ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Uttar Pradesh : ನಾಲ್ಕು ಮಕ್ಕಳನ್ನು ಹೆತ್ತ ಮಹಾತಾಯಿ, ಸದ್ಯಕ್ಕೆ ತಾಯಿ ಮಕ್ಕಳು ಸೇಫ್

Uttar Pradesh : ನಾಲ್ಕು ಮಕ್ಕಳನ್ನು ಹೆತ್ತ ಮಹಾತಾಯಿ, ಸದ್ಯಕ್ಕೆ ತಾಯಿ ಮಕ್ಕಳು ಸೇಫ್

ಐದು ದಿನದ ಮೊದಲು ಒಂದು ಗಂಡು ಮಗುವಿಗೆ ಜನ್ಮವಿತ್ತ ಆ ಮಹಾತಾಯಿ, ಮತ್ತೆ ಮೂವರು ಮಕ್ಕಳಿಗೆ ಜನ್ಮ ನೀಡುವ ಮೂಲಕ ನಾಲ್ವರು ಮಕ್ಕಳ ತಾಯಿಯಾಗಿ ಕಾಣಿಸಿಕೊಂಡಿದ್ದಾಳೆ. ಆಸ್ಪತ್ರೆಯ ಡಾಕ್ಟರ್ ಹಾಗೂ ಸಿಬ್ಬಂದಿಗಳು ಅಪಾಯಕಾರಿ ಸನ್ನಿವೇಶದಲ್ಲಿದ್ದ ತಾಯಿ ಮಕ್ಕಳಿಬ್ಬರನ್ನು ಯಾವುದೇ ರೀತಿಯ ಶಸ್ತ್ರಚಿಕಿತ್ಸೆ ಇಲ್ಲದೆ ನಾರ್ಮಲ್ ಡೆಲಿವರಿಯ ಮೂಲಕ ಹೆರಿಗೆ ಮಾಡಿಸಿದ್ದು ಮತ್ತಷ್ಟು ಅಚ್ಚರಿಗೆ ಕಾರಣವಾಗಿದೆ.
ಇದು ನಡೆದದ್ದು ಉತ್ತರ ಪ್ರದೇಶದ ಸಂಬಾಲ್ ಜಿಲ್ಲೆಯಲ್ಲಿ. ಇಲ್ಲಿನ ಓವರಿ ಗ್ರಾಮದ ನಿವಾಸಿ ಅಮೀನಾ ಎಂಬ ಹೆಣ್ಣುಮಗಳೇ ಈಗ ನಾಲ್ಕು ಮಕ್ಕಳ ತಾಯಿಯಾಗಿ ಆರೋಗ್ಯವಂತಳಾಗಿರುವವಳು.
ಮೇ 8ರಂದು ಇಲ್ಲಿನ ಲೋದಿಪುರ ತೀರ್ಥಂಕೇಶ ಮಹಾವೀರ ವಿಶ್ವವಿದ್ಯಾಲಯದ ಆಸ್ಪತ್ರೆಗೆ ಹೆರಿಗೆಗಾಗಿ ಆಗಮಿಸುತ್ತಾಳೆ ಈ ಮಹಾತಾಯಿ. ಇದೇ ಆಸ್ಪತ್ರೆಯಲ್ಲೇ ಹಲವು ಬಾರಿ ಚಿಕಿತ್ಸೆಯನ್ನು ಪಡೆದಿರುವಂತಹ ಅಮೀನಾ, ಮೇ ಎಂಟರಂದು ನೋವು ಕಾಣಿಸಿ ಕೊಳ್ಳುತ್ತಿದ್ದಂತೆಯೇ ಆಸ್ಪತ್ರೆಗೆ ಬಂದು ಅಡ್ಮಿಟ್ ಆಗುತ್ತಾಳೆ. ಮೊದಲೇ, ನಾಲ್ಕು ಮಗು ಇರುವ ವಿಚಾರವನ್ನು ಅಮೀನಾ ಹಾಗು ಅವರ ಕುಟುಂಬಕ್ಕೆ ವೈದ್ಯರು ತಿಳಿಸಿದರು. ಸಾಕಷ್ಟು ಜಾಗ್ರತೆಯಾಗಿರಬೇಕು ಅಂತಲೂ ಹೇಳಿದ್ದರು.
