Kundapura "ನಂಬಿ ಕೆಟ್ಟವರಿಲ್ಲ".... ಅಂತಾರೆ !! ಆದ್ರಿಲ್ಲಿ, "ನಂಬಿಯೇ ಕೆಟ್ಟೋದ್ರಲ್ಲಾ" ? : ನಂದಾ ಕುಂದಾಪುರ
Thursday, March 19, 2026
ಕುಂದಾಪುರ: ಇಲ್ಲಿ ಯಾರನ್ನು ನಂಬಿದ್ರಿ? ಎನ್ನೋದರ ಮೇಲೆ ಪ್ರತಿಫಲ ಪ್ರಾಪ್ತಿಯಾಗುತ್ತೆ. ಜಾಲತಾಣದಲ್ಲಿ ಪರಿಚಯವಾದ ಸ್ನೇಹಿತನಿಂದ 14 ಲಕ್ಷ ಕಳೆದುಕೊಂಡ ಉಡುಪಿಯ ಯುವತಿಯ ಗೋಳು ಮಧ್ಯಮದಲ್ಲಿ 2 ದಿನಗಳ ಹಿಂದೆ ಪ್ರಕಟವಾಗಿದೆ. ಇದೇ ರೀತಿಯ ಅನೇಕ ನಂಬಿಕೆ ದ್ರೋಹದ ಬಲೆಗೆ ಬಿದ್ದ ಮಹಿಳೆಯರ ಕಥೆಯೂ ವರದಿಯಾಗಿದೆ. ಇದು "ಹಗಲು ಕಂಡ ಬಾವಿಗೆ ಇರುಳಲ್ಲಿ ಬಿದ್ರು" ಅನ್ನೋ ಗಾದೆ ಮಾತನ್ನು ನೆನಪಿಸುತ್ತೆ. ಸ್ನೇಹಿತರಿಗೆ ಸಹಾಯ ಮಾಡೋದು ತಪ್ಪಲ್ಲ. ಆದ್ರೆ, ಗುರುತು-ಪರಿಚಯ ಇಲ್ಲದ, ಮುಖ-ಮೂತಿ ನೋಡದ, ಹಿಂದೆ-ಮುಂದೆ ಗೊತ್ತಿಲ್ಲದ, ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯಾರೋ ಅಪರಿಚಿತನನ್ನು ನಂಬೋದು Very Danger. ನಿಜವಾದ ಸ್ನೇಹಿತರಿಗೆ 100/-, 200/-, 1,000/- OK., ವಾಪಾಸ್ ಬರದಿದ್ರೂ ಅಡ್ಡಿ ಇಲ್ಲ, "ಹೋದ್ರೆ ಹೋಗ್ಲಿ" ಅಂತ ನಿರೀಕ್ಷೆ ಇಟ್ಟು ಕೊಳ್ಳದೇ ಕೊಡ್ಬೇಕು. ಆದ್ರೆ, ಈ ರೀತಿ ಪದೇ ಪದೇ ಸಹಾಯ ಕೇಳೋ ಖದೀಮನ ನಿಜ ರೂಪ ಅರ್ಥ ಮಾಡಿಕೊಳ್ಳದೇ ಇದ್ದದ್ದು ದೊಡ್ಡ ತಪ್ಪು. ಯಾವಾಗ ಆತ ದೊಡ್ಡ ಮೊತ್ತಕ್ಕೆ Demand ಇಟ್ಟು, ಕೊಡದಿದ್ದಾಗ ಜೀವ ಬೆದರಿಕೆ ಹಾಕಿದ್ನಲ್ಲ, ಆಗಲಾದ್ರೂ Police ಕಂಪ್ಲೇಂಟ್ ಕೊಡಬೇಕಿತ್ತು. ಅದಾಗಲೇ 14 ಲಕ್ಷ ಕೊಟ್ಟು, ಮೋಸಕ್ಕೆ ಒಳಗಾಗಿ ಈಗ ಬೊಬ್ಬೆ ಹೊಡೆಯೋದು ಜಾಣತನವಲ್ಲ. ಕಂಪ್ಲೇಂಟ್ ನಿಂದಾಗೋ ರಂಪ-ರಾಮಾಯಣ ಇಷ್ಟ ಇಲ್ದಿದ್ರೆ, ಹೆತ್ತವರ ಯಾ ಸ್ನೇಹಿತರ ಗಮನಕ್ಕಾದ್ರೂ ತಂದು ಬಚಾವಾಗಬಹುದಿತ್ತಲ್ಲ? ಈಗ "ಮಾಡಿದುಣ್ಣೋ ಮಹಾರಾಯ"ಎನ್ನೋ ಗಾದೆ ನೆನಪಿಗೆ ಬರ್ತಾ ಇದೆ. ಜಗತ್ತು ನಾವೆಂದು ಕೊಂಡಂತಿಲ್ಲ.
