ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Sirsi: ಭಗವಂತ ಒಲಿಯುವುದು ಶುದ್ಧ ಭಕ್ತಿಗೆ ಮಾತ್ರ: ಭಟ್ಟಾಕಳಂಕ ಭಟ್ಟಾಚಾರ್ಯ ಶ್ರೀ

Sirsi: ಭಗವಂತ ಒಲಿಯುವುದು ಶುದ್ಧ ಭಕ್ತಿಗೆ ಮಾತ್ರ: ಭಟ್ಟಾಕಳಂಕ ಭಟ್ಟಾಚಾರ್ಯ ಶ್ರೀ

ಶಿರಸಿ : ಯುಗಾದಿ ಉತ್ಸವ ಸಮಿತಿಯ 28ನೇ ವರ್ಷದ ಯುಗಾದಿ ಉತ್ಸವ ಇಂದು ನಗರದ ವಿಕಾಸಆಶ್ರಮ ಬಯಲಿನಲ್ಲಿ ವಿಜೃಂಭಣೆಯಿಂದ ನಡೆಯಿತು.ಕಾರ್ಯಕ್ರಮದಲ್ಲಿ ಶಿರಸಿ ಬಣ್ಣದಮಠ ಶ್ರೀ ಶಿವಲಿಂಗ ಸ್ವಾಮೀಜಿ, ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸ್ವಾಮೀಜಿ ಉಪಸ್ಥಿತರಿದ್ದರು.ಸೋಂದ ಜೈನ ಮಠದ ಶ್ರೀ ಭಟ್ಟಾಕಳಂಕ ಭಟ್ಟಾಚಾರ್ಯ ಸ್ವಾಮೀಜಿಗಳು ಮಾತನಾಡಿ ಭಗವಂತ ನಂಬಿದವರಿಗೆ ಕೈ ಬಿಡುವುದಿಲ್ಲ. ಅಲ್ಲದೆ ಭಗವಂತ ಅಧಿಕಾರಸ್ತರಿಗೆ, ಶ್ರೀಮಂತರಿಗೆ, ಬಡವರಿಗೆ... ಹೀಗೆ ಒಲಿಯುತ್ತಾನೆಂದು ತಿಳಿಯಬಾರದು. ಭಗವಂತ ಒಲಿಯುವದು ಶುದ್ಧ ಭಾವ ಭಕ್ತಿಗೆ ಮಾತ್ರ ಎಂದು ಅವರು ತಿಳಿಸಿದರು.ಜನರಲ್ಲಿ ಆದ್ಯಾತ್ಮಿಕ ಚಿಂತನೆ ಹುರಿಗಟ್ಟಬೇಕಾಗಿದೆ ಎಂದು ಕರೆ ನೀಡಿದ ಅವರು ಮನುಷ್ಯ ತನ್ನಲ್ಲಿ ತಾನು ಶುದ್ಧಗೊಳ್ಳಬೇಕು, 

ಆಗ ಮಾತ್ರ ಶುದ್ಧ ಭಾವನೆಗಳು ಮೇಳಯಿಸಿ ಬದುಕು ಬೆಳಗುತ್ತದೆ ಎಂದು ನುಡಿದರು.ಬಣ್ಣದಮಠದ ಶ್ರೀ ಶಿವಲಿಂಗ ಸ್ವಾಮೀಜಿ ಹಾಗೂ ಸ್ವರ್ಣವಲ್ಲಿ ಸ್ವಾಮೀಜಿ ಶುಭ ವಚನ ನೀಡಿದರು. ಪ್ರಾರಂಭದಲ್ಲಿ ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ರಮೇಶ ದುಬಾಶಿ ಪ್ರಸ್ತಾವನೆಗೈದರು. ವೇದಿಕೆಯಲ್ಲಿ ಗಜಾನನ ಪೈ, ಕೃಷ್ಣ ಎಸಳೆ, ಅಶ್ವಿನ್ ಭೀಮಣ್ಣ ನಾಯ್ಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article