ಮೇ 9ರಂದು, ಗಂಡು ಮಗು ಒಂದು ಜನಿಸುತ್ತದೆ. ಮೊದಲೇ ಗರ್ಭದಲ್ಲಿ ಇನ್ನೂ ಮೂರು ಮಗು ಇರುವ ವಿಷಯ ತಿಳಿದಿದ್ದರಿಂದ ಇಲ್ಲಿನ ಡಾಕ್ಟರ್ಸ್ ಸಾಕಷ್ಟು ಕೇರ್ ತೆಗೆದುಕೊಂಡಿದ್ದರು. ಮೊದಲ ಮಗು ಗಂಡು ಮಗು ಜನಿಸಿದೆ. ಆರೋಗ್ಯವಂತ ಮಗುವಾದರೂ ಕೇವಲ 710 ಗ್ರಾಂ ತೂಕವನ್ನು ಹೊಂದಿತ್ತು ಆ ಮಗು. ವೈದ್ಯಲೋಕಕ್ಕೆ ಸವಾಲಾಗಿದ್ದ ಈ ಒಂದು ಸನ್ನಿವೇಶವನ್ನು ಇಲ್ಲಿನ ಡಾಕ್ಟರ್ ಗಳು ಹಾಗೂ ನರ್ಸಸ್ ಬಹಳ ಸೀರಿಯಸ್ ಆಗಿ ತೆಗೆದುಕೊಂಡು, ತಾಯಿ ಮಕ್ಕಳನ್ನು ಉಳಿಸಿಕೊಳ್ಳಲು ಸಕಲ ಪ್ರಯತ್ನವನ್ನು ಮಾಡುತ್ತಾರೆ. ಮೇ 14ರಂದು ಮತ್ತೆ ನೋವು ಕಾಣಿಸಿಕೊಳ್ಳುತ್ತದೆ. ಡಾಕ್ಟರ್ಸ್ಗಳು ಶಸ್ತ್ರಚಿಕಿತ್ಸೆಗೆ ಮನಸ್ಸು ಮಾಡದೆ ನಾರ್ಮಲ್ ಡಿಲೇವರಿಗೇನೇ ಒತ್ತು ನೀಡುತ್ತಾರೆ. ಪರಿಣಾಮ ಎರಡು ಹೆಣ್ಣು ಒಂದು ಗಂಡು ಮಗು ಮೇ 14 ರಂದು ಜನಿಸುತ್ತದೆ. ಅದರಲ್ಲಿ ಒಂದು ಮಗು ಆರೋಗ್ಯವಂತವಾಗಿದೆ ಇನ್ನೆರಡು ಮಗು ಸೇಫ್ ಆಗಿದ್ದರೂ ಸಹ ಆಸ್ಪತ್ರೆಯ ವೆಂಟಿಲೇಟರ್ ನಲ್ಲಿ ತೀವ್ರ ನಿಗ ಘಟಕದಲ್ಲಿ ಇದೆ. ತಾಯಿ ಕೂಡ ಸೇಫ್ ಆಗಿದ್ದಾಳೆ. ವೆಂಟಿಲೇಟರ್ ಅಲ್ಲಿರುವ ಇಬ್ಬರು ಮಕ್ಕಳು ಸಹ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ
ಒಟ್ಟಿನಲ್ಲಿ ಒಂದು ಮಗುವನ್ನು ಹೆತ್ತ ಐದು ದಿನದ ನಂತರ ಮತ್ತೆ ಮೂವರು ಮಕ್ಕಳಿಗೆ ಜನ್ಮ ನೀಡಿರುವ ಅಮೀನಾ ಈಗ ಈ ಪ್ರದೇಶದಲ್ಲಿ ಸಖತ್ ಫೇಮಸ್ ಆಗುತ್ತಿದ್ದಾಳೆ.

Ads on article

Advertise in articles 1

advertising articles 2

Advertise under the article