ಸುಂದರವಾದ ಜಗತ್ತಿನಲ್ಲಿ ಒಳ್ಳೆಯವರಿಗಿಂತ ಕೆಟ್ಟವರೇ ಜಾಸ್ತಿ ತುಂಬಿ ಕೊಂಡಿದ್ದಾರೆ. ಮೋಸವೇ ಅವ್ರ ಮನೆದೇವ್ರು. ಯಾರ ತಲೆ ಮೇಲೆ ಕಾಲಿಡ್ಲಿ? ಯಾರ ಕಿಸೆಗೆ ಕೈಹಾಕ್ಲಿ? ಯಾರ ಮನೆಗೆ ಕಲ್ ಹಾಕ್ಲಿ, ಅಂತ ಯೋಚಿಸೋರೇ ಜಾಸ್ತಿ. ಹಾಗಾಗಿ ನಾವೆಲ್ಲರೂ ತುಂಬಾ ಎಚ್ಚರಿಕೆಯಿಂದಿರಬೇಕು. ಅದ್ರಲ್ಲೂ ಮಹಿಳೆಯರು ಇನ್ನೂ ಜಾಸ್ತಿ Alert ಆಗಿರಬೇಕು. ಪ್ರತಿನಿತ್ಯ ವರದಿಯಾಗೋ ಹೆಚ್ಚಿನ SCAM ಗಳಲ್ಲಿ ಮಹಿಳೆಯರೇ ಬಲಿಪಶುಗಳು. ಈಗೀಗ ಪುರುಷರಿಗಿಂತ ಮಹಿಳೆಯರೇ ಹೆಚ್ಚೆಚ್ಚು ಮೋಸಕ್ಕೆ ಬಲಿಯಾಗೋದು ಏಕೆಂದ್ರೆ, ಅವ್ರು ಎಲ್ಲರನ್ನೂ ಬಹು ಬೇಗ ನಂಬುತ್ತಾರೆ, ಕೂಡಲೇ ಕ್ಷಮಿಸುತ್ತಾರೆ, ಅನ್ಯಾಯವಾದ್ರೂ ಯಾರಿಗೂ ಹೇಳಿಕೊಳ್ಳದೇ ಗುಟ್ಟು ಮಾಡಿ ಕಷ್ಟವನ್ನು ಸಹಿಸಿಕೊಳ್ತಾರೆ. ಇಂತಹ ಒಳ್ಳೆಯ ಗುಣವುಳ್ಳ ಅಮಾಯಕ ಮಹಿಳೆಯರೇ ಖದೀಮರ "MAIN TARGET." ಹಾಗಾಗಿ ಇಂತಹ ಕೆಲವು ಒಳ್ಳೇ ಗುಣಗಳನ್ನು ಮಹಿಳೆಯರು ಸ್ವಲ್ಪ ಕಡಿಮೆ ಮಾಡ್ಕೊಂಡ್ರೆ ಅವ್ರಿಗೇ ಒಳ್ಳೇದು. ಏನಂತೀರಿ?
✍️ 🙏
ನಂದಾ ಕುಂದಾಪುರ
ಆರೋಗ್ಯ & ಜೀವವಿಮಾ ಸಲಹೆಗಾರರು