಿ ಸ್ವೀಕರಿಸಿದರು
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರಾಮಖಾರ್ವಿ, ಸುಬ್ರಮಣ್ಯ ಖಾರ್ವಿ , ರಾಮಚಂದ್ರ ಖಾರ್ವಿ , ದೇವರಯ ಖಾರ್ವಿ , ಸೂರ್ಯಖಾರ್ವಿ ಹಾಗೂ ಪುರಸಭೆ ಸದಸ್ಯ ನಾಮ ನಿರ್ದೇಶಿತ ಸದಾನಂದ ಖಾರ್ವಿ ಉಪಸ್ಥಿತರಿದ್ದರು
ಪುರಸಭೆ ಅಧಿಕಾರಿಗಳು ಖಾರ್ವಿ ಕೇರಿ ಜನರ ಮೂಲಸೌಕರ್ಯ ಒದಗಿಸುವಲ್ಲಿ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದೇ ಸಾರ್ವಜನಿಕರ ಅಭಿಪ್ರಾಯವಾಗಿದೆ.