Bengaluru : ಕರ್ನಾಟಕ ಜಾಹಿರಾತು ನೀತಿ -2026 ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆದೇಶ ಸರ್ಕಾರದ ಅಧಿಕೃತ ಆದೇಶ ಪ್ರತಿ ಅಲ್ಲವೇ ಅಲ್ಲ,
Friday, March 20, 2026
ಬೆಂಗಳೂರು:-ಕಳೆದ ಎರಡು ಮೂರು ದಿನಗಳಿಂದ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕರ್ನಾಟಕ ಜಾಹಿರಾತು ನೀತಿ -2026 ಆದೇಶದ ಪ್ರತಿ ಅಧಿಕೃತವಲ್ಲ. ಸರ್ಕಾರದ ಆದೇಶ ಸಂಖ್ಯೆ ಒಳಗೊಂಡು ವಾರ್ತಾ ಇಲಾಖೆಯಿಂದ ಬಿಡುಗಡೆಯಾಗಿದ್ದರೆ ಅದು ಅಧಿಕೃತವಾಗುತ್ತಿತ್ತು. ಇನ್ನೂ ಕೆಲ ಮಾರ್ಪಾಟಿನೊಂದಿಗೆ ಮುಂದಿನ ತಿಂಗಳು ಸರ್ಕಾರ ಹಾಗೂ ವಾರ್ತಾ ಇಲಾಖೆಯಿಂದ ಅಧಿಕೃತವಾಗಿ ಆದೇಶ ಪ್ರಕಟವಾಗಲಿದೆ.ಈ ಕುರಿತು ಕಾನಿಪ ಧ್ವನಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ನಾದ ನನಗೂ ಈ ಕುರಿತು ಜಾಲತಾಣದಲ್ಲಿ ಮಾಹಿತಿ ಬಂದ ನಂತರ ಆ ಆದೇಶದ ಪ್ರತಿಗಳನ್ನು ಡೌನ್ ಲೋಡ್ ಮಾಡಿಕೊಂಡು ಇಂದು ಸಂಜೆ 4.30 ಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಛೇರಿಗೆ ತೆರಳಿ ಕೆಲ ಪ್ರಮುಖ ಅಧಿಕಾರಿಗಳನ್ನು ಈ ಕುರಿತು ಪ್ರತಿಗಳನ್ನು ತೋರಿಸಿದಾಗ,ಇದು ಅಧಿಕೃತವಲ್ಲ ನಮ್ಮ ಇಲಾಖೆಗೆ ಇನ್ನೂ ಮಾಹಿತಿ ಲಭ್ಯವಿಲ್ಲ ಆದಷ್ಟು ಶೀಘ್ರ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಮಾಹಿತಿ ನೀಡಿದರು.
*ಮಾಧ್ಯಮ ಮಾನ್ಯತಾ (Accridation card) ಪತ್ರ ನೀಡುವಿಕೆಯಲ್ಲೂ ಮೀಸಲಾತಿ ಬರುವಂತೆ ತಿದ್ದುಪಡಿ ಮಾಡಿ ಪತ್ರಕರ್ತರಿಗೆ ನ್ಯಾಯ ಒದಗಿಸಲು ವಾರ್ತಾ ಇಲಾಖೆ ಹಾಗೂ ಸರ್ಕಾರಕ್ಕೆ ಕಾನಿಪ ಧ್ವನಿಯಿಂದ ಒತ್ತಾಯ* :- ವಾರ್ತಾ ಇಲಾಖೆ ನೀಡುವ ಮಾಧ್ಯಮ ಮಾನ್ಯತಾ ಪತ್ರವು ನಿಜವಾಗಿ ಸೇವೆ ಸಲ್ಲಿಸುವಂತ ಪತ್ರಕರ್ತರಿಗೆ ಅನ್ಯಾಯ ವಾಗುತ್ತಲಿದ್ದು,ಹೆಚ್ಚಿನ ಅಕ್ರಿಡೇಷನ್ ಕಾರ್ಡ್ಗಳು ಪತ್ರಿಕೆಯ ಸಂಪಾದಕರು/ಮಾಲಿಕರು ಪಡೆಯುತ್ತಲಿದ್ದು ಇದಕ್ಕೆ ನಮ್ಮ ತಕರಾರು ಏನಿಲ್ಲ ಆದರೆ ಸಂಪಾದಕರು ಪಡೆಯುವುದರ ಜೊತೆಗೆ ಸಂಪಾದಕರ ಮಡದಿ ಅವರ ಮಕ್ಕಳು,ಅಳಿಯಂದಿರು ಹಾಗೂ ಸೊಸೆಯಂದಿರು ಪಡೆಯುತ್ತಿರುವುದು ನೋವಿನ ಸಂಗತಿ. ಈ ಕುರಿತಂತೆ ವಾರ್ತಾ ಇಲಾಖೆಯು ಕೆಲ ತಿದ್ದು ಪಡಿಗಳನ್ನು ಮಾಡಿ ಆ ಪತ್ರಿಕೆಯ ಪ್ರಮುಖರೊಬ್ಬರಿಗೆ ಒದಗಿಸಿ ಉಳಿದಂತ ಮಾಧ್ಯಮ ಮಾನ್ಯತಾ ಪತ್ರವನ್ನು ನಿಜವಾಗಿ ಸೇವೆ ಸಲ್ಲಿಸುವುದರ ಜೊತೆಗೆ ಖಾಯಂ ನೇಮಕಾತಿ ಆದೇಶ ಜೊತೆಗೆ ಕಾರ್ಮಿಕ ಕಾನೂನು ಸವಲತ್ತು ಪಡೆಯುವ ಪತ್ರಕರ್ತರಿಗೆ ವಾರ್ತಾ ಇಲಾಖೆಯು ನೀಡಬೇಕು ಜೊತೆಗೆ ಕರ್ನಾಟಕ ಜಾಹಿರಾತು ನೀತಿಯಲ್ಲಿ ಅಳವಡಿಸಲು ಮುಂದಾಗಿರುವ ರೀತಿಯಲ್ಲೇ ಮೀಸಲಾತಿಯನ್ನು ಮಾಧ್ಯಮ ಮಾನ್ಯತಾ ಪತ್ರಕ್ಕೂ ಅಳವಡಿಸಿದರೆ ನ್ಯಾಯ ಒದಗ ಬಹುದು ಎಂಬ ಆಶಯದೊಂದಿಗೆ.